ನವದೆಹಲಿ (ಡಿ. 18): ಒಂದು ಕಡೆ ಸ್ಟಾಲಿನ್ ‘ರಾಹುಲ್ ಮುಂದಿನ ಪ್ರಧಾನಿ’ ಎಂದು ಹೇಳಿದ್ದಾರೆ. ಇದರಿಂದ ಮಮತಾ, ಮಾಯಾವತಿ ಸಿಟ್ಟಾಗಿದ್ದಾರೆ.

ಪಂಚರಾಜ್ಯ ಚುನಾವಣೆ ಸೋಲಿನ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ ಮೋದಿ-ಶಾ

ಮೂರು ಚುನಾವಣೆ ಗೆದ್ದುಕೊಂಡರೂ ರಾಹುಲ್‌ಗೆ ಒಂದು ನೆಪ ಮಾತ್ರದ ಅಭಿನಂದನೆ ಸಲ್ಲಿಸಲು ಈ ಇಬ್ಬರು ಗಟ್ಟಿಗಿತ್ತಿಯರಿಗೆ ಪುರುಸೊತ್ತಿಲ್ಲ. ಮಮತಾ, ಮಾಯಾವತಿ, ಕೆಸಿಆರ್, ನವೀನ್ ಪಟ್ನಾಯಕ್ ಮುಂದಿನ ದಿನಗಳಲ್ಲಿ ಒಟ್ಟಾಗಬಹುದಂತೆ. ಮಾಯಾವತಿ ಮತ್ತು ಮಮತಾ ಇಬ್ಬರೂ ರಾಜಕೀಯವಾಗಿ ಅತಿ ಚಂಚಲೆಯರು ಮತ್ತು ವೈಯಕ್ತಿಕವಾಗಿ ಸದಾ ಮೂಗಿನ ಮೇಲೆ ಸಿಟ್ಟಿನ ಸ್ವಭಾವದವರು. ಯಾವಾಗ ಏನು ಯೋಚಿಸುತ್ತಾರೋ, ಮಾತನಾಡುತ್ತಾರೋ, ನಿರ್ಣಯಿಸುತ್ತಾರೋ ಹೇಳಲು ಆಗದು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