ನೀರವ್ ಮೋದಿ ಬಳಿಯಿದೆ 6 ಭಾರತೀಯ ಪಾಸ್‌ಪೋರ್ಟ್!

Nirav Modi holds six Indian passports: FIR soon
Highlights

ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ವಿದೇಶ ಸೇರಿರುವವರು ಭಾರತದದ್ದೇ ಪಾಸ್ ಪೋರ್ಟ್ ಬಳಸಿ ದೇಶದಿಂದ ದೇಶ ಸುತ್ತುತ್ತಿದ್ದಾರೆ.  ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13000 ಕೋಟಿ ರೂ.ವಂಚಿಸಿರುವ ನೀರವ್ ಮೋದಿ ಬಳಿ ಭಾರತದ 6 ಪಾಸ್ ಪೋರ್ಟ್ ಇದೆಯಂತೆ!

ನವದೆಹಲಿ [ಜೂನ್ 18  ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ವಿದೇಶ ಸೇರಿರುವವರು ಭಾರತದದ್ದೇ ಪಾಸ್ ಪೋರ್ಟ್ ಬಳಸಿ ದೇಶದಿಂದ ದೇಶ ಸುತ್ತುತ್ತಿದ್ದಾರೆ.  

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13000 ಕೋಟಿ ರೂ.ವಂಚಿಸಿರುವ ನೀರವ್ ಮೋದಿ ಹಲವು ಪಾಸ್ ಪೋರ್ಟ್ ಗಳ ಸಹಾಯದಿಂದ ವಿವಿಧ ದೇಶಗಳನ್ನು ಸುತ್ತುತ್ತಿದ್ದಾನೆ. ಅಲ್ಲದೇ ಬಹುಕೋಟಿ ವಂಚನೆಯ ಪಿಎನ್‌ಬಿ ಹಗರಣಕ್ಕೆ ಸಂಬಂಧಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ನೀರವ್‌ ಮೋದಿ 6 ಪಾಸ್‌ಪೋರ್ಟ್‌ಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ.

ಮಲ್ಯ, ನೀಮೋ ಮಾತ್ರವಲ್ಲ : 31 ವಂಚಕರ ಪಲಾಯನ!

ಭಾರತ ಸರ್ಕಾರ ತನ್ನ ಪಾಸ್‌ಪೋರ್ಟ್‌ ರದ್ದುಪಡಿಸಿದ್ದರೂ, ಅದನ್ನು ಬಳಸಿಕೊಂಡೇ ಹಲವು ದೇಶಗಳ ನಡುವೆ ಸುತ್ತಾಡಿದ ಹಿನ್ನೆಲೆಯಲ್ಲಿ ನೀರವ್ ಮೋದಿ ವಿರುದ್ಧ ಹೊಸದಾಗಿ ಕೇಸು ದಾಖಲಿಸಲಾಗಿದೆ.

ಸದ್ಯ ನೀರವ್ ಮೋದಿ ಬಳಿ ಇರುವ 6 ಪಾಸ್‌ಪೋರ್ಟ್‌ಗಳ ಪೈಕಿ 2 ಸಕ್ರಿಯವಾಗಿದ್ದು, ಇನ್ನು 4 ಪಾಸ್‌ಪೋರ್ಟ್‌ಗಳ ಸ್ಥಿತಿಗತಿ ಕುರಿತು ಮಾಹಿತಿ ಲಭ್ಯವಾಗಿಲ್ಲ. ಸಕ್ರಿಯವಾಗಿರುವ ಒಂದು ವೀಸಾದಲ್ಲಿ ಅವರ ಅರ್ಧ ಹೆಸರು ಬಳಸಲಾಗಿದ್ದು, ಅದರ ಮೂಲಕ ಯುಕೆಯಲ್ಲಿ 40 ತಿಂಗಳ ವೀಸಾ ಪಡೆಯಲಾಗಿದೆ.

ಮೊದಲ ಪಾಸ್‌ಪೋರ್ಟ್‌ ರದ್ದಾಗಿದ್ದರೂ, ಎರಡನೇ ಪಾಸ್‌ಪೋರ್ಟ್‌ ಬಳಸಿ ವಿವಿಧ ದೇಶಗಳಿಗೆ ಸುತ್ತಾಡುತ್ತಿರುವುದು ತಿಳಿದು ಬಂದಿದೆ. ಎರಡನೇ ಪಾಸ್‌ಪೋರ್ಟ್‌ ಕೂಡ ರದ್ದಾಗಿದ್ದು ಇಂಟರ್‌ಪೋಲ್‌ಗೆ ಮಾಹಿತಿ ನೀಡಲಾಗಿತ್ತಾದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕ ವ್ಯವಸ್ಥೆ ಜಾರಿಯಲ್ಲಿಲ್ಲದಿರುವುದರಿಂದ, ಕಾನೂನಿನ ಲೋಪಗಳನ್ನು ಬಳಸಿಕೊಂಡು ದೇಶದಿಂದ ದೇಶಕ್ಕೆ ವಿಮಾನದಲ್ಲಿ ನೀರವ್ ಹಾರುತ್ತಿದ್ದು ಹಡಗಿನಲ್ಲೂ ಪ್ರಯಾಣಿಸಿದ ಸಾಧ್ಯತೆಯಿದೆ ಎನ್ನಲಾಗಿದೆ.

loader