Asianet Suvarna News

ಸಾಲ ಮನ್ನಾಗೆ ಮುಂದಾದ ಸರ್ಕಾರ, ದಾದಾಗೆ ಶುಭಾಶಯದ ಮಹಾಪೂರ; ಜು.08ರ ಟಾಪ್ 10 ಸುದ್ದಿ!

ಕೋರೋನಾ ದಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರು.ವರೆಗಿನ  ಸಾಲ‌ಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ನೂತನ ಸಚಿವ ಅಶ್ವಿನಿ ವಾರ್ನಿಂಗ್ ನೀಡಿದ್ದಾರೆ. ಹುಟ್ಟ ಹಬ್ಬ ಆಚರಿಸಿಕೊಳ್ಳುತ್ತಿರುವ ಸೌರವ್ ಗಂಗೂಲಿಗೆ ಶುಭಾಶಗಳು ಹರಿದು ಬಂದಿದೆ. ಸ್ವಲ್ಪ ಎತ್ಕೊಂಡ್ ಹೋಗ್ರಪ್ಪಾ ಎಂದ ಮೀನುಗಾರಿಕಾ ಸಚಿವ, ಶಾರೂಖ್ ಲೇಟೆಸ್ಟ್ ಫೋಟೋ ವೈರಲ್ ಸೇರಿದಂತೆ ಜುಲೈ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

loan waiver for covid victims to Sourav ganguly top 10 News of July 8 ckm
Author
Bengaluru, First Published Jul 8, 2021, 4:37 PM IST
  • Facebook
  • Twitter
  • Whatsapp

ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್‌ಗೆ ವಾರ್ನಿಂಗ್ ನೀಡಿದ ನೂತನ ಸಚಿವ ಅಶ್ವಿನಿ ವೈಷ್ಣವ್!...

ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಜಟಾಪಟಿ ಕೋರ್ಟ್‌ನಲ್ಲಿದೆ. ಭಾರತದ ಕಾನೂನು ಗೌರವಿಸಲು ಕೋರ್ಟ್ ಕೂಡ ಟ್ವಿಟರ್‌ಗೆ ತಾಕೀತು ಮಾಡಿದೆ. ಈ ಜಗಳ ತಾರಕಕ್ಕೇರಿರುವ ನಡುವೆ ಕೇಂದ್ರ ಸಂಪುಟ ಪುನಾರಚನೆ ಕೆಲ ಬದಲಾವಣೆಗಳನ್ನು ಮಾಡಿದೆ. ಆದರೆ ಕೇಂದ್ರದ ಧೋರಣೆಗಳಲ್ಲಿ, ನೀತಿ ನಿಯಮಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಅನ್ನೋದು ಸಾಬೀತಾಗಿದೆ.

ಸ್ವಲ್ಪ ಎತ್ಕೊಂಡ್ ಹೋಗ್ರಪ್ಪಾ, ಶೂ ನೆನೆಯುತ್ತೆ ಎಂದ ಮೀನುಗಾರಿಕಾ ಸಚಿವ...

 ಆಡಂಬರವೋ, ಅತರೇಕವೋ ಅವರಿಗೇ ಗೊತ್ತು..! ಅಂತೂ ಸಚಿವರು ರಾಜಕಾರಣಿಗಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸಿಬಿಡುತ್ತಾರೆ.

ಭಾರತದ 20 ಆಸ್ತಿ ಮುಟ್ಟುಗೋಲು ಹಾಕಲು ಆದೇಶಿಸಿದ ಫ್ರಾನ್ಸ್ ಕೋರ್ಟ್!...

 ಫ್ರಾನ್ಸ್‌ನ ನ್ಯಾಯಾಲಯವೊಂದು ಬ್ರಿಟನ್‌ನ ಕೈರ್ನ್ ಎನರ್ಜಿ ಪಿಲ್‌ಸಿಗೆ (Cairn Energy Plc) 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡಲು ಫ್ರಾನ್ಸ್‌ನಲ್ಲಿರುವ ಸುಮಾರು 20 ಭಾರತೀಯ ಸರ್ಕಾರಿ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಧರಂರನ್ನು ಮಣಿಸಿದ್ದ ಅಡ್ವಾಣಿ ಶಿಷ್ಯನಿಗೆ ಕೇಂದ್ರ ಮಂತ್ರಿ ಸ್ಥಾನ!...

