ಬೆಂಗಳೂರು[ಜು. 13] ಸತತ ಮೂರೂವರೆ ಗಂಟೆ ಕಾಲ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಯಲ್ಲಿ ರಾಜೀನಾಮೆ ಹಿಂಪಡೆಯಲು ಎಂಟಿಬಿ ನಾಗರಾಜ್ ಮನವೊಲಿಕೆ ಪ್ರಯತ್ನಗಳು ನಡೆದಿದ್ದು ಅಂತಿಮವಾಗಿ ವಿಫಲವಾಗಿದೆ.

‘ಕುಮಾರಸ್ವಾಮಿ ಸಿಎಂ ಸ್ಥಾನದಲ್ಲಿ ಇದ್ದರೆ ನಾನು ರಾಜೀನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ನೀವು ಸಿಎಂ ಆಗುವುದಾದರೆ ಈ ಕೂಡಲೇ ರಾಜೀನಾಮೆ ವಾಪಸ್ ಪಡೆಯುತ್ತೇನೆ’ ಎಂದು ಎಂಟಿಬಿ ಹೇಳಿದ್ದಾರೆ.

ಬಿಜೆಪಿಯ ಮೆಗಾ ಪ್ಲ್ಯಾನ್.. ದೋಸ್ತಿಯಲ್ಲಿ ತಳಮಳ

ಡಿ.ಕೆ.ಶಿವಕುಮಾರ್, ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್ ಸಹ ಎಂಟಿಬಿ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಪಟ್ಟರು. ಆದರೆ ಇದೇ ಅವಧಿಯಲ್ಲಿ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಎಂಟಿಬಿ ಪಟ್ಟು ಹಿಡಿದರು. ನಂತರ ರಾಜೀನಾಮೆ ಕೊಟ್ಟ ಸುಧಾಕರ್ ಅವರ ಜತೆಗೂ ಮಾತನಾಡುತ್ತೇನೆ ಎಂದು ಹೇಳಿ ತೆರಳಿದರು.