ಪಣಜಿ[ಫೆ.26]: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ರಕ್ತ ವಾಂತಿ ಮಾಡಿದ್ದಾರೆ. ಸದ್ಯ ಆರೋಗ್ಯ ತಪಾಸಣೆ ಮಾಡಿರುವ ವೈದ್ಯರು ಎದೆಯಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ ಎಂದಿದ್ದಾರೆ. ಈ ಮಾಹಿತಿಯನ್ನು ಖಚಿತಪಡಿಸಿರುವ ರಾಜ್ಯ ಸರ್ಕಾರದ ವಕ್ತಾರ ಪ್ರಮೋದ್ ಸಾವಂತ್ 'ನಾನು ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹಾಗೂ ಡಾ. ಗರ್ಗ್ ರನ್ನು ಭೇಟಿಯಾದೆ. ಸಿಎಂ ಆರೋಗ್ಯ ಸ್ಥಿತಿ ಸ್ಥಿರವಾಗಿದೆ, ಯಾವುದೇ ಸೋಂಕು ಕಂಡು ಬಂದಿಲ್ಲ. ಆದರೆ ರಕ್ತ ವಾಂತಿ ಮಾಡುತ್ತಿದ್ದಾರೆ' ಎಂದಿದ್ದಾರೆ.

ಇತ್ತೀಚೆಗಷ್ಟೇ ರಾಜ್ಯ ಆರೋಗ್ಯ ಸಚಿವ ವಿಶ್ವಜೀತ್ ರಾಣೆ ಕೂಡಾ ಗೋವಾ ಮೆಡಿಕಲ್ ಕಾಲೇಜಿನಲ್ಲಿ ಭರ್ತಿಯಾಗಿರುವ ಸಿಎಂ ಮನೋಹರ್ ಪರ್ರಿಕರ್ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದರು. 'ನಾನು ಕೆಲ ಸಮಯ ಮುಖ್ಯಮಂತ್ರಿಯೊಂದಿಗಿದ್ದೆ. ಅವರು ಇಂದು ಮನೆಗೆ ಹೋಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಇನ್ನೂ ಒಂದು ದಿನ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಮನವಿ ಮಾಡಿದ್ದೇನೆ' ಎಂದಿದ್ದರು.

ಅತ್ತ ಕಾಂಗ್ರೆಸ್ ಸಿಎಂ ಪರ್ರಿಕರ್ ಆರೋಗ್ಯ ಸಂಬಂಧ ವದಂತಿ ಹಾಗೂ ಗೊಂದಲಗಳು ಉಂಟಾಗಿವೆ. ಹೀಗಾಗಿ ಇದೆಲ್ಲಕ್ಕೂ ಸುದ್ದಿಗೋಷ್ಟಿ ನಡೆಸಿ ಮುಖ್ಯಮಂತ್ರಿಗಳ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿ ಇವೆಲ್ಲಕ್ಕೂ ಪೂರ್ಣ ವಿರಾಮವಿಡಬೇಕು ಎಂದಿದೆ.