ಗುಡ್ ಬೈ2018: ಅಪನಗದೀಕರಣ ನಂತರದ ಭಾರತ!
ಅಪನಗದೀಕರಣದಿಂದ ಸಾಧಿಸಿದ್ದೆಷ್ಟು?, ಸಾಧಿಸಬೇಕಾಗಿದ್ದೆಷ್ಟು?| ಅಪನಗದೀಕರಣದ ನಂತರದ ಭಾರತದ ಆರ್ಥಿಕ ವ್ಯವಸ್ಥೆ ಹೇಗಿದೆ?| ನೋಟ್ ಬ್ಯಾನ್ ಬಳಿಕ ಹಳಿ ತಪ್ಪಿದ್ದ ಆರ್ಥಿಕತೆ ಈಗ ಹೇಗಿದೆ?| ಜಿಡಿಪಿ ಬೆಳವಣಿಗೆ ಏರಿಕೆ ಭವಿಷ್ಯದ ಸದೃಢ ಅರ್ಥ ವ್ಯವಸ್ಥೆಯ ಸೂಚನೆ| ಹೊಸ ಕರೆನ್ಸಿ ನೋಟುಗಳ ಹರಿವು ಹೆಚ್ಚಾದ ಪರಿಣಾಮ ಏನು?| ಮತ್ತೆ ಪುಟಿದೇಳುವತ್ತ ಗುಡಿ ಕೈಗಾರಿಕೆಗಳ ಸ್ಥಿತಿಗತಿ
ಬೆಂಗಳೂರು(ಡಿ.30): 2018 ಇನ್ನೇನು ಮುಗಿಯುತ್ತಾ ಬಂದಿದೆ. ಭೂಮಿಯ ಆಯಸ್ಸಿಗೆ, ಮಾನವ ಜನಾಂಗದ ಇತಿಹಾಸಕ್ಕೆ ಮತ್ತೊಂದು ವರ್ಷ ಸೇರ್ಪಡೆಯಾಗಲಿದೆ. 2019ರ ರೂಪದಲ್ಲಿ ಮತ್ತೊಂದು ಹೊಸ ವರ್ಷ ನಮ್ಮ ಜೀವನದಲ್ಲಿ ಪ್ರವೇಶ ಪಡೆಯಲಿದೆ.
ವರ್ಷಾಂತ್ಯದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನೊಮ್ಮೆ ರಿವೈಂಡ್ ಮಾಡಿ ನೋಡುವುದುಂಟು. ಏನಾಯ್ತು?, ಏನಾಗಬೇಕಿತ್ತು?, ಸರಿ ಏನು?, ತಪ್ಪು ಮಾಡಿದ್ದೆಲ್ಲಿ?, ಹೀಗೆ ವರ್ಷದ ರಿಪೋರ್ಟ್ ಕಾರ್ಡ್ ಮನಸ್ಸಲ್ಲೇ ರೆಡಿ ಮಾಡಲಾಗುತ್ತದೆ.
ಹಾಗೆ ದೇಶ ಕೂಡ ಒಂದು ವರ್ಷದ ಅವಧಿಯಲ್ಲಿ ತಾನು ಮುನ್ನಡೆದ ಹಾದಿಯ ಕುರಿತು ಒಮ್ಮೆ ಗ್ಲ್ಯಾನ್ಸ್ ಮಾಡುತ್ತದೆ. ಹೀಗೆ ದೇಶದ ವಾರ್ಷಿಕ ಆಗುಹೋಗುಗಳ ಬಗ್ಗೆ ಹಿಂತಿರುಗಿ ನೋಡಿದರೆ ಪ್ರಮುಖವಾಗಿ ಕಾಣ ಸಿಗುವುದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಪನಗದೀಕರಣವನ್ನು ಜಾರಿಗೆ ತಂದಿದ್ದು.
ನೋಟ್ ಬ್ಯಾನ್: ಉತ್ತರ ಸಿಗದ ಪ್ರಶ್ನೆಗಳು, ಮೋದಿ ಅರಿಯದ ವಿಪಕ್ಷಗಳು!
