Asianet Suvarna News Asianet Suvarna News

ಕೊರೋನಾದಿಂದ ಸಾವನ್ನಪ್ಪಿದ ರೈತರ ಸಾಲ ಮನ್ನಾ

  • ಕೋರೋನಾ ದಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರು.ವರೆಗಿನ  ಸಾಲ‌ಮನ್ನಾ 
  • ಸಾಲ‌ಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. 
  • ಇನ್ನೆರಡು ದಿನಗಳಲ್ಲಿ  ಅಂತಿಮ ತಿರ್ಮಾನ ಪ್ರಕಟ
Covid Victims Farmers Loan Waiving From Karnataka Govt snr
Author
Bengaluru, First Published Jul 8, 2021, 1:23 PM IST

 ಬೆಂಗಳೂರು (ಜು.08):  ಕೋರೋನಾ ದಿಂದ ಸಾವನ್ನಪ್ಪಿದ ರೈತರ ಒಂದು ಲಕ್ಷ ರು.ವರೆಗಿನ  ಸಾಲ‌ಮನ್ನಾ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇನ್ನೆರಡು ದಿನಗಳಲ್ಲಿ  ಅಂತಿಮ ತಿರ್ಮಾನ ಪ್ರಕಟವಾಗಲಿದೆ. 

ಈಗಾಗಲೇ ಎಲ್ಲಾ ಸಹಕಾರ ಸಂಸ್ಥೆಗಳಿಗೆ ಸಾವನ್ನಪ್ಪಿರುವ ರೈತರ ಮಾಹಿತಿ ಕೊಡಲು ಸೂಚನೆ ನೀಡಲಾಗಿದ್ದು, ಡಿಸಿಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕ್ ಮೂಲಕ ಸಾಲ‌ಮನ್ನಾ ಯೋಜನೆ ಜಾರಿ ಮಾಡಲಾಗುತ್ತದೆ.

ಗುಡ್ ನ್ಯೂಸ್ : 'ಸಾಲಪಡೆದು ಕೋವಿಡ್‌ನಿಂದ ಮೃತಪಟ್ಟವರ ಸಾಲ ಮನ್ನಾ'

1 ಲಕ್ಷ ರೂ ಸಾಲ ಮನ್ನಾ ಮಾಡಲು ಸರ್ಕಾರದ ತಿರ್ಮಾನ ಸಾಧ್ಯತೆ ಇದ್ದು, ಆರ್ಥಿಕವಾಗಿ ಸಬಲವಾಗಿರುವ ಡಿಸಿಸಿ ಬ್ಯಾಂಕ್ ಗಳ ಮೂಲಕ ಸಾಲ ಮನ್ನಾಪ್ರಕ್ರಿಯೆ ನಡೆಯಲಿದ್ದು, ಡಿಸಿಸಿ ಬ್ಯಾಂಕ್ ಗಳಿಗೆ ಅಪೆಕ್ಸ್ ಬ್ಯಾಂಕ್ ಗಳಿಂದ ಆರ್ಥಿಕ ನೆರವು ದೊರೆಯಲಿದೆ.

ಸಾಲ‌ಮನ್ನಾ ‌ಮಾಡಲು ಮುಂದಾಗಿರುವುದನ್ನು  ಸ್ಪಷ್ಟಪಡಿಸಿರುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಇ ಬಗ್ಗೆ ಎಲ್ಲಾ ಮಾಹಿತಿ ಪಡೆಯಲಾಗುತ್ತಿದ್ದು  ಇನ್ನೆರಡು ದಿನಗಳಲ್ಲಿ ತಿರ್ಮಾನವಾಗಲಿದೆ ಎಂದು ಹೇಳಿದ್ದಾರೆ.  

ಕೋರೋನಾದಿಂದ ಸಾವನ್ನಪ್ಪಿರುವ ರೈತರಿಗೆ ಸಹಾಯ ಮಾಡಬೇಕಾದ ಹೊಣೆಗಾರಿಕೆ ಇದೆ. ಅದಕ್ಕಾಗಿ ಅಪೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಮೂಲಕ ಸಾಲ‌ಮನ್ನಾ ಯೋಜನೆ ಜಾರಿಯಾಗಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
 
ಸರ್ಕಾರದ ನಿರ್ಧಾರಕ್ಕೆ ಸ್ವಾಗತ :  ಕೋರೋನಾ ದಿಂದ ಸಾವನ್ನಪ್ಪಿರುವ ರೈತರ ಸಾಲ‌ಮನ್ನಾ ಯೋಜನೆ ಜಾರಿ ವಿಚಾರವಾಗಿ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಸಹಕಾರ ಮಹಾಮಂಡಳ ಸ್ವಾಗತಿಸಿದೆ.  

ಸಾವಾಗಿರುವ ರೈತರ ಕುಟುಂಬಕ್ಕೆ ಸಹಕಾರ ಕೊಡುವ ಚಿಂತನೆ ಒಳ್ಳೆಯದು. ಕಷ್ಟದಲ್ಲಿ ಇರುವ ರೈತರ ಕುಟುಂಬಕ್ಕೆ ಅನುಕೂಲ ಆಗಲಿದೆ. ನಮ್ಮ ಇಡೀ ಸಹಕಾರ ವಲಯದ ಬೆಂಬಲ ಸರ್ಕಾರಕ್ಕೆ ಇರಲಿದೆ ಎಂದು ಕರ್ನಾಟಕ ಸಹಕಾರ ಮಹಾಮಂಡಳದ ಅಧ್ಯಕ್ಷ ಶಾಸಕ ಜಿ ಟಿ ದೇವೆಗೌಡ ಹೇಳಿದ್ದಾರೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios