ಕಸ ಹೆಕ್ಕೋ ಕಸರತ್ತು, ಪ್ಲಾಗಿಂಗ್ ಬಗ್ಗೆ ನಿಮಗೆಷ್ಟು ಗೊತ್ತು?

ದೇಹದ ತೂಕ ಇಳಿಸಿಕೊಳ್ಳಲು ಏನೇನೋ ಕಸರತ್ತು ಮಾಡಲಾಗುತ್ತಿದೆ. ವಿದೇಶದಲ್ಲಿ ಫಿಟ್‌ನೆಸ್‌ಗಾಗಿ ಹೊಸ ಕಸರತ್ತು ಆರಂಭವಾಗಿದ್ದು, ಜಾಗಿಂಗ್ ಜೊತೆ ಪರಿಸರವನ್ನೂ ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸವಿದು. 

Plogginng a new fitness trend foreign counties

ಇತ್ತೀಚೆಗೆ ಮೆಕ್ಸಿಕೋ ನಗರದ 4 ಸಾವಿರ ಪ್ರಜೆಗಳು ಒಂದೇ ದಿನ ಪ್ಲಾಗಿಂಗ್ ಮಾಡಿ ವಿಶ್ವದಾಖಲೆ ಬರೆದರು. ಆದರೆ ಭಾರತದಲ್ಲಿ ಪ್ರತಿದಿನ ಲಕ್ಷಾಂತರ ಮಂದಿ ಪ್ಲಾಗಿಂಗ್ ನಡೆಸುತ್ತಾರೆ. ಆದರದು ದಾಖಲೆಗಾಗಿ ಅಲ್ಲ. ಬದಲಾಗಿ ಹೊಟ್ಟೆಪಾಡಿಗೆ.

ಏನಪ್ಪಾ ಇದು ಪ್ಲಾಗಿಂಗ್ ಎಂದ್ರಾ? ಸಧ್ಯಕ್ಕಿದು ಫಿಟ್ನೆಸ್ ಲೋಕದ ಹೊಸ ಟ್ರೆಂಡ್.

ಪಿಕ್ ಅಂಡ್ ಜಾಗ್. ಅಂದರೆ, ಜಾಗ್ ಮಾಡ್ತಾ ಮಾಡ್ತಾ ಕಸ ಹೆಕ್ಕೋ ಕಸರತ್ತೇ ಪ್ಲಾಗಿಂಗ್.  ನೀವು ಫಿಟ್ನೆಸ್ ಫ್ರೀಕ್ ಆಗಿದ್ದು, ಜೊತೆಗೆ ಪರಿಸರ ಪ್ರೇಮಿಯೂ ಹೌದೆಂದಾದಲ್ಲಿ ಪ್ಲಾಗಿಂಗನ್ನು ದೈನಂದಿನ ಜೀವನದ ಭಾಗ ಮಾಡಿಕೊಳ್ಳಲೇಬೇಕು. ಏಕೆಂದರೆ ಇಲ್ಲಿ ಸಮಾಜ ಸೇವೆ ತೃಪ್ತಿಯೊಂದಿಗೆ ಫಿಟ್ನೆಸ್ ಬೋನಸ್

2016ರಲ್ಲಿ ಸ್ವೀಡನ್‌ನ ಸ್ವೀಡೆ ಎರಿಕ್ ಆಲ್ಸ್ಟಾರ್ಮ್ ಎಂಬಾತ ಹುಟ್ಟುಹಾಕಿದ ಈ ಟ್ರೆಂಡ್ ಈಗ ಜಗತ್ತಿನಾದ್ಯಂತ ಖ್ಯಾತಿ ಪಡೆಯುತ್ತಿದೆ. ಸುಮ್ಮನೆ ಓಡುವ ಬದಲು ಹೀಗೆ ಪ್ಲ್ಯಾಸ್ಟಿಕ್ ಸೇರಿ ಇತರೆ ತ್ಯಾಜ್ಯಗಳನ್ನು ಹೆಕ್ಕುತ್ತಾ ಓಡುವುದರಿಂದ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಬಹುದು. ಏಕೆಂದರೆ ಇಲ್ಲಿ ಬಗ್ಗಿ ಏಳುವುದೂ ಇರುತ್ತದೆ. ಇದರಿಂದ ದೇಹ ಉತ್ತಮ ಶೇಪ್ ಪಡೆದುಕೊಳ್ಳುತ್ತದೆ. ನಿಮ್ಮ ಆರೋಗ್ಯದೊಂದಿಗೆ ಪರಿಸರದ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುತ್ತಾರೆ ಎರಿಕ್. 

Plogginng a new fitness trend foreign counties

ಹೌದಲ್ಲವೇ? ಭಾರತದಂಥ ಹೆಚ್ಚು ಜನಸಂಖ್ಯೆ ಇರುವ, ಅದರಲ್ಲೂ ಯುವಜನತೆ ಹೆಚ್ಚಿರುವ ರಾಷ್ಟ್ರದಲ್ಲಿ ಬಹುತೇಕ ಪ್ರಜೆಗಳು ಪ್ಲಾಗಿಂಗನ್ನು ತಮ್ಮ ಲೈಫ್‌ಸ್ಟೈಲ್‌ಗೆ ಅಳವಡಿಸಿಕೊಂಡಲ್ಲಿ ಸ್ವಚ್ಛ, ಸುಂದರ, ಸದೃಢ ಭಾರತದ ಕನಸು ನನಸಾಗಲು ಹೆಚ್ಚಿನ ಸಮಯವೇ ಬೇಡ.
 

Latest Videos
Follow Us:
Download App:
  • android
  • ios