ನವದೆಹಲಿ[ಸೆ.21]: ಅಪರಾಧಿಗಳು, ಕ್ರಿಮಿನಲ್‌ಗಳನ್ನು ಸುಲಭವಾಗಿ ಪತ್ತೆ ಹಚ್ಚುವ ಉದ್ದೇಶದಿಂದ ಚೀನಾ ರೀತಿ ‘ಫೇಶಿಯಲ್‌ ರೆಕಗ್ನಿಷನ್‌’ (ಮುಖ ಗುರುತು) ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಭಾರತ ಮುಂದಾಗಿದೆ.

ಸುಮ್‌ ಸುಮ್ನೆ ನೆರೆ ಪರಿಹಾರ ಪಡೆದ್ರೆ ಕ್ರಿಮಿನಲ್ ಕೇಸಾಗುತ್ತೆ ಹುಷಾರ್..!

ಮುಂದಿನ ತಿಂಗಳು ಈ ಕುರಿತಾದ ಟೆಂಡರ್‌ ಅನ್ನು ಸರ್ಕಾರ ತೆರೆಯಲಿದೆ. ದೇಶಾದ್ಯಂತ ಅಳವಡಿಸಲಾಗಿರುವ ಸರ್ವೇಕ್ಷಣಾ ಕ್ಯಾಮೆರಾಗಳು ಸೆರೆ ಹಿಡಿಯುವ ಚಿತ್ರಗಳನ್ನು ಒಂದು ಕಡೆ ಕೇಂದ್ರೀಕರಿಸುವ ವ್ಯವಸ್ಥೆ ಇದಾಗಿದೆ. ನಂತರ ಅದನ್ನು ಪಾಸ್‌ಪೋರ್ಟ್‌ನಿಂದ ಬೆರಳಚ್ಚುವರೆಗೆ ಸಂಗ್ರಹಿಸಲಾಗಿರುವ ವಿವಿಧ ದತ್ತಾಂಶದ ಜತೆ ಜೋಡಣೆ ಮಾಡಲಾಗುತ್ತದೆ. ತನ್ಮೂಲಕ ಅಪರಾಧಿಗಳು, ತಲೆಮರೆಸಿಕೊಂಡಿರುವ ವ್ಯಕ್ತಿಗಳು ಹಾಗೂ ಮೃತದೇಹಗಳ ಗುರುತು ಪತ್ತೆಗೆ ಈ ವ್ಯವಸ್ಥೆ ಬಳಸಿಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಕಡಿಮೆ ಸಂಖ್ಯೆಯ ಪೊಲೀಸ್‌ ಬಲವನ್ನು ಹೊಂದಿರುವ ಸರ್ಕಾರಕ್ಕೆ ಫೇಶಿಯಲ್‌ ರೆಕಗ್ನಿಷನ್‌ ವ್ಯವಸ್ಥೆಯಿಂದ ಅನುಕೂಲವಾಗುತ್ತದೆ. ದೇಶದಲ್ಲಿ ಸದ್ಯ 724 ನಾಗರಿಕರಿಗೆ ಓರ್ವ ಪೊಲೀಸ್‌ ಸಿಬ್ಬಂದಿ ಇದ್ದಾರೆ. ಇದು ಜಾಗತಿಕ ಸರಾಸರಿಗಿಂತ ತೀರಾ ಕಡಿಮೆ.

ನಾರಾಯಣ ಗೌಡ ಒಬ್ಬ ಕ್ರಿಮಿನಲ್‌: ಎಚ್‌ಡಿಕೆ

ಆದರೆ ಜನರಿಗೆ ಅರಿವಿಲ್ಲದೆಯೇ ಅವರ ಮುಖಚಿತ್ರ ತೆರೆದು ಅದನ್ನು ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಕ್ರಮ ವೈಯಕ್ತಿಕ ಸ್ವಾತಂತ್ರ್ಯ ಹರಣ ಎಂಬ ಆರೋಪ ಈ ಹಿಂದೆಯೇ ಚೀನಾದಲ್ಲಿ ಕೇಳಿಬಂದಿದೆ. ಭಾರತದಲ್ಲಿ ಖಾಸಗಿತನದ ಮಾಹಿತಿ ಕುರಿತಂತೆ ಯಾವುದೇ ನಿರ್ದಿಷ್ಟಕಾನೂನು ಇಲ್ಲ. ಈ ರೀತಿ ಕಾನೂನು ಹೊಂದಿಲ್ಲದ ಏಕೈಕ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದಾಗಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.