ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ನಡೆಯುತ್ತಿದೆ. ಇತ್ತ ಬಿಜೆಪಿ ನಾಯಕರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ. ಬಿಎಸ್ ವೈ ನೇತೃತ್ವದಲ್ಲಿ ಎಲ್ಲಾ ತಂತ್ರಗಳು ನಡೆಯುತ್ತಿವೆ. 

ಬೆಂಗಳೂರು[ಜು.13] : ರಾಜ್ಯ ರಾಜಕಾರಣದಲ್ಲಿ ಪ್ರಹಸನ ನಡೆಯುತ್ತಿರುವ ಬೆನ್ನಲ್ಲೇ ಇತ್ತ ಬಿಜೆಪಿ ರಿವರ್ಸ್ ಆಪರೇಷನ್ ತಡೆಯಲು ಮೆಗಾ ಪ್ಲಾನ್ ಮಾಡುತ್ತಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ಶಾಸಕರನ್ನು ಕಾಯ್ದುಕೊಳ್ಳ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ತಂತ್ರ ರೂಪಿಸುತ್ತಿದ್ದಾರೆ. 

ಸದ್ಯ ಬಿಜೆಪಿ ಶಾಸಕರನ್ನು ರೆಸಾರ್ಟ್ ನಲ್ಲಿ ಇರಿಸಲಾಗಿದ್ದು, ಅಲ್ಲಿಯೇ ಪ್ಲಾನ್ ನಡೆಯುತ್ತಿದೆ. ಮೂರು ಮೂರು ಶಾಸಕರ ಜವಾಬ್ದಾರಿಯನ್ನು ಓರ್ವ ನಾಯಕರಿಗೆ ವಹಿಸಲಾಗುತ್ತಿದೆ. 

ಎಂತಹ ಸಂದರ್ಭ ಎದುರಾದರೂ ಕೂಡ ಇವರನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಅದೇ ನಾಯಕನ ಮೇಲೆ ಇರಲಿದೆ. ಒಂದೊಂದು ಬಾರಿ ಮೂವರನ್ನು ಕರೆದು ಬಿಎಸ್ ವೈ ಮಾತುಕತೆ ನಡೆಸುತ್ತಿದ್ದಾರೆ. ರಿವರ್ಸ್ ಆಪರೇಷನ್ ನಲ್ಲಿ ಕೇಳಿ ಬಂದ ಹೆಸರುಗಳ ಮೇಲೆ ಕಣ್ಣಿಡುವಂತೆ ಸೂಚಿಸಿದ್ದಾರೆ.