ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ಮೇಲೆ ದಿನೇಶ್ ಗುಂಡೂರಾವ್ ಮಹತ್ವದ ಸರ್ಜರಿಗೆ ಮುಂದಾಗಿದ್ದಾರೆ. ಪದಾಧಿಕಾರಿಗಳ ಪಟ್ಟಿ, ಪಕ್ಷ ವಿರೋಧಿ ಚಟುವಟಿಕೆ ಎಲ್ಲದಕ್ಕೂ ಒಂದು ಸೂಕ್ತ ನಿಯಮಾವಳಿ ಸಿದ್ಧಪಡಿಸಲು ಮುಂದಾಗಿದ್ದಾರೆ.

ಬೆಂಗಳೂರು[ಜು.26] ಕೆಪಿಸಿಸಿ ಪದಾಧಿಕಾರಿಗಳ ಬದಲಾವಣೆಗೆ ದಿಟ್ಟ ನಿರ್ಧಾರ ಕೈಗೊಳ್ಳಲು ಮುಂದಾಗಿರುವ ಗುಂಡೂರಾವ್ ಪದಾಧಿಕಾರಿಗಳ ಸಂಖ್ಯೆ ಕಡಿಮೆಗೊಳಿಸಲು ವರದಿ ಸಿದ್ಧಪಡಿಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

300ರಷ್ಟಿರುವ ಕೆಪಿಸಿಸಿ ಪದಾಧಿಕಾರಿಗಳ ಸಂಖ್ಯೆಯನ್ನು 150 ಕ್ಕೆ ಇಳಿಸಲು ಗುಂಡೂರಾವ್ರಾ ಚಿಂತನೆ ನಡೆಸಿದ್ದಾರೆ. 300 ಪದಾಧಿಕಾರಿಗಳಲ್ಲಿ ಕೆಲಸ ಮಾಡದವರ ಬದಲಾವಣೆ ಖಚಿತವಾಗಿದ್ದು ಇಂಥವರಿಗೆ ಪದಾಧಿಕಾರಿಗಳಿಗೆ ಕೆಪಿಸಿಸಿಯಿಂದ ಗೇಟ್ ಪಾಸ್ ನೀಡಲಿದ್ದಾರೆ. ಜತೆಗೆ ಎರಡು ಹುದ್ದೆ ಹೊಂದಿದವರನ್ನು ಒಂದೆ ಹುದ್ದೆಗೆ ಸೀಮಿತ ಮಾಡಲಿದ್ದಾರೆ.

ಪರಂ ಬಣದಿಂದ ಸಿದ್ದರಾಮಯ್ಯಗೆ ಹುದ್ದೆ ತಪ್ಪಿಸಲು ಪ್ಲಾನ್..?

ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ನಿಂದ ವರದಿ ಕೇಳಿರುವ ಗುಂಡೂರಾವ್ ಆಗಸ್ಟ್ 12 ರೊಳಗೆ ವರದಿ ನೀಡುವಂತೆ ತಿಳಿಸಿದ್ದಾರೆ. ವರದಿ ಅನ್ವಯ ಪದಾಧಿಕಾರಿಗಳ ಕಾರ್ಯಸಾಧನೆ ಗಮನಿಸಿ ಪದಾಧಿಕಾರಿಗಳ ಬದಲಾವಣೆ ಮಾಡಲಿದ್ದಾರೆ.

ಸಿದ್ದುಗೆ ಚುನಾವಣೆ ಎಂದರೆ ಅಲರ್ಜಿಯಾಗುತ್ತಿದೆಯಂತೆ

ಕೆಪಿಸಿಸಿಗೆ ಪದಾಧಿಕಾರಿಗಳಿಗೆ ಶೋಕಾಸ್ ನೋಟಿಸ್ ಇಲ್ಲ.
ಇನ್ನು ಮುಮದೆ ನೋಟೀಸ್ ನೀಡುವ ಬದಲು, ಕೆಲಸ ಮಾಡದೇ ಇರುವ ಪದಾಧಿಕಾರಿಗಳನ್ನ ನೇರವಾಗಿ ಬದಲಾವಣೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದಾರೆ. ಆಗಸ್ಟ್ 15 ಕ್ಕೆ ಪದಾಧಿಕಾರಿಗಳ ಬದಲಾವಣೆ ಪಟ್ಟಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರಿಗೆ ರವಾನೆಯಾಗಲಿದೆ.. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರಿಗೆ ಮಾತ್ರ ಸದ್ಯ ನೋಟಿಸ್ ನೀಡಲು ಗುಂಡೂರಾವ್ ನಿರ್ಧರಿಸಿದ್ದಾರೆ.