Asianet Suvarna News Asianet Suvarna News

ವೈಯಾಲಿಕಾವಲ್‌ ಡ್ರಗ್ಸ್ ಪ್ರಕರಣ , ಮೆಡಿಕಲ್ ಶಾಪ್ ಮಾಲೀಕನ ಬಂಧನ

ವೈಯಾಲಿಕಾವಲ್‌ನ ಕೋದಂಡರಾಮಪುರದಲ್ಲಿ ಯುಕರಿಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ಔಷಧ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.

Medical shop owner arrested for unsurprisingly selling drugs
Author
Bangalore, First Published Nov 23, 2019, 1:04 PM IST

ಬೆಂಗಳೂರು(ನ.23): ವೈಯಾಲಿಕಾವಲ್‌ನ ಕೋದಂಡರಾಮಪುರದಲ್ಲಿ ಯುಕರಿಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ಔಷಧ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ.

ಟೈಡಾಲ್ ಟ್ಯಾಬ್ಲೆಟ್ ಡ್ರಗ್ಸ್ ಮಾದರಿ ಬಳಸಿ ಇಬ್ಬರು ಯುವಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಔಷಧ ನೀಡಿದ್ದ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್‌ನ್ನು ಪೊಲೀಸರು ಬಂಧಿಸಿದ್ದಾರೆ.

ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಶಂಕೆ: ಯುವಕರಿಬ್ಬರ ಶಂಕಾಸ್ಪದ ಸಾವು!

ಅನಧಿಕೃತವಾಗಿ ಔಷಧ ಮಾರಾಟ ಮಾಡಿದ ಹಿನ್ನಲೆ ಆರೋಪಿ ಬಂಧನ ಮಾಡಲಾಗಿದ್ದು, ನವಂಬರ್  20 ರಂದು ವೈಯಾಲಿಕಾವಲ್ ಅಭಿಷೇಕ್ ಮತ್ತು ಗೋಪಿ ಎಂಬವರು ಮೃತಪಟ್ಟಿದ್ದರು. ರಾಜಾಜಿನಗರದ ಮನ್ ದೀಪ್ ಫಾರ್ಮ್ ಗೆ ನಲ್ಲಿ ಟೈಡಾಲ್ ಟ್ಯಾಬ್ಲೆಟ್, ಸಿರಿಂಜ್, ಡಿಸ್ಟಿಲ್ ವಾಟರ್ ಖರೀದಿ

ಮೃತ ಗೋಪಿ ನವೆಂಬರ್ 17 ರಂದು ಮೆಡಿಕಲ್ ಶಾಪ್ ಗೆ ತೆರಳಿ ಔಷಧ ಖರೀದಿಸಿ ತಂದಿದ್ದ. ಬಳಿಕ ವೈಯಾಲಿಕಾವಲ್‌ನ ಅಭಿಷೇಕ್ ಮನೆಯಲ್ಲಿ ಮೂವರು ಮೆಡಿಕಲ್‌ನಿಂದ ಖರೀದಿಸಿದ ಔಷಧ ಸೇವಿಸಿದ್ದರು. ಡಿಸ್ಟಿಲ್ ವಾಟರ್‌ನಲ್ಲಿ ಕ್ರಶ್ ಮಾಡಿ ಸಿರಿಂಜ್ ಮೂಲಕ ಇಂಜೆಕ್ಟ್ ಮಾಡಿಕೊಂಡಿದ್ದರು. ಹೆಚ್ಚಿನ ಡೋಸೆಜ್ ಶರೀರಕ್ಕೆ ಸೇರಿದ ಹಿನ್ನಲೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಭಿಷೇಕ್ ಮತ್ತು ಗೋಪಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿದ್ದರು.

ಗಂಡನ ಮನೆಯವರ ಕಿರುಕುಳ: ಗರ್ಭಿಣಿ ಆತ್ಮಹತ್ಯೆ

ಇದೇ ಮಾದರಿಯಲ್ಲಿ ಸುಹಾಸ್ ಚಿಟ್ಟೆಗೂ ಔಷಧ ಇಂಜೆಕ್ಟ್ ಮಾಡಿದ್ದು, ಸದ್ಯ ಸುಹಾಸ್‌ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಸುಹಾಸ್ ಚಿಟ್ಟೆ ಹೇಳಿಕೆ ಮೇರೆಗೆ ಮೆಡಿಕಲ್ ಶಾಪ್ ಮಾಲೀಕ ಮನೀಶ್ ಕುಮಾರ್‌ನ್ನು ಪೊಲೀಸರು ಬಂಧಿಸಿದ್ದಾರೆ. ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಸ್ಕಿ ಹೊಡೆದು, ಶಿರಬಾಗಿ ನಮಿಸಿ ದೇವರ ಕಿರೀಟ ಕದ್ದ!, ವಿಡಿಯೋ ವೈರಲ್

Follow Us:
Download App:
  • android
  • ios