ಅಬ್ಬಾ ಈ ಸಚಿವರಿಗೆ ಶೂ ನೆನೆಯಬಾರದು..! ಸ್ವಲ್ಪ ಎತ್ಕೊಂಡ್ ಹೋಗ್ರಪ್ಪಾ ಎಂದ ಸಚಿವ

ಚೆನ್ನೈ(ಜು.08): ಆಡಂಬರವೋ, ಅತರೇಕವೋ ಅವರಿಗೇ ಗೊತ್ತು..! ಅಂತೂ ಸಚಿವರು ರಾಜಕಾರಣಿಗಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸಿಬಿಡುತ್ತಾರೆ.

ತನ್ನ ಹೊಳೆಯೋ ಬಿಳಿ ಬೂಟುಗಳನ್ನು ಒದ್ದೆಯಾಗುತ್ತೆ ಎಂಬ ಕಾರಣದಿಂದ ಮೀನುಗಾರಿಕಾ ಸಚಿವ ಅನಿತಾ ಆರ್ ರಾಧಾಕೃಷ್ಣನ್ ಅವರನ್ನು ಮೀನುಗಾರರು ಎತ್ತಿ ದಡಕ್ಕೆ ಕೊಂಡೊಯ್ಯುವ ವಿಡಿಯೋವೊಂದು ಬೆಳಕಿಗೆ ಬಂದಿದೆ.

ಪ್ರಮಾಣವಚನ ಮುಗಿದ 24 ಗಂಟೆಯೊಳಗೆ ಅಧಿಕಾರ ಸ್ವೀಕರಿಸಿದ ಸಚಿವ ರಾಜೀವ್ ಚಂದ್ರಶೇಖರ್.

ಈ ವಿಡಿಯೋ ವೈರಲ್ ಆಗಿದೆ. ಸಮುದ್ರ ಕೊರೆತದ ಪರಿಣಾಮಗಳನ್ನು ಪರಿಶೀಲಿಸಲು ಸಚಿವರು ಪಾಲವರ್ಕಡಿನಲ್ಲಿದ್ದರು. ಅಲ್ಲಿ ಪರಿಶೀಲನೆ ಸಂದರ್ಭ ದೋಣಿನಿಂದ ಇಳಿದು ದಡ ಸೇರಲು ಪರದಾಡಿದ್ದಾರೆ.

68 ವರ್ಷದ ನಾಯಕ ಪಾಲವರ್ಕಡಿನಲ್ಲಿ ಮಣ್ಣಿನ ಸವೆತದ ಪರಿಣಾಮಗಳನ್ನು ಪರಿಶೀಲಿಸುತ್ತಿದ್ದನು, ಆದರೆ ಅವರು ಹೋಗುತ್ತಿದ್ದ ದೋಣಿ ತೀರಕ್ಕೆ ಹತ್ತಿರ ಬಂದಾಗ ದಡಕ್ಕೆ ತಲುಪಲು ಅವರು ದೂರ ನಡೆದು ಹೋಗಬೇಕು ಎಂದು ತಿಳಿದುಕೊಂಡ ಸಚಿವ ಮಾಡಿದ್ದೇನು ಗೊತ್ತಾ ?

Scroll to load tweet…

ವೈಟ್ ಸ್ಪೋರ್ಟ್ಸ್ ಶೂ ಧರಿಸಿದ್ದ ಸಚಿವರಿಗೆ ಅದರದ್ದೇ ಚಿಂತೆ. ಬೂಟುಗಳನ್ನು ಒದ್ದೆಯಾಗಬಾರದು ಎಂದು ನಿರ್ಧರಿಸಿದ ಸಚಿವನ್ನು ಮೀನುಗಾರ ಎತ್ತಿಕೊಂಡಿದ್ದಾನೆ. ಒಬ್ಬ ಮೀನುಗಾರನು ಸಚಿವರನ್ನು ತೀರಕ್ಕೆ ಕೊಂಡೊಯ್ಯಲು ಅವಕಾಶ ಮಾಡಿಕೊಟ್ಟು ಬೆಂಬಲಿಗರು ಮತ್ತು ಇತರ ಮೀನುಗಾರರು ಹೆಚ್ಚುವರಿ ಬೆಂಬಲಕ್ಕಾಗಿಸಚಿವರನ್ನು ಎತ್ತಿಕೊಂಡಿದ್ದಾರೆ.

Scroll to load tweet…
Scroll to load tweet…
Scroll to load tweet…