ಬೆಳಗಾವಿ, [ಮೇ.17]: ಅನಾರೋಗ್ಯ ಬಳಲುತ್ತಿದ್ದ ಎಂಇಎಸ್ ಮಾಜಿ ಶಾಸಕ ಸಂಭಾಜಿ ಪಾಟೀಲ್  ನಿಧನರಾಗಿದ್ದಾರೆ.

ಅನಾರೋಗ್ಯ ಹಿನ್ನೆಲೆಯಲ್ಲಿ ಸಂಭಾಜಿ ಪಾಟೀಲ್ ಅವರು ಹಲವು ದಿನಗಳಿಂದ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು [ಶುಕ್ರವಾರ] ರಾತ್ರಿ ಕೊನೆಯುಸಿರೆಳೆದರು.

ಬೆಂಗಳೂರು: ರೈಲಿನಿಂದ ಬಿದ್ದು ಮಾಜಿ ಶಾಸಕನ ಪುತ್ರ ಸಾವು

ಸಂಭಾಜಿ ಪಾಟೀಲ್ ಅವರು ಎಂಇಎಸ್ ನಿಂದ ಒಂದು ಬಾರಿ ಶಾಸಕ, ನಾಲ್ಕು ಬಾರಿ ಬೆಳಗಾವಿಯ ಮೇಯರ್ ಆಗಿದ್ದರು. ನಾಲ್ಕು ತಿಂಗಳ ಹಿಂದಷ್ಟೇ  ಸಂಭಾಜಿ ಪಾಟೀಲ್ ಅವರ ಮಗ ಸಾಗರ್ ಬೆಂಗಳೂರಿನಲ್ಲಿ ರೈಲಿನಿಂದ ಬಿದ್ದು ಸಾವನ್ನಪ್ಪಿದ್ದರು.