ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!
ಮುಂದುವರೆದ ಬಿಜೆಪಿ-ಶಿವಸೇನೆ ನಡುವಿನ ಸರ್ಕಾರ ರಚನೆಯ ಹಗ್ಗ ಜಗ್ಗಾಟ| ಅಧಿಕಾರ ಹಂಚಿಕೆ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗದ ಮಿತ್ರಪಕ್ಷಗಳು| ನಾಯಕರ ಹೇಳಿಕೆಗಳೇ ಸುಗಮ ಅಧಿಕಾರ ಹಂಚಿಕೆಗೆ ತೊಡಕು| ಶೀವಸೇನೆಯ ಅಭ್ಯರ್ಥಿಯೇ ಮುಖ್ಯಮಂತರಿಯಾಗುತ್ತಾರೆ ಎಂದ ಸಂಜಯ್ ರಾವುತ್ | ಸರ್ಕಾರ ರಚನೆ ಬಗ್ಗೆ ಬಿಜೆಪಿ ಜೊತೆ ಮಾತುಕತೆ ನಡೆದಿಲ್ಲ ಎಂದ ರಾವುತ್| 'ಸರ್ಕಾರ ರಚನೆಗಾಗಿ ಬಿಜೆಪಿ ಮುಂದೆ ನಾವು ಯಾವುದೇ ದೊಡ್ಡ ಬೇಡಿಕೆ ಮುಂದಿಟ್ಟಿಲ್ಲ'| 'ಶಿವಸೇನೆ ತೀರ್ಮಾನಿಸಿದರೆ ಸ್ಥಿರ ಸರ್ಕಾರ ರಚಿಸಲು ಬೇಕಾದಷ್ಟು ಸದಸ್ಯರ ಬೆಂಬಲ'| '50:50 ಸೂತ್ರದ ಪ್ರಕಾರ ಸರ್ಕಾರ ರಚಿಸಲು ರಾಜ್ಯದ ಜನತೆ ತೀರ್ಪು ಕೊಟ್ಟಿದ್ದಾರೆ'
ಮುಂಬೈ(ನ.01): ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಸರ್ಕಾರ ರಚನೆಯ ಹಗ್ಗ ಜಗ್ಗಾಟ ಮುಂದುವರೆದಿದ್ದು, ಅಧಿಕಾರ ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.
ಒಂದೆಡೆ ಬಿಜೆಪಿ ದೇವೇಂದ್ರ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿ, ಸರ್ಕಾರ ರಚನೆಗಾಗಿ ಕಾದು ಕುಳಿತಿದೆ. ಇನ್ನೊಂದೆಡೆ ತಮ್ಮದೇ ಅಭ್ಯರ್ಥಿ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಪಟ್ಟು ಹಿಡಿದು ಕುಳಿತಿದೆ.
50-50ಕ್ಕೆ ಲಿಖಿತ ಭರವಸೆ ಕೊಡಿ: ಅಪನಂಬಿಕೆಯ ಹಗ್ಗದ ಮೇಲೆ ಬಿಜೆಪಿ-ಶಿವಸೇನೆ ಜೋಡಿ!
ಈ ಮಧ್ಯೆ ಎರಡೂ ಪಕ್ಷಗಳ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಮಯ ಮಾಡುತ್ತಿದ್ದಾರೆ. ನಾಯಕರ ಈ ಹೇಳಿಕೆಗಳೇ ಸುಗಮ ಅಧಿಕಾರ ಹಂಚಿಕೆಗೆ ತೊಡಕಾಗಿದೆ ಎಂದು ಹೇಳಬಹುದು.
ಇದಕ್ಕೆ ಪುಷ್ಟಿ ಎಂಬಂತೆ ಮಹಾರಾಷ್ಟ್ರಕ್ಕೆ ಶೀವಸೇನೆಯ ಅಭ್ಯರ್ಥಿಯೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಶಿವಸೇನೆ ಹಿರಿಯ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ರಾಜಕಾರಣಕ್ಕೆ ‘ಮಹಾ’ ಟ್ವಿಸ್ಟ್ : ಪ್ರತ್ಯೇಕವಾಗಿ ಗವರ್ನರ್ ಭೇಟಿ ಮಾಡಿದ ಸೇನೆ, BJP
ಸರ್ಕಾರ ರಚನೆ ಬಗ್ಗೆ ಎರಡೂ ಪಕ್ಷಗಳ ಮಧ್ಯೆ ಯಾವುದೇ ಮಾತುಕತೆಗಳು ನಡೆದಿಲ್ಲ, ಆದರೆ ಶಿವಸೇನೆಯ ಅಭ್ಯರ್ಥಿಯೇ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ರಾವುತ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ರಚನೆಗಾಗಿ ಬಿಜೆಪಿ ಮುಂದೆ ನಾವು ಯಾವುದೇ ದೊಡ್ಡ ಬೇಡಿಕೆ ಮುಂದಿಟ್ಟಿಲ್ಲ. ಆದರೆ ಶಿವಸೇನೆ ತೀರ್ಮಾನಿಸಿದರೆ ಸ್ಥಿರ ಸರ್ಕಾರ ರಚಿಸಲು ಬೇಕಾದಷ್ಟು ಸದಸ್ಯರ ಬೆಂಬಲ ಸಿಗಲಿದೆ ಎಂದು ಮಿತ್ರಪಕ್ಷಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.
ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ
50:50 ಸೂತ್ರದ ಪ್ರಕಾರ ಸರ್ಕಾರ ರಚಿಸಲು ರಾಜ್ಯದ ಜನತೆ ತೀರ್ಪು ಕೊಟ್ಟಿದ್ದಾರೆ. ಮಹಾರಾಷ್ಟ್ರ ಜನತೆ ಮುಂದೆ ಆದ ತೀರ್ಮಾನವಿದು ಎಂದು ರಾವುತ್ ಬಿಜೆಪಿ ವಿರುದ್ಧಅಸಮಾಧಾನ ವ್ಯಕ್ತಪಡಿಸಿದರು,
ನಮ್ಮದೇ ಸರ್ಕಾರ, ನಾನೇ 5 ವರ್ಷ ಸಿಎಂ: ಶಿವಸೇನೆ ಕನಸಿಗೆ ಫಡ್ನವೀಸ್ ಕೊಳ್ಳಿ
50:50 ಸೂತ್ರದಂತೆ ಖಾತೆಗಳ ಹಂಚಿಕೆ ಮಾಡಿ ಎರಡೂ ಪಕ್ಷಗಳಿಂದ ಎರಡೂವರೆ ವರ್ಷಗಳ ಕಾಲ ಒಬ್ಬರು ಸಿಎಂ ಹುದ್ದೆ ಅಲಂಕರಿಸಲಿ ಎಂಬುದು ಶಿವಸೇನೆಯ ಬೇಡಿಕೆಯಾಗಿದೆ. ಆದರೆ ಬಿಜೆಪಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ದೇವೇಂದ್ರ ಫಡ್ನವಿಸ್ ಅವರೇ 5 ವರ್ಷಗಳ ಕಾಲ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಸ್ಪಷ್ಟಪಡಿಸಿದೆ.