ಎಣ್ಣೆ ಖರೀದಿಗೆ ಹೋಗುವವರಿಗೆ ಹತ್ತು ಕಂಡಿಶನ್, ತಿಳ್ಕೊಂಡು ಹೋದ್ರೆ ಬಚಾವ್!...

ಮದ್ಯ ಖರೀದಿಗೆ ಅವಕಾಶ ಎಂದು ರಾಜ್ಯ ಸರ್ಕಾರ ಮದ್ಯ ಪ್ರಿಯರಿಗೆ ಶುಭ ಸುದ್ದಿ ನೀಡಿದ್ದರೂ ಕೆಲವೊಂದು ಕಂಡಿಶನ್ ಹಾಕಿದೆ. ಮದ್ಯ ಮಾರಾಟಗಾರರು ಮತ್ತು ಖರೀದಿಗೆ ತೆರಳುವವರು ಈ ರೂಲ್ಸ್ ಗಳನ್ನು ತಿಳಿದುಕೊಳ್ಳಲೇಬೇಕು. ಯಾವುದಕ್ಕೂ ಈ ಎಲ್ಲ ಮಾಹಿತಿ ನಿಮ್ಮ ಬಳಿ ಇರಲಿ.

ನಿತ್ಯೋತ್ಸವ ಕವಿ ಕೆ. ಎಸ್. ನಿಸಾರ್ ಅಹಮದ್ ಇನ್ನಿಲ್ಲ!...

ಕನ್ನಡ ನಾಡು, ನುಡಿಯನ್ನು ಪದಗಳಲ್ಲಿ ವರ್ಣಿಸಿ ಜೋಗದ ಸಿರಿ ಬೆಳಕಿನಲ್ಲಿ ಎಂಬ ಕವಿತೆ ಬರೆದ ಕರುನಾಡಿನ ಹಿರಿಯ ಕವಿ, ಪಂಪ ಪ್ರಶಸ್ತಿ ಪುರಸ್ಕೃತ ಕೆ. ಎಸ್. ನಿಸಾರ್ ಅಹಮದ್ ಇನ್ನಿಲ್ಲ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕನ್ನಡದ ಹಿರಿಯ ಸಾಹಿತಿ ನಿಸಾರ್ ಅಹಮದ್(84) ಭಾನುವಾರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.


ಕೊರೊನಾ ವಾರಿಯರ್ಸ್‌ಗೆ ಸೇನಯಿಂದ ಸಲಾಂ; ಹೂಮಳೆ ಸುರಿಸಿ ಗೌರವ ಸಮರ್ಪಣೆ

ಕೊರೊನಾ ವಾರಿಯರ್ಸ್‌ಗಳಾದ ನರ್ಸ್, ವೈದ್ಯರು ಹಾಗೂ ಪೊಲೀಸರಿಗೆ ಅಂದು ಚಪ್ಪಾಳೆ ಮೂಲಕ  ಗೌರವ ಸಲ್ಲಿಸಿದರೆ ಇಂದು ಸೇನಾಪಡೆ ಅವರ ಮೇಲೆ ಹೂಮಳೆ ಸುರಿದು ಗೌರವ ಸಲ್ಲಿಸಿದೆ. 

ಉಗ್ರರ ಪುಂಡಾಟ: ಕರ್ನಲ್, ಮೇಜರ್ ಸೇರಿ ಐವರು ಯೋಧರು ಹುತಾತ್ಮ!...

ದೇಶದಾದ್ಯಂತ ಒಂದೆಡೆ ಕೊರೋನಾ ಅಟ್ಟಹಾಸದಿಂದ ಲಾಕ್‌ಡೌನ್‌ ಹೇರಲಾಗಿದೆ. ಹೀಗಿದ್ದರೂ ಉಗ್ರರ ಪುಂಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಗಡಿಯಲ್ಲಿ ಉಗ್ರರು ತಮ್ಮ ಅಟ್ಟಹಾಸ ಮುಂದುವರೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹಂದ್ವಾರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಹಿರಿಯ ಸೇನಾಧಿಕಾರಿಗಳು ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.

ನಗರ ವಾಸಿಗಳಿಗೆ ಬೆಂಗಳೂರು ಪೊಲೀಸ್ ಕಮಿಷನರ್ ಮಹತ್ವದ ಸೂಚನೆ; ದಯವಿಟ್ಟು ಪಾಲಿಸಿ!...

ಕೊರೋನಾ ವೈರಸ್ ಲಾಕ್‌ಡೌನ್ ಇದೀಗ 3ನೇ ಹಂತಕ್ಕೆ ವಿಸ್ತರಣೆಯಾಗಿದೆ. ಆದರೆ ನಿಯಮ ಸಡಿಲಿಕೆ ಮಾಡಲಾಗಿದೆ. ಮೇ.03ರಿಂದ ಬಹುತೇಕ ಕಡೆಗಳಲ್ಲಿ ಲಾಕ್‌ಡೌನ್ ಸಡಿಲಿಕೆಯಾಗುತ್ತಿದೆ. ಹೀಗಾಗಿ ಜನರ ಓಡಾಟ, ಕಾರ್ಯಚಟುವಟಿಕೆ ಹೆಚ್ಚಲಿದೆ. ಇದರ ಬೆನ್ನಲ್ಲೇ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ನಗರವಾಸಿಗಳಿಗೆ 22 ಸೂಚನೆ ನೀಡಿದ್ದಾರೆ. 

ಒಂದಲ್ಲ, ಎರಡಲ್ಲ, 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಮೊಹಮ್ಮದ್ ಶಮಿ! 

ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಲವು ಸಮಸ್ಯೆಗಳಿಂದ ಹೊರಬಂದು ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಹೋರಾಟಗಾರ. ಭಾರತದ ತಂಡದ ಪ್ರಮುಖ ವೇಗಿಯಾಗಿ ಗುರುತಿಸಿಕೊಂಡಿರುವ ಮೊಹಮ್ಮದ್ ಶಮಿ 2018ರಲ್ಲಿ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಅನ್ನೋ ಸ್ಫೋಟಕ ಮಾಹಿತಿಯನ್ನು ಸ್ವತಃ ಶಮಿ ಬಹಿರಂಗ ಪಡಿಸಿದ್ದಾರೆ.

ಮಿಸ್‌ ಮಾಡದೇ ದಿನಾ ಯಶ್‌ಗೆ ಊಟ ಮಾಡಿಸೋ ಐರಾ, ಅಪ್ಪ -ಅಮ್ಮ ಇಲ್ಲದೇ ಜೂನಿಯರ್ ಮಲಗೋದೇ ಇಲ್ವಂತೆ!

ಕನ್ನಡ ಚಿತ್ರರಂಗದ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಚಿತ್ರೀಕರಣ ಹಾಗೂ ಇತರೆ ಸಿನಿ ಕಾರ್ಯಕ್ರಮಗಳು ರದ್ದಾಗಿರುವ ಕಾರಣ ಮಕ್ಕಳ ಜೊತೆ ಯಶ್‌ ಟೈಂ ಪಾಸ್‌ ಮಾಡುತ್ತಿದ್ದಾರೆ.

ವಿಶ್ವದಾಖಲೆ ಬರೆದ ರಾಮಾಯಣ ಧಾರಾವಾಹಿ ಪ್ರಸಾರ ಮುಕ್ತಾಯ

ಕೊರೋನಾ ಲಾಕ್‌ಡೌನ್‌ ವೇಳೆ ಜನರ ಬೇಸರ ನೀಗಿಸಲೆಂದು ಕೇಂದ್ರ ಸರ್ಕಾರ ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದ ರಮಾನಂದ್‌ ಸಾಗರ್‌ ನಿರ್ದೇಶನದ ‘ರಾಮಾಯಣ’ ಧಾರಾವಾಹಿ ಪ್ರಸಾರ ಶನಿವಾರ ಮುಕ್ತಾಯವಾಗಿದೆ. ಇದರೊಂದಿಗೆ ರಾಮಾಯಣ ಧಾರಾವಾಹಿ ಹೊಸ ಇತಿಹಾಸವೊಂದನ್ನೂ ರಚಿಸಿದೆ.

ಹೊಂಡಾ ಸಿಟಿ ಕಾರಿಗೆ MLA ಪಾಸ್, ಲಾಕ್‌ಡೌನ್ ಉಲ್ಲಂಘಿಸಿದ 20ರ ಯುವಕ ಕೊನೆಗೂ ಅರೆಸ್ಟ್!

ಲಾಕ್‌ಡೌನ್ ಕಾರಣ ರಸ್ತೆಗಳೆಲ್ಲಾ ಖಾಲಿ ಖಾಲಿ. ಹಲವರು ಪೊಲೀಸರ ಕಣ್ತಪ್ಪಿಸಿ ಲಾಂಗ್ ಡ್ರೈವ್ ಪ್ರಯತ್ನ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇನ್ನು ಕೆಲವರು ನಕಲಿ ಪೊಲೀಸ್ ಪಾಸ್ ಮೂಲಕ ತಿರುಗಾಡಿದ್ದಾರೆ. 20 ಯುವಕ ತನ್ನ ಹೊಂಡಾ ಸಿಟಿ ಕಾರಿಗೆ MLA ಪಾಸ್ ಅಂಟಿಸಿ ಲಾಕ್‌ಡೌನ್ ಉಲ್ಲಂಘಿಸಿದ್ದಾನೆ. ಆದರೆ ಯುವಕನ ಆಟ ಹೆಚ್ಚು ದಿನ ನಡೆಯಲಿಲ್ಲ.

ಮೇ 17 ಕ್ಕೆ ಮುಗಿಯಲ್ಲ ಕೊರೊನಾ ಅಟ್ಟಹಾಸ; 2020 ರವರೆಗೆ ಫಿಕ್ಸ್?

ಮೇ 17 ರಂದು ಮೂರನೇ ಹಂತದ ಲಾಕ್‌ಡೌನ್ ಮುಕ್ತಾಯಗೊಳ್ಳಲಿದೆ. ಅಲ್ಲಿಗೆ ಕೊರೊನಾದಿಂದ ಮುಕ್ತಿ ಸಿಗುವುದಿಲ್ಲ. ಇನ್ನೂ ಎರಡು ವರ್ಷ ಕೊರೊನಾ ಅಟ್ಟಹಾಸ ಮುಂದುವರೆಯಲಿದೆ ಎಂದು ಅಮೆರಿಕಾ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರ ಭವಿಷ್ಯ ನುಡಿದಿದೆ.