ಹೌದು, ನವೆಂಬರ್ 8, 2016ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಮನೆಯ ಟಿವಿ ಪರದೆ ಮೇಲೆ ಪ್ರತ್ಯಕ್ಷರಾದರು. ಆಗ ಚಾಲ್ತಿಯಲ್ಲಿದ್ದ 500,1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ಹೊಸ 2000,500 ನೋಟುಗಳನ್ನು ಜಾರಿಗೆ ತರುವ ಘೋಷಣೆ ಮಾಡಿದ್ದರು ಮೋದಿ.
ಇದಕ್ಕೆ ಕಾರಣವನ್ನೂ ನೀಡಿದ್ದ ಪ್ರಧಾನಿ, ಆರ್ಥಿಕ ಸ್ಥಿತಿ ಸುಧಾರಣೆ, ಕಪ್ಪುಹಣದ ಮೇಲೆ ಪ್ರಹಾರ, ಭಯೋತ್ಪಾದನೆ ನಿಗ್ರಹ ಸೇರಿದಂತೆ ಅಪನಗದೀಕರಣಕ್ಕೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಹೋದರು.
ಮೋದಿ ಅವರ ಈ ನಿರ್ಧಾರಕ್ಕೆ ಇಡೀ ವಿಶ್ವವೇ ಅಚ್ಚರಿಪಡುವಂತೆ ದೇಶದ ಜನತೆ ಅವರ ಬೆನ್ನಿಗೆ ನಿಂತಿತು. ಮೋದಿ ಅವರ ಅಪನಗದೀಕರಣವನ್ನು ದೇಶದ ಜನತೆ ಬೆಂಬಲಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು. ಮುಂದಿನ ಬೆಳವಣಿಗೆಗಳೆಲ್ಲಾ ಇದೀಗ ಇತಿಹಾಸದ ಪುಟ ಸೇರಿವೆ.
ನೋಟ್ ಬ್ಯಾನ್ ಸಾಧಿಸಿದ್ದೇನು?: ಮೋದಿ ಬೈದವರಿಗೆ ಇಲ್ಲಿದೆ ಉತ್ತರ!
ನಂತರದ ಭಾರತ:
ಅಪನಗದೀಕರಣದ ಆರಂಭದಲ್ಲಿ ದೇಶ ಕೆಲವು ಹಿನ್ನಡೆಗಳನ್ನು ಅನುಭವಿಸಬೇಕಾಯಿತು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಪ್ರಮುಖವಾಗಿ ಹೊಸ ಕರೆನ್ಸಿ ನೋಟುಗಳನ್ನು ಕೊಳ್ಳಲು ಎಟಿಎಂ ಮುಂದೆ ಜನ ಪರದಾಡಬೇಕಾಗಿ ಬಂದಿದ್ದು, ಕೆಲವು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೆಲ ಕಚ್ಚಿದ್ದು, ದೇಶದ ಅರ್ಥ ವ್ಯವಸ್ಥೆ ಮತ್ತು ಜಿಡಿಪಿ ಹಿನ್ನಡೆ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಪ್ರಮುಖವಾಗಿ ಶೇ. 8ರ ಆಸುಪಾಸಿನಲ್ಲಿದ್ದ ಜಿಡಿಪಿ ಏಕಾಏಕಿ ಶೇ.2 ರಷ್ಟು ಕುಸಿತ ಕಂಡಿತ್ತು. ಜಿಡಿಪಿಯನ್ನು ಮತ್ತೆ ಏರಿಕೆಯ ಹಳಿ ಮೇಲೆ ತರುವುದು ಮೋದಿ ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ಆದರೆ ಅಪನಗದೀಕರಣದ ಎರಡು ರ್ಷಗಳ ನಂತರ ನಂತರ 2017-18ರ ನಡುವೆ ಜಿಡಿಪಿ 7.3% ದಾಖಲಾಗಿದ್ದು, ಇದು ವಿಶ್ವದಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಅಲ್ಲದೇ ನೆಲಕಚ್ಚಿದ್ದ ದೇಶದ ಗುಡಿ ಕೈಗಾರಿಕೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನಕ್ಕಾಗಿ ಈ ಎರಡು ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪರಿಣಾಮವಾಗಿ ಈ ಕ್ಷೇತ್ರಗಳಲ್ಲಿ ಉತ್ತಮ ವಹಿವಟು ದಾಖಲಾಗುತ್ತಿದೆ.
