ತುಮಕೂರು[ಜು. 01] ಸರ್ಕಾರಕ್ಕೆ ಏನಾದ್ರೂ ನಮಗೇನು ಬೇಜಾರಿಲ್ಲ,  ಇದ್ರೆ ಕೆಲಸ ಮಾಡ್ತಿವಿ,,, ಇಲ್ಲಾ ