ಭಾರತ-ಪಾಕ್ ನಡುವೆ ಯುದ್ಧ ಎಂದ ಪಾಕ್ ಸಚಿವನಿಗೆ ಕರೆಂಟ್ ಶಾಕ್/ ಭಾಷಣ ಮಾಡುತ್ತಲೇ ಶಾಕ್ ಹೊಡೆಸಿಕೊಂಡ ಸಚಿವ/ ಚೇತರಿಸಿಕೊಂಡು ಮತ್ತೆ ಮಾತು ಮುಂದುವರಿಸಿದ ಪಾಕ್ ರೈಲ್ವೆ ಮಂತ್ರಿ

ನವದೆಹಲಿ[ಆ. 30] ಇದು ಅಕ್ಷರಶಃ ಶಾಕ್ ಹೊಡೆದ ಘಟನೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಿದ್ದ ಪಾಕಿಸ್ತಾನ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಗೆ ವಿದ್ಯುತ್ ಶಾಕ್ ಹೊಡೆದಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನರೇಂದ್ರ ಮೋದಿ ಉದ್ದೇಶ ನಮಗೆ ಗೊತ್ತಿದೆ ಎಂದು ವಾಗ್ದಾಳಿ ಮಾಡಲು ಆರಂಭಿಸಿ ತಕ್ಷಣವೇ ಶಾಕ್ ಹೊಡೆದಿದೆ. ಆದರೂ ಚೇತರಿಸಿಕೊಂಡಿದ್ದು ಮಾತನಾಡಿ, ನರೇಂದ್ರ ಮೋದಿ ಈ ಸಭೆಯನ್ನು ವಿಫಲಗೊಳಿಸಲು ಸಾಧ್ಯವಿಲ್ಲ ಎಂದರು.

ಬ್ಯಾಂಕ್‌ಗಳ ವಿಲೀನ, ಡಿಕೆಶಿಗೆ ED ಕುಣಿಕೆ: ಇಲ್ಲಿವೆ ಆ. 30ರ ಟಾಪ್ ಸುದ್ದಿಗಳು

ಮುಂದಿನ ತಿಂಗಳು ಅಥವಾ ಅಕ್ಟೋಬರ್ ತಿಂಗಳಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಪೂರ್ಣ ಪ್ರಮಾಣದಲ್ಲಿ ಯುದ್ಧ ನಡೆಯಲಿದೆ ಎಂಬ ಹೇಳಿಕೆ ನೀಡಿ ಸುದ್ದಿ ಮಾಡಿದ್ದ ಸಚಿವನ ಮೇಲೆ ವಿದ್ಯುತ್ ಸಹ ಮುನಿಸಿಕೊಂಡಿದೆ.