ಬಾಬಾ ರಾಮ್ ದೇವ್ ನೀಡಿದ್ದ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ತಿರುಗೇಟು ನೀಡುವ ಬರದಲ್ಲಿ ನರೇಂದ್ರ ಮೋದಿ ವರನ್ನು ಎಳೆದು ತಂದಿದ್ದಾರೆ.
ನವದೆಹಲಿ[ಮೇ. 27] ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿ ಬಾಬಾ ರಾಮ್ ದೇವ್ ಮಾತನಾಡಿದ್ದರು. 3ನೇ ಮಗುವಿಗೆ ಮತದಾನದ ಹಕ್ಕು ಸರಕಾರಿ ಸೌಲಭ್ಯಗಳನ್ನು ತಿರಸ್ಕರಿಸಿರುವ ಕಾನೂನು ಜಾರಿಯಾಗಬೇಕು ಎಂದು ರಾಮ್ ದೇವ್ ಹೇಳಿದ್ದರು.
ರಾಮ್ ದೇವ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಓವೈಸಿ, 3ನೇ ಮಕ್ಕಳಿಗೆ ಮತದಾನದ ಹಕ್ಕು ನೀಡಬಾರದು ಎಂದಾದರೆ ಪ್ರಧಾನಿ ನರೇಂದ್ರ ಮೋದಿ ಮತದಾನದ ಹಕ್ಕನ್ನೇ ಕಳೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಜನರನ್ನು ಬೇಡದ ವಿಚಾರಗಳ ಬಗ್ಗೆ ಸೆಳೆಯುವ ಯತ್ನ ಮಾಡಬಾರದು. ರಾಮ್ ದೇವ್ ಹೇಳಿಕೆ ಬೇಡದ ಕಾರಣಕ್ಕೆ ಪ್ರಾಮುಖ್ಯ ಪಡೆದುಕೊಳ್ಳುತ್ತಿದೆ ಎಂದು ಓವೈಸಿ ಹೇಳಿದ್ದಾರೆ.