ಮೋದಿ ಬಗ್ಗದ ಆಸಾಮಿ: ಆಕಾಶಕ್ಕೆ ಮುತ್ತಿಕ್ಕಿದೆ ನಮ್ಮ ಎಕಾನಮಿ!
ಅದರಂತೆ ಹೊಸ ಕರೆನ್ಸಿ ನೋಟುಗಳ ಚಲಾವಣೆಯಲ್ಲೂ ವೃದ್ಧಿಯಾಗಿದ್ದು, ನೋಟುಗಳು ಎಟಿಎಂಗಳಿಗೆ ಸರಾಗವಾಗಿ ಹರಿದು ಬರುತ್ತಿದೆ. ಆದರೆ ದೇಶದ ಎರಡನೇ ಮತ್ತು ತೃತೀಯ ದರ್ಜೆ ನಗರಗಳಲ್ಲಿ ಹಣದ ಹರಿವು ಇನ್ನು ಸುಧಾರಿಸಬೇಕಿದೆ. ಮುಂದಿನ ದಿನಗಳಲ್ಲಿ ಸುಧಾರಣೆ ಕಾಣುವ ಭರವಸೆ ಕೂಡ ಇದೆ.
ಮೋದಿ ಸೈಲೆಂಟ್ ಸಾಧನೆ: ದುಪ್ಪಟ್ಟಾಯ್ತು ಕೈಗಾರಿಕಾ ಉತ್ಪಾದನೆ!
ಆರ್‌ಬಿಐ 2016-17ರಲ್ಲಿ ಹೊಸ ನೋಟುಗಳನ್ನು ಪ್ರಿಂಟ್ ಮಾಡಲು 7,965 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2017-18 ರಲ್ಲಿ 4,912 ಕೋಟಿ ರೂ. ಖರ್ಚು ಮಾಡಿದೆ. ಇದರ ಅರ್ಥ ಈ ಮೊದಲು ಪ್ರಿಂಟ್ ಮಾಡಿದ್ದ ನೊಟುಗಳ ಚಲಾವಣೆ ದೇಶದಲ್ಲಿ ಸರಾಗವಾಗಿ ಅಗುತ್ತಿದ್ದು, ಈ ಮೊದಲಿನ ವೇಗದಲ್ಲಿ ನೋಟುಗಳನ್ನು ಪ್ರಿಂಟ್ ಮಡಲಾಗುತ್ತಿಲ್ಲ.
ಒಟ್ಟಿನಲ್ಲಿ ಪ್ರಧಾನಿ ಮೋದಿ ವರ ಅಪನಗದೀಕರಣ ಮತ್ತು ಆ ನಂತರದ ಭಾರತದ ಬೆಳವಣಿಗೆಯತ್ತ ಗಮನಹರಿಸಿದರೆ, ಮೂರು ಹೆಜ್ಜೆ ಮುಂದೆ ಇಡಲು ಒಂದು ಹಜ್ಜೆ ಹಿಂದಕ್ಕೆ ಹೋಗಿದ್ದು, ಭವಿಷ್ಯದಲ್ಲಿ ಭಾರತದ ಆರ್ಥಿಕತೆ ಮತ್ತಷ್ಟು ಸದೃಢವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದು.
ಇದನ್ನೂ ಓದಿ-ಗುಡ್ ಬೈ 2018: ದಿನವೂ ಏಕೆ ಪೆಟ್ರೋಲ್ ಸುದ್ದಿ?, ಮಾರುಕಟ್ಟೆಯಷ್ಟೇ ನಾವೂ ಜಿದ್ದಿ!
ಗುಡ್ ಬೈ 2018: ಆರ್ಥಿಕ ನಾಗಾಲೋಟದಲ್ಲಿ ಮೋದಿ ಕೈ ಬಿಟ್ಟ ಪ್ರಮುಖರು!
ಗುಡ್ ಬೈ 2018: ಆರ್ಥಿಕತೆಯಲ್ಲಿ ವಿಶ್ವಗುರುವಾಗುವತ್ತ ಭಾರತದ ನಡಿಗೆ!
ಗುಡ್ ಬೈ 2018: ಇರಾನ್ ತೈಲ ಬರತ್ತೆ, ಬರಲ್ಲಗಳ ಮಧ್ಯೆ ಮುಗಿದ ವರ್ಷ!