ಮೇಘಾಲಯ ಹೈಕೋರ್ಟ್ ತನ್ನ ತೀರ್ಪೊಂದರಲ್ಲಿ ಭಾರತದ ಇತಿಹಾಸ ಹಾಗೂ ವಿಭಜನೆ ಮತ್ತು ಈ ಸಂದರ್ಭದಲ್ಲಿ ಸಿಖ್ಖರು, ಹಾಗೂ ಹಿಂದೂಗಳ ಮೇಲೆ ನಡೆದ ಹಲ್ಲೆಯನ್ನು ಉಲ್ಲೇಖಿಸಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕಿತ್ತು ಎಂದಿದ್ದಾರೆ. ಭಾರತ ಹಾಗೂ ಪಾಕ್ ವಿಭಜನೆ ಧರ್ಮದ ಆಧಾರದಲ್ಲಿ ನಡೆದಿತ್ತು. ಇದರ ಅನ್ವಯ ಪಾಕ್ ತನ್ನನ್ನು ತಾನು ಇಸ್ಲಾಂ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಹೀಗಿರುವಾಗ ಭಾರತದಲ್ಲೇಕೆ ಜಾತ್ಯಾತೀತ ಆಡಳಿತವಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಯಾರೂ ಕೂಡಾ ಭಾರತವನ್ನು ಮತ್ತೊಂದು ಇಸ್ಲಾಂ ದೇಶವನ್ನಾಗಿ ಪರಿವರ್ತಿಸಲು ಯತ್ನಿಸಬಾರದು. ಒಂದು ವೇಳೆ ಹೀಗಾದಲ್ಲಿ ಅದು ಭಾರತ ಹಾಗೂ ವಿಶ್ವಕ್ಕೇ ಆತಂಕಕಾರಿ ದಿನವಾಗಲಿದೆ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವ ಕೋರ್ಟ್, ಸರ್ಕಾರ ಈ ಪ್ರಕರಣದ ಗಂಭೀರತೆಯನ್ನು ಅರ್ಥೈಸಿಕೊಂಡು ಅಗತ್ಯವಾದ ಕ್ರಮ ಕೈಗೊಳ್ಳುತ್ತದೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಷ್ಟ್ರಹಿತವನ್ನು ಗಮನದಲ್ಲಿಟ್ಟುಕೊಂಡು ಇದಕ್ಕೆ ತಮ್ಮ ಸಂಪೂರ್ಣ ಸಹಕಾರ ನೀಡಬೇಕು ಎಂದಿದೆ. ಅಲ್ಲದೇ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದಿಂದ ಭಾರತಕ್ಕೆ ಬರುವ ಹಿಂದೂ, ಸಿಖ್, ಜೈನರು, ಬೌದ್ಧರು, ಪಾರ್ಸಿ, ಖಾಸಿ ಇತ್ಯಾದಿ ಧರ್ಮದವರಿಗೆ ಯಾವುದೇ ಷರತ್ತು ವಿಧಿಸದೆ ಭಾರತದ ನಾಗರಿಕತ್ವ ನೀಡಬೇಕು ಎಂದೂ ಕೇಂದ್ರಕ್ಕೆ ಮನವಿ ಮಾಡಿದೆ.

ಡಿ. 10 ರಂದು ಇಂತಹುದ್ದೊಂದು ಮನವಿ ಮಾಡಿರುವ ಮೇಘಾಲಯ ನ್ಯಾಯಾಲಯದ ನ್ಯಾ| ಸಂದೀಪ್ ರಂಜನ್ ಸೇನ್ ಬಾಂಗ್ಕಲಾದೇಶದಿಂದ ಬಂದಿರುವ ಬಂಗಾಳಿ ಹಿಂದೂಗಳು ಹಾಗೂ ಪಾಕಿಸ್ತಾನ ವಿಭಜನೆ ವೇಳೆ ಸಿಖ್ ಹಾಗೂ ಹಿಂದೂಗಳ ಮೇಲೆ ನಡೆದ ದೌರ್ಜನ್ಯ ಕುರಿತಾಗಿ ನಡೆದ ವಿಚಾರಣೆ ವವೇಳೆ ಇದ್ನನು ಉಲ್ಲೇಖಿಸಿದ್ದಾರೆ.