ಅಶ್ವಿನ್ ಝಲಕ್; ರೋಚಕ ಘಟ್ಟದತ್ತ ಚೆನ್ನೈ ಟೆಸ್ಟ್
ಭಾರತ-ಇಂಗ್ಲೆಂಡ್ ನಡುವಿನ ಚೆನ್ನೈ ಟೆಸ್ಟ್ ಪಂದ್ಯ ರೋಚಕಘಟ್ಟದತ್ತ ಸಾಗುತ್ತಿದ್ದು, ಚಹಾ ವಿರಾಮದ ವೇಳೆಗೆ ಪ್ರವಾಸಿ ಇಂಗ್ಲೆಂಡ್ ತಂಡ 360 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.08): ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್(49/3) ಮಿಂಚಿನ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಎರಡನೇ ಇನಿಂಗ್ಸ್‌ನ ಚಹಾ ವಿರಾಮದ ವೇಳೆಗೆ 5 ವಿಕೆಟ್ ಕಳೆದುಕೊಂಡು 119 ರನ್ ಬಾರಿಸಿದ್ದು, ಒಟ್ಟಾರೆ 360 ರನ್ ಮುನ್ನಡೆ ಸಾಧಿಸಿದೆ.
ಹೌದು, ಟೀಂ ಇಂಡಿಯಾವನ್ನು 337 ರನ್‌ಗಳಿಗೆ ಆಲೌಟ್ ಮಾಡಿ, ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಓವರ್‌ನ ಮೊದಲ ಎಸೆತದಲ್ಲೇ ಅಶ್ವಿನ್ ಶಾಕ್ ನೀಡಿದರು. ರೋರಿ ಬರ್ನ್ಸ್ ಸ್ಲಿಪ್‌ನಲ್ಲಿದ್ದ ರಹಾನೆಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇದಾಗಿ ಕೆಲವೇ ಹೊತ್ತಿನಲ್ಲಿ ಡೋಮಿನಿಕ್ ಸಿಬ್ಲಿ ಕೂಡಾ ಆಶ್ವಿನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು.
ಭಾರತ ವಿರುದ್ದ ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ ದ್ವಿಶತಕ ಬಾರಿಸಿದ್ದ ನಾಯಕ ಜೋ ರೂಟ್ ಎರಡನೇ ಇನಿಂಗ್ಸ್‌ನಲ್ಲಿ ಚುರುಕಿನ ಬ್ಯಾಟಿಂಗ್ ಮೊರೆ ಹೋದರು. ಪರಿಣಾಮ ರೂಟ್ 32 ಎಸೆತಗಳಲ್ಲಿ 7 ಬೌಂಡರಿ ಸಹಿತ 40 ರನ್ ಬಾರಿಸಿ ಬುಮ್ರಾ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನು ಮೊದಲ ಇನಿಂಗ್ಸ್ ಶೂನ್ಯ ಸುತ್ತಿದ್ದ ಡೇನಿಯಲ್ ಲಾರೆನ್ಸ್(18) ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಇಶಾಂತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 300 ಕಬಳಿಸಿದ ಸಾಧನೆ ಮಾಡಿದರು.
ಚೆನ್ನೈ ಟೆಸ್ಟ್: ಟೀಂ ಇಂಡಿಯಾ ಆಲೌಟ್ @337; ಫಾಲೋ ಆನ್ ಹೇರದ ಇಂಗ್ಲೆಂಡ್
ಭಾರತ ಪರ ಅಶ್ವಿನ್ 3 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು. ಇಂಗ್ಲೆಂಡ್ ತಂಡ ಭಾರತಕ್ಕೆ ಗೆಲ್ಲಲು 400 ರನ್‌ಗಳ ಗುರಿ ನೀಡುವ ಸಾಧ್ಯತೆಯಿದೆ.