ಮಲ್ಯ, ನೀಮೋ ಮಾತ್ರವಲ್ಲ : 31 ವಂಚಕರ ಪಲಾಯನ!

PNB scam After 31 top Defaulters flee
Highlights

ಉದ್ಯಮಿಗಳಾದ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ಭಾರತದ ಬ್ಯಾಂಕ್‌ಗಳಿಗೆ ಸಾಲ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವುದು ದೊಡ್ಡ ಮಟ್ಟದ ಚರ್ಚೆ ಚಾಲ್ತಿಯಲ್ಲಿದೆ. ಆದರೆ, ಇದೇ ವೇಳೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಒಟ್ಟು 31 ಶಂಕಿತ ಆರ್ಥಿಕ ಅಪರಾಧಿಗಳು ದೇಶಬಿಟ್ಟು ಪರಾರಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ.

ನವದೆಹಲಿ : ಉದ್ಯಮಿಗಳಾದ ವಿಜಯ್‌ ಮಲ್ಯ ಮತ್ತು ನೀರವ್‌ ಮೋದಿ ಭಾರತದ ಬ್ಯಾಂಕ್‌ಗಳಿಗೆ ಸಾಲ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವುದು ದೊಡ್ಡ ಮಟ್ಟದ ಚರ್ಚೆ ಚಾಲ್ತಿಯಲ್ಲಿದೆ. ಆದರೆ, ಇದೇ ವೇಳೆ ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತು ಸಿಬಿಐ ವಿಚಾರಣೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಒಟ್ಟು 31 ಶಂಕಿತ ಆರ್ಥಿಕ ಅಪರಾಧಿಗಳು ದೇಶಬಿಟ್ಟು ಪರಾರಿಯಾಗಿದ್ದಾರೆ ಎಂಬುದು ಬಹಿರಂಗವಾಗಿದೆ.

ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ಎಂ.ಜೆ. ಅಕ್ಬರ್‌ ಲಿಖಿತ ಪ್ರತಿಕ್ರಿಯೆಯೊಂದರಲ್ಲಿ ಲೋಕಸಭೆಗೆ ಈ ಮಾಹಿತಿ ನೀಡಿದ್ದು, ವಿಚಾರಣೆಯಿಂದ ತಪ್ಪಿಸಿಕೊಳ್ಳಲು ದೇಶಬಿಟ್ಟು ಪರಾರಿಯಾದ 31 ಶಂಕಿತ ಅಪರಾಧಿಗಳ ಹೆಸರು ಬಿಡುಗಡೆಗೊಳಿಸಿದ್ದಾರೆ. ಹಗರಣಗಳನ್ನು ನಡೆಸಿ, ಇನ್ನೂ ಹೆಚ್ಚಿನ ಉದ್ಯಮಿಗಳು ದೇಶಬಿಟ್ಟು ಪರಾರಿಯಾಗಿದ್ದಾರೆಯೇ? ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.

ನೀರವ್‌ ಮೋದಿ ಹಾಗೂ ಅವರ ಪತ್ನಿ ಆಮಿ ನೀರವ್‌ ಮೋದಿ, ಮಗ ನೀಶಾಲ್‌ ಮೋದಿ, ಮಾವ ಮೇಹುಲ್‌ ಚೋಕ್ಸಿ, ಮದ್ಯದೊರೆ ವಿಜಯ್‌ ಮಲ್ಯ, ಐಪಿಎಲ್‌ ಹಗರಣ ಆರೋಪಿ ಲಲಿತ್‌ ಮೋದಿ, ಶಸ್ತ್ರಾಸ್ತ್ರ ಡೀಲರ್‌ ಸಂಜಯ್‌ ಭಂಡಾರಿ ಮುಂತಾದವರೂ ಪಟ್ಟಿಯಲ್ಲಿದ್ದಾರೆ.

ಉದ್ಯಮಿಗಳಾದ ಆಶಿಷ್‌ ಜೋಬನ್‌ಪುತ್ರ, ಪುಷ್ಪೇಶ್‌ ಕುಮಾರ್‌ ಬೈದ್‌, ಸಂಜಯ್‌ ಕಾಲ್ರಾ, ವರ್ಷಾ ಕಾಲ್ರಾ, ಆರತಿ ಕಾಲ್ರಾ ಮುಂತಾದವರನ್ನೂ ದೇಶಕ್ಕೆ ಹಿಂದಕ್ಕೆ ಕರೆಸಿಕೊಳ್ಳಲು ಸಿಬಿಐ ಪಟ್ಟಿಸಲ್ಲಿಸಿದೆ. ಎಲ್ಲ ಆರೋಪಿಗಳನ್ನೂ ದೇಶಕ್ಕೆ ಹಿಂದಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸಂಬಂಧಿತ ಆರೋಪಿಗಳು ಇರುವ ದೇಶಗಳ ಆಡಳಿತದೊಂದಿಗೆ ಈ ಕುರಿತು ಮನವಿಗಳನ್ನು ಮಾಡಲಾಗಿದೆ. ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಅಕ್ಬರ್‌ ಹೇಳಿದ್ದಾರೆ.

ಪಟ್ಟಿಯಲ್ಲಿರುವರು:

ಸೌಮಿತ್‌ ಜೇನಾ, ವಿಜಯ್‌ ಕುಮಾರ್‌ ರೇವಾಭಾಯಿ ಪಟೇಲ್‌, ಸುನಿಲ್‌ ರಮೇಶ್‌ ರುಪಾನಿ, ಸುರೇಂದರ್‌ ಸಿಂಗ್‌, ಅಂಗದ್‌ ಸಿಂಗ್‌, ಹರ್‌ಸಾಹಿಬ್‌ ಸಿಂಗ್‌, ಹರ್ಲೀನ್‌ ಕೌರ್‌, ಜತಿನ್‌ ಮೆಹ್ತಾ, ಚೇತನ್‌ ಜಯಂತಿಲಾಲ್‌ ಸಂದೇಸಾರಾ, ದೀಪ್ತಿ ಚೇತನ್‌ ಸಂದೇಸಾರಾ, ನಿತಿನ್‌ ಜಯಂತಿಲಾಲ್‌ ಸಂದೇಸಾರಾ, ಸಭ್ಯಸೇಠ್‌ ನೀಲೇಶ್‌ ಪಾರೇಖ್‌, ಉಮೇಶ್‌ ಪಾರೇಖ್‌, ಸನ್ನಿ ಕಾಲ್ರಾ, ಹೇಮಂತ್‌ ಗಾಂಧಿ, ಈಶ್ವರ್‌ಭಾಯಿ ಭಟ್‌, ಎಂ.ಜಿ. ಚಂದ್ರಶೇಖರ್‌, ಚೆರಿಯ ವನ್ನಾರಕ್ಕಲ್‌ ಸುದೀರ್‌, ನೌಷಾ ಕದೀಜತ್‌, ಚೆರಿಯ ವೀಟಿಲ್‌ ಸಾದಿಕ್‌.

loader