Asianet Suvarna News Asianet Suvarna News

ಹಿಂದೂ ರಾಷ್ಟ್ರ ಹೇಳಿಕೆ ಸಮರ್ಥಿಸಿಕೊಂಡ ಸೇನ್!

ಹಿಂದೂ ರಾಷ್ಟ್ರ ಅಭಿಪ್ರಾಯ ಸಮರ್ಥಿಸಿಕೊಂಡ ನ್ಯಾಯಮೂರ್ತಿ| ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಸುದೀಪ್ ರಂಜನ್ ಸೇನ್| ಭಾರತ ಹಿಂದೂ ರಾಷ್ಟ್ರ ಎಂದು ಹೇಳಿದ್ದ ಸುದೀಪ್ ರಂಜನ್ ಸೇನ್| ತಾವು ಯಾವುದೇ ರಾಜಕೀಯ ಪಕ್ಷ, ಸಂಘಟನೆಗೆ ಸೇರಿದವರಲ್ಲ ಎಂದ ಸೇನ್| ‘ಭಾರತ ಇಸ್ಲಾಮಿಕ್ ರಾಷ್ಟ್ರವಾಗಬಾರದೆಂಬುದೇ ತಮ್ಮ ಕಳಕಳಿ’| ಸೇನ್ ಹೇಳಿಕೆಗೆ ರಾಜಕೀಯ ನೇತಾರರು, ನಿವೃತ್ತ ನ್ಯಾಯಮೂರ್ತಿಗಳ ವಿರೋಧ  

Meghalaya Judge Defends His Comments on Hindu Rashtra
Author
Bengaluru, First Published Dec 15, 2018, 8:31 PM IST

ಶಿಲ್ಲಾಂಗ್(ಡಿ.15): ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು ಎಂದು ಸಲಹೆ ನೀಡಿದ್ದ, ಮೇಘಾಲಯ ಹೈಕೋರ್ಟ್ ನ್ಯಾಯಮೂರ್ತಿ ಸುದೀಪ್ ರಂಜನ್ ಸೇನ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನ್ಯಾಯಮೂರ್ತಿ ಸುದೀಪ್ ರಂಜನ್ ಸೇನ್, ದೇಶದ ಜಾತ್ಯಾತೀತ ತತ್ವಕ್ಕೆ ಧಕ್ಕೆ ತರುವಂತ ಯಾವುದೇ ಹೇಳಿಕೆಯನ್ನು ತಾವು ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತ ಇಸ್ಲಾಮಿಕ್ ದೇಶವಾಗಿ ಪರಿವರ್ತನೆಯಾಗಬಾರದು ಎಂದಷ್ಟೇ ತಾವು ಹೇಳಿದ್ದಾಗಿ ಸುದೀಪ್ ರಂಜನ್ ಸೇನ್ ಸ್ಪಷ್ಟನೆ ನೀಡಿದ್ದಾರೆ.

ಸುದೀಪ್ ರಂಜನ್ ಸೇನ್ ಹೇಳಿಕೆ ರಾಜಕೀಯ ಮತ್ತು ನ್ಯಾಯಾಂಗ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಹಲವು ರಾಜಕೀಯ ನೇತಾರರು ಮತ್ತು ನಿವೃತ್ತ ನ್ಯಾಯಮೂರ್ತಿಗಳು ಸೇನ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಮಧ್ಯೆ ತಾವು ಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಗೆ ಸೇರಿದವರಲ್ಲ ಎಂದು ಸ್ಪಷ್ಟಪಡಿಸಿರುವ ಸೇನ್, ವಿಭಜನೆ ವೇಳೆ ಪಾಕಿಸ್ತಾನ ಇಸ್ಮಾಮಿಕ್ ರಾಷ್ಟ್ರವಾದಂತೆ ಭಾರತ ಕೂಡ ಹಿಂದೂ ರಾಷ್ಟ್ರವಾಗಬೇಕಿತ್ತು ಎಂಬುದಷ್ಟೇ ತಮ್ಮ ಅನಿಸಿಕೆಯಾಗಿತ್ತು ಎಂದು ಹೇಳಿದ್ದಾರೆ.

ಭಾರತ ಹಿಂದೂ ದೇಶ: ಮೋದಿ ಮಾಡ್ತಾರೆ ಎಂದ ಹೈಕೋರ್ಟ್ ನ್ಯಾಯಾಧೀಶ!
 

Follow Us:
Download App:
  • android
  • ios