Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ 2 ದಿನ ಭಾರೀ ಮಳೆ ಎಚ್ಚರಿಕೆ, ಸರಳವಾಯಿತು ಮರಣೋತ್ತರ ಪರೀಕ್ಷೆ; ನ.15ರ ಟಾಪ್ 10 ಸುದ್ದಿ!

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಇನ್ನೆರಡು ದಿನ ಭಾರಿ ಮಳೆಯಾಗಲಿದೆ. ಕ್ರಿಪ್ಟೋಕರೆನ್ಸಿ ನಿಯಂತ್ರಣಕ್ಕೆ ಶೀಘ್ರದಲ್ಲೆ ಹೊಸ ಮಸೂದೆ ಮಂಡನೆಯಾಗಲಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡರು ಸಿದ್ಧರಾಗಿದ್ದಾರೆ. ಮರಣೋತ್ತರ ಪರೀಕ್ಷೆ ನಿಮಯ ತಿದ್ದುಪಡಿ ಮಾಡಲಾಗಿದೆ. ಬಾಲಿವುಡ್ ಚೆಲುವೆಯ ಕೆನ್ನೆ ಹಿಂಡಿದ ಹುಡುಗ, ಹೊಸ ಕನಸು ಬಿಚ್ಚಿಟ್ಟ ರವಿ ಶಾಸ್ತ್ರಿ ಸೇರಿದಂತೆ ನವೆಂಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

Karnataka Rain Alert to Post mortem protocol top 10 News of november 15 ckm
Author
Bengaluru, First Published Nov 15, 2021, 6:47 PM IST
  • Facebook
  • Twitter
  • Whatsapp

IDSAಗೆ ಪರಿಕ್ಕರ್ ಹೆಸರು: ದೇಶದ ರಕ್ಷಣೆ ಮತ್ತು ಭದ್ರತೆಗೆ ಹೊಸ ದಿಕ್ಕನ್ನು ಕೊಡಲಿದೆ ಸಂಸ್ಥೆ!

Karnataka Rain Alert to Post mortem protocol top 10 News of november 15 ckm

ದೆಹಲಿ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲೈಸಸ್ (Institute for Defence Studies and Analyses) ಈಗ ಮಾಜಿ ರಕ್ಷಣಾ ಸಚಿವ ದಿವಂಗತ ಮನೋಹರ್ ಪರಿಕ್ಕರ್ (Manohar Parrikar) ಅವರ ಹೆಸರಿನಿಂದ ಗುರುತಿಸಿಕೊಳ್ಳಲಿದೆ. ಹೌದು ಇನ್ಮುಂದೆ ಇದನ್ನು ಎಂಪಿ-ಐಡಿಎಸ್‌ಎ ಎಂದು ಕರೆಯಲಾಗುತ್ತದೆ. 

ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ : 2 ದಿನ 13 ಜಿಲ್ಲೆಗಳಿಗೆ ಎಚ್ಚರಿಕೆ

Karnataka Rain Alert to Post mortem protocol top 10 News of november 15 ckm

ರಾಜ್ಯದ ಕರಾವಳಿ ಮತ್ತು ಮಲೆನಾಡು (Malnad) ಜಿಲ್ಲೆಗಳಲ್ಲಿ ಭಾನುವಾರ ಭಾರಿ ಮಳೆಯಾಗಿದೆ (Heavy rain). ಕರಾವಳಿ (Costal) ಮತ್ತು ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ನವೆಂಬರ್‌ 15 ಮತ್ತು 16ರಂದು ಸಹ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

Post Mortem: ಮರಣೋತ್ತರ ಪರೀಕ್ಷೆಗೆ ಹೊಸ ನಿಯಮ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ, ಇಂದಿನಿಂದಲೇ ಜಾರಿ!

Karnataka Rain Alert to Post mortem protocol top 10 News of november 15 ckm

ಸರ್ಕಾರಿ ಪ್ರಕ್ರಿಯೆಗಳಿಂದ ವಿಳಂಬವಾಗುತ್ತಿದ್ದ ಮರಣೋತ್ತರ ಪರೀಕ್ಷೆ(Post-Mortem ) ಪ್ರೋಟೋಕಾಲ್ ಬದಲಿಸಲಾಗಿದೆ. ಇಷ್ಟು ದಿನ ಸೂರ್ಯನ ಬೆಳಕಿನ ಮಾತ್ರ ಮರಣೋತ್ತರ ಪರೀಕ್ಷೆ ನಡೆಸಬೇಕು ಅನ್ನೋ ಸರ್ಕಾರಿ ನಿಯಮನ್ನು ಇದೀಗ ಬದಲಿಸಲಾಗಿದೆ. ಸೂರ್ಯಾಸ್ತದ ನಂತರವೂ ಮರಣೋತ್ತರ ಪರೀಕ್ಷೆ ನಡೆಸಲು ಕೇಂದ್ರ ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. 

ICC T20 World Cup: ಚಾಂಪಿಯನ್ ಆಸ್ಟ್ರೇಲಿಯಾ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತವೆಷ್ಟು..?

