* ಭಾರತದ ಆಸ್ತಿ ಮುಟ್ಟುಗೋಲು ಹಾಕಲು ಫ್ರಾನ್ಸ್ ಕೋರ್ಟ್‌ ಆದೇಶ* 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡಲು ಕ್ರಮ* ಈಗಾಗಲೇ ಕಾನೂನು ಪ್ರಕ್ರಿಯೆ ಪೂರ್ಣ

ಪ್ಯಾರಿಸ್(ಜು.08): ಫ್ರಾನ್ಸ್‌ನ ನ್ಯಾಯಾಲಯವೊಂದು ಬ್ರಿಟನ್‌ನ ಕೈರ್ನ್ ಎನರ್ಜಿ ಪಿಲ್‌ಸಿಗೆ (Cairn Energy Plc) 1.7 ಬಿಲಿಯನ್ ಯುಎಸ್ ಡಾಲರ್ ನಷ್ಟವನ್ನು ವಸೂಲಿ ಮಾಡಲು ಫ್ರಾನ್ಸ್‌ನಲ್ಲಿರುವ ಸುಮಾರು 20 ಭಾರತೀಯ ಸರ್ಕಾರಿ ಆಸ್ತಿಯನ್ನು ಮುಟ್ಟುಗೋಲು ಹಾಕಲು ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಜೂನ್ 11 ರಂದು ಫ್ರಾನ್ಸ್ ಕೋರ್ಟ್‌ ಕೈರ್ನ್ ಎನರ್ಜಿ ಪಿಲ್‌ಸಿಗೆ ಭಾರತೀಯ ಸರ್ಕಾರಿ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಆದೇಶಿಸಿದೆ. ಇವುಗಳಲ್ಲಿ ಹೆಚ್ಚಿನವು ಫ್ಲ್ಯಾಟ್‌ಗಳಾಗಿದ್ದು, ಬುಧವಾರದಂದು ಈ ನಿಟ್ಟಿನಲ್ಲಿ ನಡೆಯಬೇಕಾಗಿದ್ದ ಕಾನೂನು ಪ್ರಕ್ರಿಯೆ ಪೂರ್ಣಗೊಂಡಿದೆ.

ಮಧ್ಯಂತರ ನ್ಯಾಯಾಲಯವೊಂದು ಕೈರ್ನ್ ಎನರ್ಜಿ ಪಿಲ್‌ಸಿಗೆ 1.2 ಮಿಲಿಯನ್ ಡಾಲರ್‌ಗೂ ಅಧಿಕ ಬಡ್ಡಿ ಹಾಘೂ ದಂಡ ಪಾವತಿಸುವಂತೆ ಡಿಸೆಂಬರ್‌ನಲ್ಲಿ ಭಾರತ ಸರ್ಕಾರಕ್ಕೆ ಆದೇಶಿಸಿತ್ತು. ಭಾರತ ಸರ್ಕಾರ ಈ ಆದೇಶವನ್ನು ಒಪ್ಪಿರಲಿಲ್ಲ. ಬಳಿಕ ಕೈರ್ನ್ ಎನರ್ಜಿ ಭಾರತ ಸರ್ಕಾರದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಬಾಕಿ ವಸೂಲಿ ಮಾಡಲು ಅವಕಾಶ ನೀಡುವಂತೆ ವಿದೇಶದಲ್ಲಿ ಹಲವಾರು ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಕೈರ್ನ್ ಎನರ್ಜಿಯು ಪೂರ್ವಾವಲೋಕನದಿಂದ ಸರ್ಕಾರ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಂಡ ಏಕೈಕ ಕಂಪನಿಯಾಗಿದೆ. ನ್ಯಾಯಮಂಡಳಿಯಲ್ಲಿ ಪ್ರಕರಣದ ಬಾಕಿ ಇರುವಾಗ, ಸರ್ಕಾರವು ವೇದಾನ್ ಲಿಮಿಟೆಡ್‌ನಲ್ಲಿ ಕೈರ್ನ್‌ನ ಶೇ. 5ರಷ್ಟು ಪಾಲನ್ನು ಮಾರಾಟ ಮಾಡಿತು, ಸುಮಾರು 1,140 ಕೋಟಿ ರೂ.ಗಳ ಲಾಭ ಮುಟ್ಟುಗೋಲು ಹಾಕಿಕೊಂಡಿತು ಮತ್ತು ಸುಮಾರು 1,590 ಕೋಟಿ ರೂ.ಗಳ ತೆರಿಗೆ ಮರುಪಾವತಿಯನ್ನು ನೀಡಲಿಲ್ಲ. ಕೈರ್ನ್ ಎನರ್ಜಿಯ ಹೊರತಾಗಿ, ಸರ್ಕಾರವು ತನ್ನ ಅಂಗಸಂಸ್ಥೆ ಕೈರ್ನ್ ಇಂಡಿಯಾದಿಂದ (ಈಗ ವೇದಾಂತ ಲಿಮಿಟೆಡ್‌ನ ಭಾಗ) ಇದೇ ರೀತಿಯ ತೆರಿಗೆ ಬೇಡಿಕೆಯನ್ನು ಇಟ್ಟಿತ್ತು.