ನವದೆಹಲಿ(ಫೆ.08): ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯ ಮಾರುತಿ ಸ್ವಿಫ್ಟ್ ಕಾರು ಇದೀಗ ಫೇಸ್‌ಲಿಫ್ಟ್ ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು ನೂತನ ಕಾರು ಮಾರುಕಟ್ಟೆ ಪ್ರವೇಶಿಸುತ್ತಿದೆ. ನೂತನ ಸ್ವಿಫ್ಟ್ ಕಾರು ಹೆಚ್ಚು ದಕ್ಷ ಎಂಜಿನ್, ಹೆಚ್ಚು ಪವರ್‌ ಹೊಂದಿದೆ.

2021ರಲ್ಲಿ ಗರಿಷ್ಠ ಮಾರಾಟವಾದ ಟಾಪ್ 5 ಕಾರು; ಇಲ್ಲಿದೆ ಲಿಸ್ಟ್!

ನೂತನ ಸ್ವಿಫ್ಟ್ ಕಾರು K12N ಡ್ಯುಯೆಲ್ ಜೆಟ್ ಎಂಜಿನ್ ಹೊಂದಿದೆ.  90 PS ಪವರ್ ಹೊಂದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಕಾರಿಗಿಂತ 7 PS ಹೆಚ್ಚು ಪವರ್‌ಫುಲ್ ಆಗಿದೆ. ಇನ್ನು ಗೇರ್‌ಬಾಕ್ಸ್‌ನಲ್ಲಿ ಯಾವುದೇ ಬದಲಾವಣೆ ಇಲ್ಲ. 5 ಸ್ಪೀಡ್ ಮಾನ್ಯುಯೆಲ್ ಹಾಗೂ 5 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 

ನೂತನ ಸ್ವಿಫ್ಟ್ ಕಾರಿನ ಬೆಲೆಯಲ್ಲೂ ಕೊಂಚ ಬದಲಾವಣೆಯಾಗಲಿದೆ. ಬೆಲೆ ಕೊಂಚ ಏರಿಕೆಯಾಗಲಿದೆ.  ಇದೇ ತಿಂಗಳ ಅಂತ್ಯದಲ್ಲಿ ನೂತನ ಸ್ವಿಫ್ಟ್ ಕಾರು ಬಿಡುಗಡೆಯಾಗುತ್ತಿದೆ. ಇಷ್ಟೇ ಅಲ್ಲ ಕಾರಿನ ಒಳಭಾಗದಲ್ಲಿ ಕ್ಯಾಬಿನ್ ಸೇರಿದಂತೆ ಕೆಲ ಬದಲಾವಣೆ ಮಾಡಲಾಗಿದೆ