ಉತ್ತರಾಖಂಡ್ ದುರಂತ, 16 ಮಂದಿ ಜೀವ ಉಳಿಸಿದ ಮೊಬೈಲ್ ಸಿಗ್ನಲ್!
ಉತ್ತರಾಖಂಡ್ ನೀರ್ಗಲ್ಲು ಸ್ಪೋಟ ದುರಂತದ ಅಚ್ಚರಿಯ ವಿಚಾರವೊಂದು ಬೆಳಕಿಗೆ ಬಂದಿದೆ. ಹೌದು ಐಟಿಬಿಪಿ ಪೊಲೀಸರು ರಕ್ಷಿಸಿದ ಹದಿನಾರು ಮಂದಿ ಪ್ರಾಣ ಉಳಿಸಿದ್ದು ಮೊಬೈಲ್ ಸಿಗ್ನಲ್ ಎಂದು ಪೊಲಿಸರೇ ಸ್ಪಷ್ಟಪಡಿಸಿದ್ದಾರೆ.
ಉತ್ತರಾಖಂಡ್‌ನ ಚಮೀಲಿಯ ತಪೋವನದಲ್ಲಿ ನೀರ್ಗಲ್ಲು ಸ್ಪೋಟಿಸಿದ ಪರಿಣಾಮ ಧೌಲಿಗಂಗಾ ನದಿಯಲ್ಲಿ ಜಲಪ್ರಳಯವಾಗಿದೆ. ಇದರಿಂದಾಗಿ ಆಸು ಪಾಸಿನ ಪ್ರದೇಶದಲ್ಲೂ ನೀರು ತುಂಬಿದೆ. ಈ ದುರಂತದಲ್ಲಿ ಸರ್ಕಾರಿ ಕಂಪನಿ NTPC ಯೋಜನೆ ಸಂಬಂಧ ಕಾರ್ಯ ನಿರ್ವಹಿಸುತ್ತಿದ್ದ 170 ಕಾರ್ಮಿಕರು ನಾಪತ್ತೆಯಾಗಿದ್ದಾರೆ.
ಹೀಗಿದ್ದರೂ ITBP ತಪೋವನ ಗುಹೆಯಲ್ಲಿ ಸಿಲುಕಿದ್ದ 16 ಮಂದಿಯನ್ನು ಸುರಕ್ಷಿತವಾಗಿ ಹೊರ ತೆಗೆಯಲು ಯಶಸ್ವಿಯಾಗಿದ್ದಾರೆ. ಅದರಲ್ಲೂ ಈ ಹದಿನಾರು ಮಂದಿಯ ಜೀವ ಉಳಿಸಿದ್ದು ಮೊಬೈಲ್ ಸಿಗ್ನಲ್ ಎಂಬುವುದು ವಿಶೇಷ.
ಈ ಕಾರ್ಮಿಕರು ತಪೋವನ ಗುಹೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ಪ್ರವಾಹ ಬಂದಿದದೆ ಹಾಗೂ ಇವರೆಲ್ಲರೂ ನೀರು ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.
ಈ ಕಾರ್ಮಿಕರು ತಪೋವನ ಗುಹೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಹೀಗಿರುವಾಗಲೇ ಅಚಾನಕ್ಕಾಗಿ ಪ್ರವಾಹ ಬಂದಿದದೆ ಹಾಗೂ ಇವರೆಲ್ಲರೂ ನೀರು ಹಾಗೂ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದಾರೆ.
ಇದಾದ ಬಳಿಕ ಐಟಿಬಿಪಿ ಕಾರ್ಯಾಚರಣೆ ಮೂಲಕ ಹದಿನಾರು ಮಂದಿಯನ್ನು ಹೊರಗೆಳೆದಿದ್ದಾರೆ. ಗುಹೆಯಿಂದ ಹೊರತೆಗೆದ ದೃಶ್ಯವೂ ವೈರಲ್ ಆಗಿದೆ.
ಈ ಗುಹೆಯಿಂದ ಐಟಿಬಿಪಿ ಪೊಲೀಸರು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತಂದಿದ್ದು ಮಾತ್ರವಲ್ಲದೇ ಅವರಲ್ಲಿ ಉತ್ಸಾಹ ತುಂಬುವ ಕಾರ್ಯವನ್ನೂ ಮಾಡಿದ್ದಾರೆ.