ಮುಂಬೈ : ದೇಶದಲ್ಲಿ ಮತ್ತೊಮ್ಮೆ ಮೋದಿ ಅಲೆ ಕೆಲಸ ಮಾಡಿದ್ದು, ಬಿಜೆಪಿ ನೇತೃತ್ವದ  NDA 352 ಸ್ಥಾನಗಳಲ್ಲಿ ಜಯಗಳಿಸಿದೆ. 

ಎನ್ ಡಿ ಎ ಯಶಸ್ಸಿಗೆ ಶಿವ ಸೇನಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಮುಂದಿನ 25 ವರ್ಷಗಳ ಕಾಲ ನರೇಂದ್ರ ಮೋದಿ ಅವರಿಗೆ ಸವಾಲು ಒಡ್ಡಲು ಯಾರಿಂದಲೂ ಸಾಧ್ಯವಿಲ್ಲ ಎಂದಿದೆ. 

ಕಳೆದ ಐದು ವರ್ಷಗಳಿಂದ ನಿರಂತರವಾಗಿ ಬಿಜೆಪಿ ಟೀಕಿಸುತ್ತಾ ಬಂದಿದ್ದ ಶಿವಸೇನಾ  ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತ್ತು. 

ರಫೇಲ್ ಡೀಲ್ ವಿಚಾರ ಸೇರಿ ಕೆಲವು ವಿಷಯಗಳನ್ನಿಟ್ಟುಕೊಂಡು ಭ್ರಮೆಯನ್ನು ಸೃಷ್ಟಿಸಿದ್ದ ವಿಪಕ್ಷಗಳಿಗೆ ದೇಶದ ಜನರು ತಕ್ಕ ಉತ್ತರವನ್ನೇ ನೀಡಿದ್ದಾರೆ. ಸಂಪೂರ್ಣ ದೇಶವೇ ಮೋದಿ ಮಯವಾಗಿದೆ ಎಂದು ಶಿವ ಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ. 

ಪ್ರಧಾನಿ ನರೇಂದ್ರ ಅವರಿಗೆ ಎದುರಾಳಿಯಾಗಿ ನಿಲ್ಲಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ 25 ವರ್ಷಗಳ ಕಾಲ ಯಾರೂ ಎದುರಿಸಲಾರರು ಎಂದರು. 

ಉತ್ತರಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿ ಕಣಕ್ಕೆ ಇಳಿದಿದ್ದ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಜಯ ಸಾಧಿಸುವಲ್ಲಿಯಶಸ್ವಿಯಾಗಿದ್ದಾರೆ.  ಪ್ರಧಾನಿ ನರೇಂದ್ರ ಮೋದಿ ಅವರು 6,74,664  ಮತಗಳನ್ನು ಪಡೆಯುವ ಮೂಲಕ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ಭರ್ಜರಿ 4.79 ಲಕ್ಷ ಮತಗಳ ಅಂತರದಿಂದ ಸೋಲಿಸಿದರು.