Asianet Suvarna News

ಸೌರವ್ ಗಂಗೂಲಿಗೆ 49ರ ಸಂಭ್ರಮ; ಹರಿದು ಬಂತು ಅಭಿನಂದನೆಗಳ ಮಹಾಪೂರ

* 49ನೇ ವಸಂತಕ್ಕೆ ಕಾಲಿಟ್ಟ ಸೌರವ್ ಗಂಗೂಲಿ

* ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ದಾದಾ

* ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂತು ಅಭಿನಂದನೆಗಳ ಮಹಾಪೂರ

BCCI President Sourav Ganguly turns 49 Former team mates wishes pour in on birthday kvn
Author
New Delhi, First Published Jul 8, 2021, 12:26 PM IST
  • Facebook
  • Twitter
  • Whatsapp

ನವದೆಹಲಿ(ಜು.08): ಟೀಂ ಇಂಡಿಯಾ ಮಾಜಿ ನಾಯಕ, ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಭಾರತ ಕ್ರಿಕೆಟ್‌ ಕಂಡ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ದಾದಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

ಸೌರವ್ ಗಂಗೂಲಿ 5 ವರ್ಷಗಳ ಕಾಲ ನಾಯಕನಾಗಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ 2003ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿತ್ತು. ಗಂಗೂಲಿ ನಾಯಕರಾದ ಬಳಿಕ ವಿದೇಶಿ ನೆಲದಲ್ಲೂ ಟೀಂ ಇಂಡಿಯಾ ಗೆಲುವಿನ ರುಚಿ ಕಾಣಲಾರಂಭಿಸಿತು. ಗಂಗೂಲಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡವು 28 ಪಂದ್ಯಗಳನ್ನು ವಿದೇಶದಲ್ಲಾಡಿ 11ರಲ್ಲಿ ಗೆಲುವಿನ ನಗೆ ಬೀರಿತ್ತು.

Happy Birthday MS Dhoni: ಟೀಂ ಇಂಡಿಯಾ ಮಾಜಿ ನಾಯಕ ಧೋನಿಗೆ 40ನೇ ಹುಟ್ಟುಹಬ್ಬದ ಸಂಭ್ರಮ!

ಸೌರವ್‌ ಗಂಗೂಲಿ ಭಾರತ ಪರ 311 ಏಕದಿನ ಪಂದ್ಯಗಳನ್ನಾಡಿ 22 ಶತಕ, 72 ಅರ್ಧಶತಕ ಸಹಿತ 11,163 ರನ್ ಬಾರಿಸಿದ್ದಾರೆ. ಇನ್ನು 113 ಟೆಸ್ಟ್‌ ಪಂದ್ಯಗಳನ್ನಾಡಿ 16 ಶತಕ ಹಾಗೂ 35 ಅರ್ಧಶತಕ ಸಹಿತ 7,212 ರನ್‌ ಬಾರಿಸಿದ್ದಾರೆ. ಅಕ್ಟೋಬರ್ 23, 2019ರಿಂದ ಬಿಸಿಸಿಐನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದಾದಾ ಹುಟ್ಟುಹಬ್ಬಕ್ಕೆ ಟೀಂ ಇಂಡಿಯಾ ಹಿರಿಕಿರಿಯ ಕ್ರಿಕೆಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರಲಾರಂಭಿಸಿವೆ.

Follow Us:
Download App:
  • android
  • ios