ಕರ್ತಾರ್‌ಪುರ ಉದ್ಘಾಟನೆಗೆ ಸಿಂಗ್‌ಗೆ ಇಮ್ರಾನ್‌ ಅಧಿಕೃತ ಆಹ್ವಾನ!

ಕರ್ತಾರ್‌ಪುರ ಉದ್ಘಾಟನೆಗೆ ಮಾಜಿ ಪ್ರಧಾನಿ ಡಾ. ಸಿಂಗ್‌ಗೆ ಇಮ್ರಾನ್‌ ಅಧಿಕೃತ ಆಹ್ವಾನ| ನ.9ರಂದು ಉದ್ಘಾಟನಾ ಕಾರ್ಯಕ್ರಮ ಆಯೋಜನೆ

Pak PM Imran Khan formally invites Manmohan Singh for Kartarpur Corridor opening

ಇಸ್ಲಾಮಾಬಾದ್‌[ಅ.11]: ಪಾಕಿಸ್ತಾನದಲ್ಲಿರುವ ಕರ್ತಾರ್‌ಪುರ ಸಾಹಿಬ್‌ ಗುರುದ್ವಾರಕ್ಕೆ ಭಾರತೀಯರಿಗೆ ನೇರ ಪ್ರವೇಶ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಗೆ ಭಾರತದ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಮೂಲಕ ಸರ್ಕಾರಿ ಕಾರ್ಯಕ್ರಮವೊಂದಕ್ಕೆ ಮತ್ತೊಂದು ರಾಷ್ಟ್ರದ ಆಡಳಿತದಲ್ಲಿರುವವರನ್ನೇ ಆಹ್ವಾನಿಸಬೇಕೆಂಬ ಶಿಷ್ಟಾಚಾರ ಉಲ್ಲಂಘಿಸಿರುವ ಪಾಕಿಸ್ತಾನ ತನ್ನ ಕೀಳು ರಾಜಕೀಯವನ್ನು ಮುನ್ನೆಲೆಗೆ ತಂದಿದೆ.

ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ: ಪಾಕ್ ಆಹ್ವಾನ ತಿರಸ್ಕರಿಸಿದ ಸಿಂಗ್!

ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಯನ್ನು ಸಿಖ್‌ ಧರ್ಮಗುರು ಬಾಬಾ ನಾನಕ್‌ ಅವರ 550ನೇ ಜಯಂತ್ಯೋತ್ಸವವಾದ ನ.12ಕ್ಕೆ ನಿಗದಿಯಾಗಿದೆ. ನ.9ರಂದು ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಡಾ. ಸಿಂಗ್‌ ಭಾಗವಹಿಸುತ್ತಾರೆಯೇ ಎಂಬುದರ ಬಗ್ಗೆ ಖಾತ್ರಿಯಾಗಿಲ್ಲ.

ಈ ಬಗ್ಗೆ ಗುರುವಾರ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ವಕ್ತಾರ, ಕರ್ತಾರ್‌ಪುರ ಕಾರಿಡಾರ್‌ ಉದ್ಘಾಟನೆಯ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆಶಯದಂತೆ ನಿಗದಿಯಾದ ದಿನವೇ ನೆರವೇರಲಿದ್ದು, ಭಾರತದ ಮಾಜಿ ಪ್ರಧಾನಿ ಡಾ. ಸಿಂಗ್‌ ಅವರಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿಸಿದರು.

ಪಾಕಿಸ್ತಾನದಿಂದ ಕರ್ತಾರ್‌ಪುರ ಗುರುದ್ವಾರಕ್ಕೆ 42 ಎಕರೆ ಭೂಮಿ

Latest Videos
Follow Us:
Download App:
  • android
  • ios