ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ/ ತಡರಾತ್ರಿ ಕುಮಾರಸ್ವಾಮಿ ಕೊಟ್ಟ ಬ್ರೆಕಿಂಗ್/ ಒಳ್ಳೆ ಹುಡುಗಿ ಹುಡುಕುತ್ತಿದ್ದೇವು

ಭಾನುವಾರ ಇಡೀ ಸುದ್ದಿ ಮಾಧ್ಯಮಗಳಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ವಿಚಾರ ದೊಡ್ಡ ಚರ್ಚೆಯಾಗಿತ್ತು. ಇದೀಗ ಅಂತಿಮವಾಗಿ ತಂದೆ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ಒಂದನ್ನು ನೀಡಿದ್ದಾರೆ.

ನಿಖಿಲ್ ಗೆ ಮದುವೆ ಮಾಡಬೇಕಾದ ಸಮಯ ಬಂದಿದೆ. ಮಾತುಕತೆ ಹಂತದಲ್ಲಿದೆ ಸದ್ಯದಲ್ಲೇ ಎಲ್ಲವನ್ನು ಹೇಳುತ್ತೇವೆ. ಕೃಷ್ಣಪ್ಪ ಅವರ ಮನೆಗೆ ಹೋಗಿದ್ದು, ನಮ್ಮದು ಅವರದ್ದು  ತುಂಬಾ ಹಳೆಯ ಆತ್ಮೀಯ ಸಂಬಂಧ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ನಾಯಕನ ಮಗಳ ಜತೆ ನಿಖಿಲ್ ಮದುವೆ

ಬಹಳ ದಿನಗಳಿಂದ ಕುಟುಂಬದಲ್ಲಿ ನಿಖಿಲ್ ಗೆ ಮದುವೆ ಮಾಡಬೇಕು ಅಂತ ಚರ್ಚೆ ನಡೀತಾ ಇತ್ತು. ಉತ್ತಮವಾದ ಸಂಸ್ಕೃತಿ ಇರುವಂತಹ, ಉತ್ತಮ ಕುಟುಂಬದ ಹೆಣ್ಣು ಮಗಳನ್ನ ಹುಡುಕುತ್ತಾ ಇದ್ದೇವು. ನಮ್ಮ ನಿರೀಕ್ಷೆಯಂತೇ  ದೇವರ ಸಹಕಾರ ಕೊಟ್ಟಿದ್ದಾರೆ. ಅದೇ ರೀತಿಯ ಹುಡುಗಿ ಸಿಕ್ಕಿದ್ದಾಳೆ  ಎಂದು ಹೇಳಿದ್ದಾರೆ.

ಸದ್ಯದಲ್ಲೇ ಎಲ್ಲವನ್ನೂ ಹೇಳುತ್ತೇವೆ ಎಂದು ಶಾಂಗ್ರಿಲಾ ಹೋಟೆಲ್ ಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ  ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.