ನವದೆಹಲಿ (ಡಿ. 18): ಹಿಂದಿ ರಾಜ್ಯಗಳ ಸೋಲಿನ ನಂತರ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಕಾಂಗ್ರೆಸ್ ಮೇಲೆ ಇನ್ನಷ್ಟು ಟೀಕೆ ಹೆಚ್ಚು ಮಾಡಿದ್ದಾರೆಯೇ ಹೊರತು ಕೋರ್ ಕಮಿಟಿಯಲ್ಲಾಗಲಿ, ಪಾರ್ಲಿಮೆಂಟ್ ಬೋರ್ಡ್‌ನಲ್ಲಾಗಲಿ ಸೋಲಿನ ಕಾರಣಗಳ ಬಗ್ಗೆ ಯಾವುದೇ ಚರ್ಚೆ ನಡೆಸುವ ಗೊಡವೆಗೆ ಹೋಗಿಲ್ಲ.

ಸೋನಿಯಾ ನಿರ್ಧಾರ ಕೇಳಿ ರೇಗಾಡಿದ್ದ ಪೈಲೆಟ್: ಮುಗಿದಿಲ್ವಾ ರಾಜಸ್ಥಾನ ಫೈಟ್?

ಬದಲಾಗಿ ಸೋತ ಮರುದಿನವೇ ಅಮಿತ್ ಶಾ ಮುಂದಿನ 4 ತಿಂಗಳ ಲೋಕಸಭಾ ಚುನಾವಣೆ ತಯಾರಿಯ ರೋಡ್ ಮ್ಯಾಪ್ ಬಿಡುಗಡೆ ಮಾಡಿದ್ದಾರೆ. ಈಗ ಸೋಲಿನ ಬಗ್ಗೆ ತಾವೇ ಚರ್ಚೆ ಆರಂಭಿಸಿದರೆ ಲೋಕಸಭೆ ಮೇಲೆ ಎಲ್ಲ ಕಡೆಗೂ ನೆಗೆಟಿವ್ ಪರಿಣಾಮ ಬೀರಬಹುದು.

ಮ. ಪ್ರ.ದಲ್ಲಿ ಜ್ಯೋತಿರಾದಿತ್ಯರನ್ನು ಬಿಟ್ಟು ಕಮಲ್‌ನಾಥ್‌ಗೆ ಮಣೆ ಹಾಕಿದ್ಯಾಕೆ?

ಹೀಗಾಗಿ ನಾವೇ ಕಾಯಂ ಯುದ್ಧದ ಮೂಡ್‌ನಲ್ಲಿ ಇರೋಣ. ಆಗ ಕಾರ್ಯಕರ್ತರೂ ಹಾಗೇ ಇರುತ್ತಾರೆ ಎಂದು ಇಬ್ಬರು ನಿರ್ಧರಿಸಿರಬೇಕು. ಮತ್ತು ಸೋಲಿನ ಚರ್ಚೆಗೆ ಆಸ್ಪದ ನೀಡಿದರೆ ಕೆಲ ಹೊರ ಹೋಗಲೇಬೇಕು ಎಂದು ತೀರ್ಮಾನಿಸಿರುವ ನಾಯಕರು ಬಂಡಾಯ ಆರಂಭಿಸಬಹುದು ಎಂಬ ಆತಂಕವೂ ಇರಬಹುದು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