ಮುಂಬೈ [ಜೂ.19] : ಮಹಾರಾಷ್ಟ್ರದಲ್ಲಿ  ಈ ವರ್ಷದ ಅಂತ್ಯದ ವೇಳೆ ಚುನಾವಣೆ ನಡೆಯಲಿದ್ದು, ಮುಂದಿನ ಮಹಾರಾಷ್ಟ್ರ ಮುಖ್ಯಮಂತ್ರಿ ಪಟ್ಟ ಶಿವ ಸೇನೆಗೆ ಎಂದು ಘೋಷಿಸಲಾಗಿದೆ.

ಮುಂದಿನ ಚುನಾವಣೆಯನ್ನು ಶಿವ ಸೇನೆ ಹಾಗೂ ಬಿಜೆಪಿ ಮೈತ್ರಿಯಲ್ಲಿ  ಎದುರಿಸಲಿದ್ದು, ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ ಮುಖ್ಯಮಂತ್ರಿ ಪಟ್ಟ ಶಿವ ಸೇನೆಗೆ ಎಂದು ನಾಯಕರು ಹೇಳಿದ್ದಾರೆ. ಮಹಾರಾಷ್ಟ್ರದ 54 ನೇ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಶಿವಸೇನೆಯ ಮುಖ್ಯಮಂತ್ರಿ ಇರಲಿದ್ದಾರೆ ಎಂದು ಮತ್ತೊಮ್ಮೆ  ಹೇಳಿದೆ.

NDA ಮೈತ್ರಿ ಮೇಲೆ ಇದೀಗ ಮತ್ತೊಂದು ಪಕ್ಷದ ಮುನಿಸು

ಕಳೆದ ಕೆಲ ದಿನಗಳ ಹಿಂದಷ್ಟೇ  ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯಲ್ಲಿ ಮುಖ್ಯಮಂತ್ರಿ ಹುದ್ದೆ ಶಿವಸೇನೆಗೆ. ಆದಿತ್ಯ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷದ ನಾಯಕರು ಹೇಳಿದ್ದರು.

'ಇನ್ನು 25 ವರ್ಷ ಮೋದಿಗ್ಯಾರೂ ಇಲ್ಲ ಎದುರಾಳಿ'

ಇದೀಗ ಈ ಹೇಳಿಕೆಗೆ ಇನ್ನಷ್ಟು ಮಹತ್ವ ನೀಡಿ ಮುಖವಾಣಿ ಸಾಮ್ನಾದಲ್ಲಿ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದ್ದಾರೆ.  ಶಿವ ಸೇನೆ ಸಾಮಾನ್ಯ ಜನತೆಗೆ ಬಗೆಗಿನ ಕಾಣಜಿ ಈ ಮಟ್ಟಕ್ಕೆ ಬೆಳೆಯುವಂತೆ ಮಾಡುತ್ತದೆ.ಮುಂದೆಯೂ ಜನರ ಏಳ್ಗೆಗೆ ಶ್ರಮಿಸುತ್ತದೆ ಎಂದು ಹೇಳಿದ್ದಾರೆ.