ಮಂಡ್ಯ  : ಮಂಡ್ಯದ ಕನಗನಮರಡಿಯಲ್ಲಿ ನಡೆದ ಬಸ್ ದುರಂತ ಪ್ರಕರಣ ಪ್ರಕರಣಕ್ಕೆ ಕೇಂದ್ರದಿಂದ ನೀಡಿದ ಪರಿಹಾರದ ವಿಚಾರವಾಗಿ  ಜೆಡಿಎಸ್ ಹಾಗೂ ಸುಮಲತಾ ಬೆಂಬಲಿಗರ ನಡುವಿನ ವಾರ್ ಗೆ ಇದೀಗ ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಎಂಟ್ರಿಯಾಗಿದ್ದಾರೆ. 

ಬಸ್ ದುರಂತ ಪ್ರಕರಣಕ್ಕೆ ಕೇಂದ್ರದಿಂದ ನೀಡಿದ ಪರಿಹಾರದ ವಿಚಾರವಾಗಿ ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ  ಟ್ವೀಟ್ ಮಾಡಿದ್ದು, ಕೇಂದ್ರಕ್ಕೆ ಸಮಸ್ಯೆ ಸಂಬಂಧ ಪತ್ರ ಬರೆದವನು ನಾನು. ಹಣ ಬಂದಿದ್ದು ಎರಡು ತಿಂಗಳ ಹಿಂದೆ. ಕೇಂದ್ರಕ್ಕೆ ಪರಿಹಾರಕ್ಕಾಗಿ ಒತ್ತಾಯ ಮಾಡಿದವನು ನಾನು ಎಂದು ಟ್ವೀಟ್ ಮಾಡಿದ್ದಾರೆ. 

 

ಪರಿಹಾರದ ವಿಚಾರವಾಗಿ ಸುಮಲತಾ ಯಾವುದೇ ಹೇಳಿಕೆ ನೀಡದ ನಡುವೆಯೂ ಮೋದಿ ಬಳಿ ಮಾತನಾಡಿ ಪರಿಹಾರ ಹಣ ತಂದರು ಎಂದು ಸುಮಲತಾ ಬೆಂಬಲಿಗರು ಹೇಳುತಿದ್ದರೆ ಇತ್ತ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಕೇಂದ್ರದಿಂದ ಪರಿಹಾರ ಹಣ ತಂದಿದ್ದು ಸಿಎಂ ಎಚ್ಡಿಕೆ ಹಾಗೂ ಮಂಡ್ಯ ಡಿಸಿ ಮಂಜುಶ್ರೀ ಎಂದು ಹೇಳುತ್ತಿದ್ದಾರೆ. ಈ ಮಧ್ಯೆ ಶಿವರಾಮೇಗೌಡ ಎಂಟ್ರಿ ಕೊಟ್ಟು ಇದು ತನ್ನಿಂದ ಆದ ಕೆಲಸ ಎನ್ನುತ್ತಿದ್ದಾರೆ.  

ಇದೀಗ ಮಂಡ್ಯದ ಬಸ್ ದುರಂತವು ರಾಜಕೀಯ ದಾಳವಾಗುತಿದ್ದು, ಪರಿಹಾರ ತಮ್ಮಿಂದಲೇ ಆದ ಕೆಲಸ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.

ಮೊದಲು ವೋಟ್ ಮಾಡಿ ವೈರಲ್ ಆಗಿದ್ದ ಯೋಧನಿಂದ ಸುಮಲತಾ ಭೇಟಿ, ಊಟ

ಮಂಡ್ಯದ ಕನಗನಮರಡಿ ಗ್ರಾಮದಲ್ಲಿ ಕಳೆದ ನವೆಂಬರ್​ 24ರಂದು ಭೀಕರ ಬಸ್​ ದುರಂತ ಸಂಭವಿ 30 ಮಂದಿ ಸಾವನ್ನಪ್ಪಿದ್ದರು. ಈ ವೇಳೆ ರಾಜ್ಯ ಸರ್ಕಾರದಿಂದ  ಮೃತರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡಿತ್ತು. ಇದೀಗ ಕೇಂದ್ರ ಸರ್ಕಾರವೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದೆ. 

ಮಂಡ್ಯ ಬಸ್ ದುರಂತಕ್ಕೆ ಕೇಂದ್ರ ಪರಿಹಾರ: ಸುಮಲತಾಗೆ JDS ಸವಾಲ್