ಶರಣರ ನಾಡಾದ ಬೀದರ್‌ನಲ್ಲಿ ಬಿಜೆಪಿಯನ್ನು ಗಟ್ಟಿಗೊಳಿಸಿದ ಸಂಸದ ಭಗವಂತ ಖೂಬಾಗೆ ಕೊನೆಗೂ ಅದೃಷ್ಟಒಲಿದು ಬಂದಿದೆ. ಖೂಬಾ ಪಕ್ಷ ನಿಷ್ಠೆಗೆ ಇದೀಗ ಕೇಂದ್ರ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದ ಮೊದಲ ಕೇಂದ್ರ ಸಚಿವ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

ಕ್ರೀಡಾಸಚಿವರಾಗಿ ಅಧಿಕಾರ ಸ್ವೀಕರಿಸಿದ ಅನುರಾಗ್ ಠಾಕೂರ್...

ಕೇಂದ್ರ ಸಂಪುಟ ಸಚಿವನಾಗಿ ದೇಶದ ಜನರ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ತುಂಬಾ ಗೌರವದ ಸಂಗತಿಯಾಗಿದೆ. ನನ್ನ ಮೇಲೆ ನಂಬಿಕೆಯಿಟ್ಟು ಜವಾಬ್ದಾರಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅನುರಾಗ್ ಠಾಕೂರ್ ಟ್ವೀಟ್‌ ಮಾಡಿದ್ದಾರೆ.

ಸೌರವ್ ಗಂಗೂಲಿಗೆ 49ರ ಸಂಭ್ರಮ; ಹರಿದು ಬಂತು ಅಭಿನಂದನೆಗಳ ಮಹಾಪೂರ...

ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ದಾದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

ಶಾರೂಖ್ ಲೇಟೆಸ್ಟ್ ಫೋಟೋ ವೈರಲ್..! ದಿನಕಳೆದಂತೆ ಮತ್ತಷ್ಟು ಹ್ಯಾಂಡ್ಸಂ...

ಪ್ರಸಿದ್ಧ ಛಾಯಾಗ್ರಾಹಕ ಅವಿನಾಶ್ ಗೋವಾರಿಕರ್ ಶಾರೂಖ್ ಅವರ ಲೇಟೆಸ್ಟ್ ಫೋಟೊ ಒಂದನ್ನು ಶೇರ್ ಮಾಡಿದ್ದಾರೆ. ಈ ಮೂಲಕ ಕಿಂಗ್ ಖಾನ್ ಫ್ಯಾನ್ಸ್‌ಗೆ ಶಾರೂಖ್ ಸೂಪರ್ ಲುಕ್ ನೋಡೋ ಅವಕಾಶ ಕೊಟ್ಟಿದ್ದಾರೆ.

ಕೊರೋನಾದಿಂದ ಸಾವನ್ನಪ್ಪಿದ ರೈತರ ಸಾಲ ಮನ್ನಾ...

ಕೋರೋನಾ ದಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರು.ವರೆಗಿನ  ಸಾಲ‌ಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ  ಅಂತಿಮ ತಿರ್ಮಾನ ಪ್ರಕಟವಾಗಲಿದೆ. 

ಅಂಡಾಣು ಸಂರಕ್ಷಿಸಿಟ್ಟ ನಟಿ ಕಾಜೋಲ್‌ ಸಹೋದರಿ! ಹಿಂಗ್ ಮಾಡಿದ್ಯಾಕೆ?...

ಬಾಲಿವುಡ್​ನ ಖ್ಯಾತ ನಟಿ ಕಾಜೋಲ್​ ಅವರ ತಂಗಿ ತನಿಶಾ ಮುಖರ್ಜಿ ತಮ್ಮ ಅಂಡಾಣುಗಳನ್ನು ಅಂಡಾಣು ಬ್ಯಾಂಕ್‌ನಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಕಾರಣವೇನು ಗೊತ್ತೆ?

Follow Us:
Download App:
  • android
  • ios