Asianet Suvarna News Asianet Suvarna News

ಸಿದ್ದುಗೆ ಚುನಾವಣೆ ಎಂದರೆ ಅಲರ್ಜಿಯಾಗುತ್ತಿದೆಯಂತೆ

  • ಚುನಾವಣೆಯಲ್ಲಿ ಜಾತಿ ರಾಜಕಾರಣ ಹೆಚ್ಚಾಗುತ್ತಿರುವುದಕ್ಕೆ ಸಿದ್ದು ಬೇಸರ
  • ಮೊದಲು ಸಿದ್ದರಾಮಯ್ಯ ಚುನಾವಣೆಗೆ ನಿಂತಾಗ ಜನರೆ 65 ಸಾವಿರ ಹಣ ನೀಡಿದ್ದರು 
Siddaramaiah Politics Future and Selected Part of  Prashanth Natu Column
Author
Bengaluru, First Published Jul 24, 2018, 12:47 PM IST

ವಿಧಾನಸಭೆಯಲ್ಲಿ ಚಾಮುಂಡೇಶ್ವರಿಯಿಂದ ಸೋತ ನಂತರ ಸಿದ್ದರಾಮಯ್ಯ ಅವರಿಗೆ ಚುನಾವಣೆ ಎಂದರೆ ಬೇಸರ ಆಗಿದೆಯಂತೆ. 1978ರಲ್ಲಿ ಮೊದಲ ಬಾರಿಗೆ ತಾಲೂಕು ಬೋರ್ಡ್ ಚುನಾವಣೆಗೆ ನಿಂತಿದ್ದೆ. ಆಗಿನಿಂದ ನನಗೆ ಎಲ್ಲ ಜಾತಿಯವರು ವೋಟು ಹಾಕೋರು.

ಆದರೆ 2006ರ ಉಪ ಚುನಾವಣೆಯಲ್ಲಿ ಮೊದಲ ಬಾರಿ ಜಾತಿ ಪ್ರಜ್ಞೆ ಮೇಲೆ ಚಾಮುಂಡೇಶ್ವರಿಯಲ್ಲಿ ಮತದಾನ ನಡೆಯಿತು. ಎಷ್ಟು ಕೆಲಸ ಮಾಡಿದ್ರೂ ದುಡ್ಡೇ ಮುಖ್ಯ ಆದರೆ ಏನ್ ಮಾಡೋದು ಹೇಳಿ. 1983ರಲ್ಲಿ ಮೊದಲ ಬಾರಿಗೆ ಶಾಸಕನಾಗಲು ಚುನಾವಣೆಗೆ ನಿಂತಾಗ 65 ಸಾವಿರ ಹಣವನ್ನು ಜನರೇ ಸಂಗ್ರಹಿಸಿ ಕೊಟ್ಟಿದ್ದರು.

ಆದರೆ ಈಗ ಚುನಾವಣೆ ಎಂದರೆ ಹೆದರಿಕೆ ಆಗುತ್ತದೆ. ಇದಕ್ಕೆ ಏನಾದರೂ ಕಾನೂನು ತರಬೇಕು ಬಿಡಿ. ಇಲ್ಲವಾದರೆ ಬಡವರು, ಮಧ್ಯಮ ವರ್ಗದವರು ಚುನಾವಣೆಗೆ ನಿಲ್ಲೋಕಾಗಲ್ಲ ಎಂದು ಸೋಲಿನ ಬೇಸರದಲ್ಲಿ ಸಿದ್ದು ದಿಲ್ಲಿ ಪತ್ರಕರ್ತರ ಬಳಿ ಮನಸ್ಸಿನ ನೋವನ್ನು ಹೇಳಿ ಕೊಳ್ಳುತ್ತಿದ್ದರು.

(ಪ್ರಶಾಂತ್ ನಾತು ಅಂಕಣದ ಆಯ್ದ ಭಾಗ)

Follow Us:
Download App:
  • android
  • ios