ಸೆಲೆಬ್ರೆಟಿ ಮೇಲೆ ಮಹಾ ಸರ್ಕಾರ ಸವಾರಿ, ಟೀಂ ಇಂಡಿಯಾಗೆ ಬೃಹತ್ ಗುರಿ; ಫೆ.8ರ ಟಾಪ್ 10 ಸುದ್ದಿ!
ವಿವಾದಿತ ಕೃಷಿ ಕಾಯ್ದೆ ಕುರಿತು ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ರಾಜ್ಯ ಸಭೆಯಲ್ಲಿ ಮಾತನಾಡಿದ್ದಾರೆ. ಇತ್ತ ಟ್ವೀಟ್ ಸಮರಕ್ಕೆ ಮಹರಾಷ್ಟ್ರ ಸರ್ಕಾರ ಹೊಸ ಆಯಾಮ ನೀಡಿದೆ. ಸಚಿನ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧ ತನಿಖೆಗೆ ಆದೇಶಿಸಿದೆ. ಚೆನ್ನೈ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಬೃಹತ್ ಗುರಿ, ಮತ್ತೆ ಸದ್ದು ಮಾಡಿದ ರಶ್ಮಿಕಾ ಮಂದಣ್ಣ ಸೇರಿದಂತೆ ಫೆಬ್ರವರಿ 8ರ ಟಾಪ್ 10 ಸುದ್ದಿ ಇಲ್ಲವೆ.
ನಾನು ಯಾರನ್ನೂ ಹಾದಿ ತಪ್ಪಿಸಿಲ್ಲ, ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಮಾತು!...
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನಿನ ಕುರಿತಂತೆ ಭುಗಿಲೆದ್ದಿರುವ ಪ್ರತಿಭಟನೆ ಕುರಿತು ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ವಿದೇಶಿ ವಿನಾಶಕಾರಿ ಸಿದ್ಧಾಂತದಿಂದ ನಾವು ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.
ದೇಶ ಮೊದಲು ಎಂದ ಸಚಿನ್, ಮಂಗೇಶ್ಕರ್, ಸೆಲೆಬ್ರೆಟಿಗಳ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನಿಖೆ!...
ರೈತ ಪ್ರತಿಭಟನೆ ಬಳಸಿಕೊಂಡು ದೇಶದ ವಿರುದ್ಧ ಪಿತೂರಿ ನಡೆಸಲು ಬಂದ ವಿದೇಶಿ ಸೆಲೆಬ್ರೆಟಿಗಳಿಗೆ ಸಚಿನ್ ಸೇರಿದಂತೆ ಭಾರತೀಯ ಸೆಲೆಬ್ರೆಟಿಗಳು ತಿರುಗೇಟು ನೀಡಿದ್ದರು. ಬಳಿಕ ಕಾಂಗ್ರೆಸ್ ಸಚಿನ್ ವಿರುದ್ಧ ಪ್ರತಿಭಟನೆ ನಡೆಸಿ ಕೂಡ ಆಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಮಹಾರಾಷ್ಟ್ರ ಸರ್ಕಾರ, ಸಚಿನ್, ಲತಾ ಮಂಗೇಶ್ಕರ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧ ತನಿಖೆಗೆ ಆದೇಶಿಸಿದೆ.
ಉತ್ತರಾಖಂಡ್ ದುರಂತ, 16 ಮಂದಿ ಜೀವ ಉಳಿಸಿದ ಮೊಬೈಲ್ ಸಿಗ್ನಲ್!...
ಉತ್ತರಾಖಂಡ್ ನೀರ್ಗಲ್ಲು ಸ್ಪೋಟ ದುರಂತದ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ. ಹೌದು ಐಟಿಬಿಪಿ ಪೊಲೀಸರು ರಕ್ಷಿಸಿದ ಹದಿನಾರು ಮಂದಿ ಪ್ರಾಣ ಉಳಿಸಿದ್ದು ಮೊಬೈಲ್ ಸಿಗ್ನಲ್ ಎಂದು ಪೊಲಿಸರೇ ಸ್ಪಷ್ಟಪಡಿಸಿದ್ದಾರೆ.
ಭಾರತದ ಚಹಾಕ್ಕೆ ಮಸಿ ಬಳಿಯಲು ಜಾಗತಿಕ ಸಂಚು: ಮೋದಿ!...
ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸುವ ಅಸ್ಸಾಂ ಮಾಲಾ ಯೋಜನೆ| ಭಾರತದ ಚಹಾಕ್ಕೆ ಮಸಿ ಬಳಿಯಲು ಜಾಗತಿಕ ಸಂಚು: ಮೋದಿ!
ಅಶ್ವಿನ್ ಝಲಕ್; ರೋಚಕ ಘಟ್ಟದತ್ತ ಚೆನ್ನೈ ಟೆಸ್ಟ್...
ಭಾರತ-ಇಂಗ್ಲೆಂಡ್ ನಡುವಿನ ಚೆನ್ನೈ ಟೆಸ್ಟ್ ಪಂದ್ಯ ರೋಚಕಘಟ್ಟದತ್ತ ಸಾಗುತ್ತಿದ್ದು, ಚಹಾ ವಿರಾಮದ ವೇಳೆಗೆ ಪ್ರವಾಸಿ ಇಂಗ್ಲೆಂಡ್ ತಂಡ 360 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ರಾಕಿ ಬಾಯ್ ಯಶ್ ಜತೆ ಕಾಣಿಸಿಕೊಂಡ ...
ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ರಾಕಿಂಗ್ ಸ್ಟಾರ್ ಯಶ್ ಭೇಟಿಯಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
WhatsApp ಬಳಸದ ರಶ್ಮಿಕಾ ಮಂದಣ್ಣ; ಏನೇ ಇದ್ದರೂ ಮ್ಯಾನೇಜರ್, ಅಮ್ಮನ ಕೇಳಿ!...
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಅಂತ ಗೊತ್ತು. ಆದರೆ ವಾಟ್ಸಪ್‌ನಿಂದ ದೂರು ಇರೋದು ಯಾಕೆ ಅಂತ ಗೊತ್ತಿಲ್ಲ. ರಶ್ಮಿಕಾ ಏನು ಹೇಳುತ್ತಾರೆ ಕೇಳಿ..
ಆ್ಯಂಡ್ರಾಯ್ಡ್ 12 ಬಿಡುಗಡೆಗೆ ಸಿದ್ಧವಾಗುತ್ತಿದೆಯಾ ಗೂಗಲ್?...
ಗೂಗಲ್ ಆಂಡ್ರಾಯ್ಡ್ 12 ವರ್ಷನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆಯಾ ಎಂಬ ವರದಿಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ. ಇದಕ್ಕೆ ಪುಷ್ಟಿ ಕೊಡುವಂತೆ ಪ್ಲೇ ಸ್ಟೋರ್‌ನಲ್ಲಿ ಆಂಡ್ರಾಯ್ಡ್ ಬೀಟಾ ಫೀಡ್‌ಬ್ಯಾಕ್ ಅಪ್‌ಡೇಟ್ ಕಾಣಿಸಿಕೊಂಡಿದೆ. ಆದರೆ, ಈ ಬಗ್ಗೆ ಗೂಗಲ್ ಯಾವುದೇ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇದೇ ತಿಂಗಳು ಹೊಚ್ಚ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಬಿಡುಗಡೆ!...
ಮಾರುತಿ ಸುಜುಕಿ ಸ್ವಿಫ್ಟ್ 3ನೇ ಜನರೇಶನ್ ಕಾರು 2018ರಲ್ಲಿ ಬಿಡುಗಡೆಯಾಗಿದೆ. ಇದೀಗ ಸ್ವಿಫ್ಟ್ ಫೇಸ್‌ಲಿಫ್ಟ್ ಕಾರು ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಹಲವು ವಿಶೇಷತೆಗಳನ್ನೊಳಗೊಂಡಿರುವ ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.
10 ರು. ನಾಣ್ಯ : ಮಹತ್ವದ ಸಲಹೆ ಇದು...
10 ರು. ನಾಣ್ಯ ಬಳಕೆ ಬಗ್ಗೆ ಮಹತ್ವದ ವಿಚಾರ ಇದು. ಬಳಕೆ ಬಗ್ಗೆ ಆತಂಕ ಇದೆಯಾ..? ಇದರ ಬಗ್ಗೆ ಯಾವುದೇ ರೀತಿಯ ಆತಂಕದ ಅಗತ್ಯವಿಲ್ಲ ಎಂದು ಹಾಸನ ಜಿಲ್ಲಾಧಿಕಾರಿ ಹೇಳಿದ್ದಾರೆ.