ಸಮುದ್ರ ತೀರದಲ್ಲಿ ಮೋದಿ ಪ್ಲಾಗಿಂಗ್: ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ!

ಬೀಚ್ ಬಳಿ ಕಸ ಕ್ಲೀನ್ ಮಾಡಿದ ಪ್ರಧಾನಿ ಮೋದಿ| ತಮಿಳುನಾಡಿನ ಮಹಾಬಲಿಪುರಂ ಬೀಚ್ ಬಳಿ ಮೋದಿ ವಾಕಿಂಗ್| ಪ್ಲಾಸ್ಟಿಕ್ ಮುಕ್ತ ಭಾರತ ಮಾಡಲು ಮೋದಿ ಮಹತ್ವದ ಹೆಜ್ಜೆ| ಕಸ ಕ್ಲೀನ್ ಮಾಡೋ ಮೂಲಕ ಪ್ಲಾಸ್ಟಿಕ್ ಮುಕ್ತ ಬಗ್ಗೆ ಸಂದೇಶ

Narendra Modi cleans Mahabalipuram beach promotes plogging

ಮಹಬಲಿಪುರಂ[ಅ.12]: ಚೀನಾ ಅಧ್ಯಕ್ಷ  ಕ್ಸಿ ಜಿನ್​ಪಿಂಗ್ ಅನೌಪಚಾರಿಕ ಶೃಂಗಸಭೆಗಾಗಿ ತಮಿಳುನಾಡಿನ ಮಹಾಬಲಿಪುರಂನಲ್ಲಿರುವ ಪ್ರಧಾನಿ ಮೋದಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಇಂದು ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಹೀಗಿರುವಾಗ ಇಂದು ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ಪಿಎಂ ಮೋದಿ ಬೀಚ್​ನಲ್ಲಿ ಸ್ವಚ್ಛತಾ ಕಾರ್ಯ ನಡೆಸಿ, ಸ್ವಚ್ಛತೆಯ ಸಂದೇಶ ಸಾರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ದೇಶದ ಪ್ರಧಾನಿ ಇಂತಹ ಕಾರ್ಯ ನಡೆಸಿದ್ದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. 

ಇಡೀ ದೇಶದ ನಾಯಕ ನೀ: ದೇಸಿ ಪಂಚೆಯಲ್ಲಿ ಕ್ಸಿ ಬರಮಾಡಿಕೊಂಡ ಪ್ರಧಾನಿ!

ಹೌದು ಇಂದು ಬೆಳ್ಳಂ ಬೆಳಗ್ಗೆ ಪ್ರಧಾನಿ ಮೋದಿ, ಮಹಾಬಲಿಪುರಂನ ಬೀಚ್​ ಬದಿ ಕಸವನ್ನೆತ್ತಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ಸುಮಾರು ಅರ್ಧ ಗಂಟೆ ಸಮುದ್ರ ತೀರದಲ್ಲಿ ವಾಕಿಂಗ್ ಮಾಡುತ್ತಿದ್ದ ಮೋದಿ, ಸಮುದ್ರದ ಬದಿಯಲ್ಲಿ ಬಿದ್ದಿದ್ದ ಕಸವನ್ನ ಆಯ್ದು ಬ್ಯಾಗ್​ನಲ್ಲಿ ತುಂಬಿಸಿದ್ದಾರೆ. ಈ ವಿಡಿಯೋವನ್ನು ಮೋದಿ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಕಸ ಹೆಕ್ಕೋ ಕಸರತ್ತು, ಪ್ಲಾಗಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

"

ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ಮೋದಿ 'ಇಂದು ಬೆಳಗ್ಗೆ ಮಹಾಬಲಿಪುರಂನ ಬೀಚ್​ ಒಂದರಲ್ಲಿ ಪ್ಲಾಗಿಂಗ್ ಮಾಡಿದೆ. ಇದು ಸುಮಾರು ಅರ್ಧ ಗಂಟೆ ಕಾಲ ನಡೆಯಿತು. ಬಳಿಕ ಹೋಟೆಲ್​ ಸಿಬ್ಬಂದಿ ಜಯರಾಜ್​ಗೆ ಕಸ ಸಂಗ್ರಹಿಸಿದ ಕವರ್​ ಕೊಟ್ಟೆ. ಸಾರ್ವಜನಿಕ ಸ್ಥಳಗಳನ್ನ ಸ್ವಚ್ಛವಾಗಿಟ್ಟುಕೊಳ್ಳೋಣ. ಈ ಮೂಲಕ ಫಿಟ್​ ಹಾಗೂ ಆರೋಗ್ಯದಿಂದ ಇರೋಣ' ಬರೆದಿದ್ದಾರೆ. 

ಪ್ಲಾಗಿಂಗ್ ಅಂದ್ರೆ ವಾಕಿಂಗ್ ಅಥವಾ ಜಾಗಿಂಗ್ ಮಾಡುತ್ತಾ ರಸ್ತೆಯಲ್ಲಿ ಬಿದ್ದ ಕಸವನ್ನ ಆಯ್ದು ಸ್ವಚ್ಛಗೊಳಿಸುವುದು. ಸದ್ಯ ದೇಶದ ಪ್ರಧಾನಿ ಖುದ್ದು ಕಸವನ್ನು ಸಂಗ್ರಹಿಸಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.

ಪಿಒಕೆ ಬಿಡುವಂತೆ ಕ್ಸಿಗೆ 56 ಇಂಚಿನ ಎದೆಯುಳ್ಳ ಪ್ರಧಾನಿ ಹೇಳಿದ್ರಾ?: ಕಾಂಗ್ರೆಸ್!

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

Latest Videos
Follow Us:
Download App:
  • android
  • ios