Asianet Suvarna News Asianet Suvarna News

ಬಾಳಾ ಸಾಹೇಬ್ ಇದ್ದಿದ್ರೆ...ಆಶ್ಚರ್ಯ ಆಗತ್ತೆ ಎನ್‌ಸಿಪಿ ಲೀಡರ್ ಬರೆದಿದ್ದು ಓದಿದ್ರೆ..!

ಸಿನಿಯರ್ ಠಾಕ್ರೆ ಜೀವಂತವಾಗಿದ್ದರೆ ಎಂದ ಉದ್ಗಾರ ತೆಗೆದ ಎನ್‌ಸಿಪಿ ಲೀಡರ್| ಶಿವಸೇನೆ-ಬಿಜೆಪಿ ನಡುವೆ ಮುಂದುವರೆದ ಮುಸುಕಿನ ಗುದ್ದಾಟ| ಮಹಾರಾಷ್ಟ್ರದಲ್ಲಿ ಕಗ್ಗಂಟಾದ ಸರ್ಕಾರ ರಚನೆ ಪ್ರಕ್ರಿಯೆ| ಶಿವಸೇನೆ-ಬಿಜೆಪಿಯಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಶರದ್ ಪವಾರ್ ಸಂಬಂಧಿ| 'ಬಾಳಾ ಸಾಹೇಬ್ ಠಾಕ್ರೆ ಇದ್ದಿದ್ದರೆ ಬಿಜೆಪಿಗೆ ಇಷ್ಟೊಂದು ಧೈರ್ಯವೇ ಇರುತ್ತಿರಲಿಲ್ಲ'| ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಹೊಗಳಿದ ರೋಹಿತ್ ರಾಜೇಂದ್ರ ಪವಾರ್|

NCP Rohit Rajendra Pawar Praises  Shiv Sena Founder Balasaheb Thackeray
Author
Bengaluru, First Published Nov 4, 2019, 1:01 PM IST

ಮುಂಬೈ(ನ.04): ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗಾಗಿ ಬಿಜೆಪಿ-ಶಿವಸೇನೆ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದ್ದು, ಎರಡೂ ಪಕ್ಷಗಳು ತಮ್ಮ ಹಠ ಬಿಡಲು ತಯಾರಿಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಂಗಟ್ಟುಗೊಳಿಸಿದೆ.

ರಾಜಕಾರಣಕ್ಕೆ ‘ಮಹಾ’ ಟ್ವಿಸ್ಟ್ : ಪ್ರತ್ಯೇಕವಾಗಿ ಗವರ್ನರ್ ಭೇಟಿ ಮಾಡಿದ ಸೇನೆ, BJP

ಈ ಮಧ್ಯೆ ಮಹಾರಾಷ್ಟ್ರದಲ್ಲಿ ಶಿವಸೇನೆ-ಎನ್‌ಸಿಪಿ ನಡುವೆ ಮೈತ್ರಿಯಾಗುವ ಸಾಧ್ಯತೆ ಕುರಿತು ಚರ್ಚೆ ಜೋರಾಗಿದ್ದು, ಉಭಯ ಪಕ್ಷಗಳ ನಾಯಕರ ಹೇಳಿಕೆಗಳನ್ನು ಗಮಿಸಿದರೆ ಮೈತ್ರಿ ರಚನೆಯಾದರೆ ಆಶ್ಚರ್ಯಪಡಬೇಕಿಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗಿದೆ.

ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ

ಒಂದು ವೇಳೆ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಇಂದು ಜೀವಂತವಾಗಿದ್ದರೆ, ಸರ್ಕಾರ ರಚನೆಯಲ್ಲಿ ಬಿಜೆಪಿಗೆ ಇಷ್ಟೊಂದು ಆಟವಾಡಲು ಧೈರ್ಯವೇ ಇರುತ್ತಿರಲಿಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶಾರದ್ ಪವಾರ್ ಸಂಬಂಧಿ ರೋಹಿತ್ ರಾಜೇಂದ್ರ ಪವಾರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ರಚೆನೆಯಲ್ಲಿ ವಿಳಂಬ ಮಾಡುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆಗೆ ಕಾರಣವಾಗಿದೆ ಎಂದು ರೋಹಿತ್ ಪವಾರ್ ಆರೋಪಿಸಿದ್ದು, ಬಾಳಾ ಸಾಹೇಬ್ ಜೀವಂತವಾಗಿದ್ದರೆ ಈ ಸನ್ನಿವೇಶ ಉದ್ಭವವಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಮುಗಿಯದ ಮಹಾ ಬಿಕ್ಕಟ್ಟು, ಅದ್ಯಾವಾಗ ಸರ್ಕಾರ ರಚನೆಯಾಗುತ್ತೋ ಗೊತ್ತಿಲ್ಲ

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

 

ಮಹಾರಾಷ್ಟ್ರದ ರಾಜಕೀಯ ಇತಿಹಾಸದಲ್ಲಿ ಹಲವು ಧೀಮಂತ ನಾಯಕರು ಮಿಂಚಿ ಕಣ್ಮರೆಯಾಗಿದ್ದು, ಅಂತಹವರ ಪೈಕಿ ಬಾಳಾ ಸಾಹೇಬ್ ಪ್ರಮುಖರು ಎಂದು ರೋಹಿತ್ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಸರ್ಕಾರ ರಚನೆಯ ಹಂತದಲ್ಲೇ ಇಷ್ಟೊಂದು ಕಚ್ಚಾಡುತ್ತಿರುವ ಶಿವಸೇನೆ-ಬಿಜೆಪಿ ಮೈತ್ರಿಕೂಟ ಐದು ವರ್ಷಗಳ ಕಾಲ ಸದೃಢ ಆಡಳಿತ ನೀಡಲಿದೆಯಾ ಎಂಬ ಕುರಿತು ಅನುಮಾನಗಳಿವೆ ಎಂದು ರೋಹಿತ್ ಹೇಳಿದ್ದಾರೆ.

ನ.07ಕ್ಕೆ ಸರ್ಕಾರ ಆಗ್ದಿದ್ರೆ ರಾಷ್ಟ್ರಪತಿ ಆಡಳಿತ: ಬಿಜೆಪಿ ನಾಯಕನ ಹೊಸ ವರಾತ!

ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಸರ್ಕಾರಕ್ಕೆ ಯತ್ನ?

ಶಿವಸೇನೆ-ಎನ್‌ಸಿಪಿ ನಡುವಿನ ಮೈತ್ರಿ ಸಾಧ್ಯತೆ ಮಹಾರಾಷ್ಟ್ರದಲ್ಲಿ ಹೊಸದೊಂದು ಅಧ್ಯಾಯ ತೆರೆಯಲಿದ್ದು, ಪ್ರಾದೇಶಿಕ ಶತ್ರುಗಳ ನಡುವಿನ ಮಿತೃತ್ವ ರೋಚಕವಾಗಿರಲಿದೆ ಎಂದು ರಾಜಕೀಯ ವತಜ್ಞರು ವಿಶ್ಲೇಷಿಸಿದ್ದಾರೆ.

Follow Us:
Download App:
  • android
  • ios