ಮುಂದುವರೆದ ಬಿಜೆಪಿ-ಶಿವಸೇನೆ ನಡುವಿನ ಸರ್ಕಾರ ರಚನೆಯ ಹಗ್ಗ ಜಗ್ಗಾಟ| ಅಧಿಕಾರ ಹಂಚಿಕೆ ವಿಷಯದಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗದ ಮಿತ್ರಪಕ್ಷಗಳು| ನಾಯಕರ ಹೇಳಿಕೆಗಳೇ ಸುಗಮ ಅಧಿಕಾರ ಹಂಚಿಕೆಗೆ ತೊಡಕು|  ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ| ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಎಚ್ಚರಿಕೆ| ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಪ್ರಕಟವಾಗಿ 8 ದಿನಗಳು ಕಳೆದಿವೆ| ಇನ್ನುಳಿದ  7 ದಿನಗಳೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ  ರಾಷ್ಟ್ರಪತಿ ಆಡಳಿತ| ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟ|

ಮುಂಬೈ(ನ.01): ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ನಡುವಿನ ಸರ್ಕಾರ ರಚನೆಯ ಹಗ್ಗ ಜಗ್ಗಾಟ ಮುಂದುವರೆದಿದ್ದು, ಅಧಿಕಾರ ಹಂಚಿಕೆ ವಿಷಯದಲ್ಲಿ ಎರಡೂ ಪಕ್ಷಗಳೂ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

Add Asianetnews Kannada as a Preferred SourcegooglePreferred

ಒಂದೆಡೆ ಬಿಜೆಪಿ ದೇವೇಂದ್ರ ಫಡ್ನವೀಸ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿ, ಸರ್ಕಾರ ರಚನೆಗಾಗಿ ಕಾದು ಕುಳಿತಿದೆ. ಇನ್ನೊಂದೆಡೆ ತಮ್ಮದೇ ಅಭ್ಯರ್ಥಿ ಮುಖ್ಯಮಂತ್ರಿಯಾಗಬೇಕು ಎಂದು ಶಿವಸೇನೆ ಪಟ್ಟು ಹಿಡಿದು ಕುಳಿತಿದೆ.

50-50ಕ್ಕೆ ಲಿಖಿತ ಭರವಸೆ ಕೊಡಿ: ಅಪನಂಬಿಕೆಯ ಹಗ್ಗದ ಮೇಲೆ ಬಿಜೆಪಿ-ಶಿವಸೇನೆ ಜೋಡಿ!

ಈ ಮಧ್ಯೆ ಎರಡೂ ಪಕ್ಷಗಳ ನಾಯಕರು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಾ, ಪರಿಸ್ಥಿತಿಯನ್ನು ಮತ್ತಷ್ಟು ಗೊಂದಲಮಯ ಮಾಡುತ್ತಿದ್ದಾರೆ. ನಾಯಕರ ಈ ಹೇಳಿಕೆಗಳೇ ಸುಗಮ ಅಧಿಕಾರ ಹಂಚಿಕೆಗೆ ತೊಡಕಾಗಿದೆ ಎಂದು ಹೇಳಬಹುದು.

ನವೆಂಬರ್ 7 ರೊಳಗೆ ಸರ್ಕಾರ ರಚನೆಯಾಗದಿದ್ದರೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಎಚ್ಚರಿಸಿದ್ದಾರೆ.

ಇನ್ನೂ ಮುಗಿಯದ ಮಹಾ ಬಿಕ್ಕಟ್ಟು; ಅಧಿಕಾರ ಹಂಚಿಕೆಗೆ ಪಟ್ಟು ಬಿಡದ ಬಿಜೆಪಿ-ಶಿವಸೇನೆ
ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದ್ದು,ಕೂಡಲೇ ಸರ್ಕಾರ ರಚನೆಗೆ ಎರಡೂ ಪಕ್ಷಗಳು ಮುಂದಾಗಬೇಕು ಎಂದು ಸುಧೀರ್ ಮನವಿ ಮಾಡಿದ್ದಾರೆ.

ಚುನಾವಣಾ ಫಲಿತಾಂಶ ಪ್ರಕಟವಾಗಿ 8 ದಿನಗಳು ಕಳೆದಿದ್ದು, ಇನ್ನುಳಿದ 7 ದಿನಗಳೊಳಗೆ ಅಂದರೆ ನವೆಂಬರ್ 7ರೊಳಗೆ ಸರ್ಕಾರ ರಚನೆಯಾಗದಿದ್ದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಸಾಧ್ಯತೆ ಇದೆ ಎಂದು ಸುಧೀರ್ ಎಚ್ಚರಿಕೆ ನೀಡಿದ್ದಾರೆ.

ಶಿವಸೇನೆಯೇ 'ಮಹಾ ಮುಖ್ಯಸ್ಥ': ಸಂಜಯ್ ರಾವುತ್ ಹೇಳಿಕೆ ಅಸ್ತವ್ಯಸ್ತ!

ಕಳೆದ ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದು.