ಬೆಂಗಳೂರು[ಆ.31]: ತೀವ್ರ ಕುತೂಹಲ ಕೆರಳಿಸಿದ್ದ KMF ಚುನಾವಣೆಯಲ್ಲಿ, ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಗೆದ್ದು ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ. ಹೌದು ಕಳೆದ 15 ವರ್ಷಗಳಿಂದ KMF ಅಧ್ಯಕ್ಷರಾಗಿದ್ದ ಎಚ್. ಡಿ. ರೇವಣ್ಣ ಚುನಾವಣೆಗೆ ಕೆಲವೇ ಗಂಟೆಗಳು ಬಾಕಿ ಇದೆ ಎನ್ನುವಷ್ಟರಲ್ಲಿ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ.

ಇಂದು ಶನಿವಾರ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಚಾಲಚಂದ್ರ ಜಾರಕಿಹೊಳಿ ಗೆಲುವು ಸಾಧಿಸುತ್ತಾರೆಂಬ ಅನುಮಾನ ವ್ಯಕ್ತವಾಗಿತ್ತು. KMFನ 19 ನಿರ್ದೆಶಕರ ಪೈಕಿ, ಜಾರಕಿಹೊಳಿ ತಾವೂ ಸೇರಿದಂತೆ ಒಟ್ಟು 12 ಮಂದಿಯ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ 15 ವರ್ಷಗಳಿಂದ KMF ಆಳಿದ್ದ ರೇವಣ್ಣ ಸೋಲುವ ಭೀತಿ ಎದುರಾಗಿತ್ತು. ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರಾದರೂ ಇದನ್ನು ಹಿಂಪಡೆಯುತ್ತಾರೆಂದು ಅಂದಾಜಿಸಲಾಗಿತ್ತು.

'ಗ್ರಹ'ಚಾರ ಸರಿ ಇಲ್ಲ: ರೇವಣ್ಣಗೆ KMF ಡಬಲ್ ಶಾಕ್!

ಮಧ್ಯಾಹ್ನ 1 ಗಂಟೆಯವರೆಗೂ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. 1:45ಕ್ಕೆ ಮತದಾನ ಪ್ರಕ್ರಿಯೆ ಆರಂಭವಾಗಲಿದ್ದು, 2 ಗಂಟೆಗೆ ಅಂತಿಮ ಫಲಿತಾಂಶ ಹೊರಬೀಳಲಿದೆ. ಒಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಜಾರಕಿಹೊಳಿ ಅವಿರೋಧ ಆಯ್ಕೆ ಖಚಿತ

ಸದ್ಯ ಈ ಅನುಮಾನದಂತೆ ಎಚ್. ಡಿ. ರೇವಣ್ಣ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಹೀಗಾಗಿ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 

11 ಮಂದಿ ಅಜ್ಞಾತ ಸ್ಥಳಕ್ಕೆ : ಜಾರಕಿಹೊಳಿ ಯಶಸ್ವಿ?