WhatsApp ಬಳಸದ ರಶ್ಮಿಕಾ ಮಂದಣ್ಣ; ಏನೇ ಇದ್ದರೂ ಮ್ಯಾನೇಜರ್, ಅಮ್ಮನ ಕೇಳಿ!
First Published Feb 8, 2021, 10:33 AM IST
ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಅಂತ ಗೊತ್ತು. ಆದರೆ ವಾಟ್ಸಪ್‌ನಿಂದ ದೂರು ಇರೋದು ಯಾಕೆ ಅಂತ ಗೊತ್ತಿಲ್ಲ. ರಶ್ಮಿಕಾ ಏನು ಹೇಳುತ್ತಾರೆ ಕೇಳಿ..

ಪೊಗರು ಚಿತ್ರದ ಪ್ರೆಸ್ ಮೀಟ್‌ನಲ್ಲಿ ರಶ್ಮಿಕಾ ಮುಂದಿನ ಚಿತ್ರಗಳ ಬಗ್ಗೆ ಪ್ರಶ್ನೆ ಮಾಡಲಾಗಿತ್ತು.

ಬ್ಯಾಕ್ ಟು ಬ್ಯಾಕ್ ಬಿಗ್ ಪ್ರಾಜೆಕ್ಟ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಕಾರಣ ಪತ್ರಕರ್ತರು ಚಿತ್ರಕತೆ ಕೇಳುವುದರ ಬಗ್ಗೆ ಚರ್ಚೆ ಮಾಡಿದ್ದಾರೆ.

'ನಾನು ಸಿನಿಮಾ ಕತೆಗಳನ್ನು ಕೇಳುತ್ತಿರುವೆ. ನಾನು ವಾಟ್ಸಪ್ ಬಳಸುತ್ತಿಲ್ಲ. ಸೋ ಯಾವ ನಿರ್ದೇಶಕರನ್ನ ನೆಕ್ಸ್ಟ್ ಭೇಟಿ ಮಾಡುತ್ತಿರುವೆ ಎಂದು ಗೊತ್ತಿಲ್ಲ,' ಎಂದು ಹೇಳಿದ್ದಾರೆ.

ರಶ್ಮಿಕಾ ಜೊತೆ ಸಿನಿಮಾ, ಪ್ರಮೋಷನ್ ಚರ್ಚೆ ಇದ್ದರೆ ಹೇಗೆ ಸಂಪರ್ಕಿಸಬೇಕು ಎಂದು ಹೇಳಿದ್ದಾರೆ.

ಏನೇ ಇದ್ರೂ ನನ್ನ ಮ್ಯಾನೇಜರ್ ಹಾಗೂ ನನ್ನ ಅಮ್ಮನ ಕೇಳಬಹುದು. ನನಗಿಂತ ಅವರಿಗೆ ಹೆಚ್ಚಾನ ಇನ್‌ಫಾರ್ಮೇಷನ್ ಇರುತ್ತೆ ಎಂದು ರಶ್ಮಿಕಾ ಉತ್ತರಿಸಿದ್ದಾರೆ.

ರಶ್ಮಿಕಾ ಫೇಸ್‌ಬುಕ್ ಹಾಗೂ ಟ್ಟಿಟರ್‌ನಲ್ಲಿ ಸಿನಿಮಾ ಪ್ರಮೋಷನ್ ಮಾಡುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಆಫ್ ಸಿನಿಮಾ ವಿಚಾರಗಳ ಬಗ್ಗೆ ಅಪ್ಡೇಟ್ ಮಾಡುತ್ತಾರೆ.

ಇತ್ತೀಚಿನ ದಿನಗಳಲ್ಲಿ ಸುಲಭವಾಗಿ ಸಂಪರ್ಕ ಮಾಡಲು ಬಳಸುವುದು ವಾಟ್ಸಪ್. ಆದರೆ ಕೆಲವೊಮ್ಮೆ ಅನಗತ್ಯ ಮೆಸೇಜ್ ಬರುವ ಕಾರಣ ನಟ, ನಟಿಯರನ್ನು ಮ್ಯಾನೇಜರ್ ಕೈಯಲ್ಲಿಟ್ಟು ತಾವು ಆರಾಮ್ ಆಗಿರಲು ಬಯಸುತ್ತಾರೆ.