ರೈತ ಪ್ರತಿಭಟನೆ ಬಳಸಿಕೊಂಡು ದೇಶದ ವಿರುದ್ಧ ಪಿತೂರಿ ನಡೆಸಲು ಬಂದ ವಿದೇಶಿ ಸೆಲೆಬ್ರೆಟಿಗಳಿಗೆ ಸಚಿನ್ ಸೇರಿದಂತೆ ಭಾರತೀಯ ಸೆಲೆಬ್ರೆಟಿಗಳು ತಿರುಗೇಟು ನೀಡಿದ್ದರು. ಬಳಿಕ ಕಾಂಗ್ರೆಸ್ ಸಚಿನ್ ವಿರುದ್ಧ ಪ್ರತಿಭಟನೆ ನಡೆಸಿ ಕೂಡ ಆಗಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ  ಮಹಾರಾಷ್ಟ್ರ ಸರ್ಕಾರ, ಸಚಿನ್, ಲತಾ ಮಂಗೇಶ್ಕರ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧ ತನಿಖೆಗೆ ಆದೇಶಿಸಿದೆ. 

ಮುಂಬೈ(ಫೆ.08): ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, ಗಾಯಕಿ ಲತಾ ಮಂಗೇಶ್ಕರ್, ನಟ ಸುನಿಲ್ ಶೆಟ್ಟಿ, ಅಕ್ಷಯ್ ಕುಮಾರ್ ಸೇರಿದಂತೆ ಭಾರತದ ಸೆಲೆಬ್ರೆಟಿಗಳು, ದೇಶ ಮೊದಲು, ನಮ್ಮ ಆತಂರಿಕ ವಿಚಾರದಲ್ಲಿ ಮೂಗುತೂರಿಸಬೇಡಿ ಎಂದು ಖಡಕ್ ವಾರ್ನಿಂಗ್ ಮಾಡಿದ್ದರು. ಆದರೆ ಈ ಟ್ವೀಟ್‌ನಲ್ಲಿ ರೈತರ ವಿರೋಧವಾಗಲಿ, ಕೇಂದ್ರ ಸರ್ಕಾರದ ಪರವಾಗಲಿ ಮಾತಾಡಿಲ್ಲ. ಆದರೆ ಕಾಂಗ್ರೆಸ್ ಹಾಗೂ ಶಿವಸೇನೆಗೆ ಇದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ, ಪವಾರ್ ಬಳಿಕ ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ನಾಯಕ

ಸಚಿನ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಸಚಿನ್ ಕಟೌಟ್‌ಗೆ ಯೂಥ್ ಕಾಂಗ್ರೆಸ್ ಮಸಿ ಬಳಿದರೆ, ಇತ್ತ ಎನ್‌ಸಿಪಿ ನಾಯಕ ಶರದ್ ಪವಾರ್, ಇತರ ಕ್ಷೇತ್ರದ ಬಗ್ಗೆ ಮಾತನಾಡುವಾಗ ಸಚಿನ್ ಎಚ್ಚರಿಕೆ ವಹಿಸಲಿ ಎಂದು ವಾರ್ನಿಂಗ್ ನೀಡಿದರು. ಪಂಜಾಬ್ ಕಾಂಗ್ರೆಸ್ ಸಂಸದ, ಸಚಿನ್ ಭಾರತ ರತ್ನಕ್ಕೆ ಅರ್ಹರಲ್ಲ ಎಂದಿದ್ದರು. ಇದಕ್ಕೆ ದೇಶಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು.

ಸಚಿನ್ ತೆಂಡುಲ್ಕರ್‌ಗೆ ಎಚ್ಚರಿಕೆ ನೀಡಿದ ಶರದ್ ಪವಾರ್‌ಗೆ ಭಾರತೀಯರಿಂದ ಮಂಗಳಾರತಿ!

ಈ ಎಲ್ಲಾ ಘಟನೆಗಳು ಕಾಂಗ್ರೆಸ್, ಶಿವಸೇನೆಯ ಮಹಾರಾಷ್ಟ್ರದ ಮೈತ್ರಿ ಸರ್ಕಾರ ಇದೀಗ ಭಾರತ ರತ್ನ ಸಚಿನ್ ತೆಂಡುಲ್ಕರ್, ಲತಾ ಮಂಗೇಶ್ಕರ್ ಸೇರಿದಂತೆ ಸೆಲೆಬ್ರೆಟಿಗಳ ವಿರುದ್ಧ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಸೆಲೆಬ್ರೆಟಿಗಳು ಟ್ವೀಟ್ ಹಿಂದೆ ಬಿಜೆಪಿ ಕೈವಾಡವಿದೆ. ಸೆಲೆಬ್ರೆಟಿಗಳ ಮೇಲೆ ಬಿಜೆಪಿ ಒತ್ತಡ ಹೇರಿ ಈ ರೀತಿ ಮಾಡುತ್ತಿದೆ. ಹೀಗಾಗಿ ತನಿಖೆಯ ಅಗತ್ಯವಿದೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

ದೇಶ ಮೊದಲು ಎಂದ ಸಚಿನ್ ತೆಂಡುಲ್ಕರ್‌ಗೆ ಭಾರಿ ಬೆಂಬಲ!...

ಸಚಿನ್, ಲತಾ ಮಂಗೇಶ್ಕರ್, ಅಕ್ಷಯ್ ಕುಮಾರ್ ಸೇರಿದಂತೆ ಸೆಲೆಬ್ರೆಟಿಗಳು ದೇಶ ವಿರುದ್ಧ ನಡೆದ ಪಿತೂರಿ ವಿರೋಧಿಸಿ ಮಾಡಿದ ಟ್ವೀಟ್ ವಿವರ ಇಲ್ಲಿದೆ. 



Scroll to load tweet…
Scroll to load tweet…
Scroll to load tweet…
Scroll to load tweet…

ಮಹಾರಾಷ್ಚ್ರ ಸರ್ಕಾರದ ತನಿಖೆ ಆದೇಶದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಜನಸಾಮಾನ್ಯರು ಸೇರಿದಂತೆ ಗಣ್ಯರು ಇದೀಗ ಮಹಾರಾಷ್ಟ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Scroll to load tweet…
Scroll to load tweet…
Scroll to load tweet…