Asianet Suvarna News Asianet Suvarna News

ಮೊದಲು ವೋಟ್ ಮಾಡಿ ವೈರಲ್ ಆಗಿದ್ದ ಯೋಧನಿಂದ ಸುಮಲತಾ ಭೇಟಿ, ಊಟ!

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ವೋಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ ಯೋಧ ರಾಜನಾಯಕ್ ಇಂದು (ಗುರುವಾರ) ನೂತನ ಸಂಸದೆಯನ್ನು ಭೇಟಿಯಾದರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಕ್ಕಿಹೆಬ್ಬಾಳು ಗ್ರಾಮದ ಯೋಧ ರಾಜನಾಯಕ್,  ಅಂಚೆ ಮತದಾನ ಮಾಡಿ ಬಳಿಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು ವೈರಲ್ ಆಗಿತ್ತು.  

ಮಂಡ್ಯ (ಜೂ. 13): ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾಗೆ ವೋಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ ಯೋಧ ರಾಜನಾಯಕ್ ಇಂದು (ಗುರುವಾರ) ನೂತನ ಸಂಸದೆಯನ್ನು ಭೇಟಿಯಾದರು. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹಕ್ಕಿಹೆಬ್ಬಾಳು ಗ್ರಾಮದ ಯೋಧ ರಾಜನಾಯಕ್, ಅಂಚೆ ಮತದಾನ ಮಾಡಿ ಬಳಿಕ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು ವೈರಲ್ ಆಗಿತ್ತು.

ರಜೆಯಲ್ಲಿ ತವರೂರಿಗೆ ಬಂದಿರುವ ರಾಜನಾಯಕ್, ಮಂಡ್ಯದ ಪ್ರವಾಸಿ ಮಂದಿರದಲ್ಲಿ ಸುಮಲತಾ ಅವರನ್ನು ಭೇಟಿಯಾಗಿ ತೆಂಗಿನ ಸಸಿ ಉಡುಗೊರೆಯಾಗಿ ಕೊಟ್ಟು, ಶುಭ ಕೋರಿದರು. ರಾಜನಾಯಕ್ ಅಭಿಮಾನ ಕಂಡು ಸುಮಲತಾ ಜೊತೆಗೆ ಕೂರಿಸಿ ಊಟ ಮಾಡಿದ್ದು ವಿಶೇಷವಾಗಿತ್ತು. 

ಸುವರ್ಣನ್ಯೂಸ್‌ ಜೊತೆ ಮಾತನಾಡಿದ ರಾಜ ನಾಯಕ್, ‘ನಾನು ಮೊದಲಿನಿಂದಲೂ ಅಂಬರೀಷ್ ಅಭಿಮಾನಿ, ಸುಮಲತಾ ಕೂಡಾ ಒಳ್ಳೆಯ ಕೆಲಸ ಮಾಡ್ತಾರೆ ಎಂಬ ವಿಶ್ವಾಸದಿಂದ ಅವರಿಗೆ ವೋಟ್ ಮಾಡಿದ್ದೆ. ನನ್ನ ವೋಟ್ ಅಸಿಂಧು ಆಗಿದ್ದು ತುಂಬಾ ಬೇಸರವಾಗಿತ್ತು, ಆದ್ರೆ ಅವರು ಗೆದ್ದಿರೋದು ತುಂಬಾ ಖುಷಿ ತಂದಿದೆ’ ಎಂದು ಹೇಳಿದರು.

Video Top Stories