Karnataka Rain Alert to Post mortem protocol top 10 News of november 15 ckm

 ದುಬೈನಲ್ಲಿ ನಡೆದ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಚೊಚ್ಚಲ ಬಾರಿಗೆ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಭಾರೀ ಮೊತ್ತದ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಇನ್ನೊಂದೆಡೆ ನಮೀಬಿಯಾ, ಸ್ಕಾಟ್ಲೆಂಡ್‌  ತಂಡಗಳು ಪಡೆದಷ್ಟೇ ಹಣವನ್ನು ಟೀಂ ಇಂಡಿಯಾ (Team India) ಪಡೆದುಕೊಂಡಿದೆ.

Malaika Arora: ಬಾಲಿವುಡ್ ನಟಿಯ ಕೆನ್ನೆ ಹಿಂಡಿದ ಹುಡುಗ, ನಟಿಯ ರಿಯಾಕ್ಷನ್ ಹೀಗಿತ್ತು

Karnataka Rain Alert to Post mortem protocol top 10 News of november 15 ckm

ಮಲೈಕಾ ಅರೋರಾ(Malaika Arora) ಕ್ಯೂಟ್ & ಹಾಟ್ ನಟಿ. ಬಾಲಿವುಡ್‌ನ(Bollywood) ಸೂಪರ್ ಮಾಡೆಲ್, ಡ್ಯಾನ್ಸರ್, ಫಿಟ್ನೆಸ್ ಫ್ರೀಕ್, ಯೋಗಪಟು ಕೂಡಾ ಹೌದು. 48ರಲ್ಲೂ ಸಖತ್ ಫಿಟ್ ಅಗಿರೋ ನಟಿ ಎಂದರೆ ಚಿಕ್ಕ ಮಕ್ಕಳಿಂದ ತೊಡಗಿ ದೊಡ್ಡವರ ತನಕ ಎಲ್ಲರಿಗೂ ಇಷ್ಟ. ಚೈಂಯ ಚೈಂಯ ಹುಡುಗಿ ಅಂದ್ರೆ ಎಲ್ಲರಿಗೂ ಮಲೈಕಾರ ನೆನಪಾಗುತ್ತದೆ, ಪರಿಚಯವೂ ಸಿಗುತ್ತದೆ.

Bitcoinನಂಥ ಕ್ರಿಪ್ಟೋಕರೆನ್ಸಿಗೆ ಮಾನ್ಯತೆ ಇಲ್ಲ, ನಿಯಂತ್ರಣಕ್ಕೆ ಶೀಘ್ರ ಮಸೂದೆ

Karnataka Rain Alert to Post mortem protocol top 10 News of november 15 ckm

ದೇಶಾದ್ಯಂತ ನಾನಾ ಕಾರಣಕ್ಕಾಗಿ ಬಿಟ್‌ಕಾಯಿನ್‌ನಂಥ (Bitcoin) ಕ್ರಿಪ್ಟೋಕರೆನ್ಸಿಗಳು (Cryptocurrency)ಭಾರೀ ಸದ್ದು ಮಾಡುತ್ತಿರುವ ಹೊತ್ತಿನಲ್ಲೇ, ಇದುವರೆಗೂ ಯಾವುದೇ ನಿಯಂತ್ರಣಕ್ಕೆ ಒಳಪಡದ ಇಂಥ ವರ್ಚುವಲ್‌ ಕರೆನ್ಸಿಗಳನ್ನು (Virtual Currency) ತನ್ನ ನಿಯಂತ್ರಣದ ವ್ಯಾಪ್ತಿಗೆ ತರುವ ಸಂಬಂಧ ಮಸೂದೆಯೊಂದನ್ನು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

Team India ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಹೊಸ ಕನಸನ್ನು ಬಿಚ್ಚಿಟ್ಟ ರವಿಶಾಸ್ತ್ರಿ..!

Karnataka Rain Alert to Post mortem protocol top 10 News of november 15 ckm

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ (ICC T20 World Cup) ಭಾರತ ಕ್ರಿಕೆಟ್ ತಂಡದ (Indian Cricket Team) ಅಭಿಯಾನ ಮುಕ್ತಾಯವಾಗುತ್ತಿದ್ದಂತೆಯೇ, ಹೆಡ್ ಕೋಚ್ ಆಗಿದ್ದ ರವಿಶಾಸ್ತ್ರಿ (Ravi Shastri) ಒಪ್ಪಂದಾವಧಿಯೂ ಮುಕ್ತಾಯವಾಗಿದೆ. ಇದೇ ವೇಳೆ ರವಿಶಾಸ್ತ್ರಿ ತಮ್ಮ ಮುಂದಿನ ಯೋಜನೆಯನ್ನು ಬಿಚ್ಚಿಟ್ಟಿದ್ದಾರೆ. ಕೋಚ್‌ ಹುದ್ದೆಯಿಂದ ಕೆಳಗಿಳಿದ ಬಳಿಕ ರವಿಶಾಸ್ತ್ರಿ ಏನು ಮಾಡುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

'ರಾಷ್ಟ್ರೀಯ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ದೇವೇಗೌಡ್ರು ಸಿದ್ಧ'

Karnataka Rain Alert to Post mortem protocol top 10 News of november 15 ckm

ನಮ್ಮದು ಕುಟುಂಬ ರಾಜಕಾರಣ (Family Politics) ಎಂದು ಆರೋಪಿಸುತ್ತಾರೆ. ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರಬಾರದು ಎಂದಿದೆಯಾ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios