Asianet Suvarna News Asianet Suvarna News

ಹೆಂಡತಿಯ ಖಾಸಗಿ ವಿಡಿಯೋವನ್ನು ಗಂಡನೇ ಸೋಶಿಯಲ್ ಮೀಡಿಯಾಕ್ಕೆ ಹಾಕಿದ

ವರದಕ್ಷಿಣೆಗಾಗಿ ಎಂತೆಂಥ ಕೆಲಸ ಮಾಡಿಬಿಡುತ್ತಾರೆ. ಒರಿಸ್ಸಾದಿಂದ ವರದಿಯಾಗಿರುವ ಪ್ರಕರಣ ಹಲವಾರು ಪ್ರಶ್ನೆಗಳನ್ನು ನಮ್ಮ ಮುಂದೆ ಎತ್ತಿಟ್ಟಿದೆ. ಗಂಡನೇ ಹೆಂಡತಿಯ ಅಶ್ಲೀಲ ವಿಡಿಯೋ ಮತ್ತು ಪೋಟೋವನ್ನು ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದಾನೆ.

Odisha Man Uploads Wifes Obscene Videos On Social Media For More Dowry
Author
Bengaluru, First Published Jul 23, 2019, 11:28 PM IST
  • Facebook
  • Twitter
  • Whatsapp

ನಯಾಗಢ[ಜು. 23] ಗಂಡನೇ ನನ್ನ ಅಶ್ಲೀಲ ವಿಡಯೋ ಮತ್ತು ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾನೆ. ಹೆಚ್ಚಿನ ವರದಕ್ಷಿಣೆ ತರುವಂತೆ ಪೀಡಿಸಲು ಹೀಗೆ ಮಾಡಿದ್ದಾನೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ.

ನುವಾಗೋನ ಪೊಲೀಸ್ ಠಾಣೆಗೆ ದೂರು ನೀಡಿರುವ ಮಹಿಳೆ ನನ್ನ ಮೈದುನರು ವರದಕ್ಷಿಣೆ ತರುವಂತೆ ಪೀಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. 205 ಲಕ್ಷ ರೂ. ಹಣವನ್ನು ವರದಕ್ಷಿಣೆ ಹೆಸರಿನಲ್ಲಿ ಈಗಾಗಲೇ ನೀಡಿದ್ದರೂ ಕಿರುಕುಳ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ.

ಬ್ಯಾಟ್-ಬಾಲ್ ಹಿಡಿದು ಕಣಕ್ಕಿಳಿದ ಶೆರ್ಲಿನ್ ಹಚ್ಚಿದ ಕಿಚ್ಚು! ವಿಡಿಯೋ ವೈರಲ್

ಮಹಿಳೆ 2017 ರಲ್ಲಿ ನಳಿನಿ ಪ್ರಧಾನ್ ಎಂಬುವರನ್ನು ಮದುವೆಯಾಗಿದ್ದರು. ಮದುವೆಯಾದ ಒಂದು ತಿಂಗಳ ನಂತರ ವರದಕ್ಷಿಣೆ ಕಿರುಕುಳ ಆರಂಭವಾಯಿತು. ವರದಕ್ಷಿಣೆ ಕಿರುಕುಳ ನೀಡುತ್ತಿದ್ದವನ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

 

Follow Us:
Download App:
  • android
  • ios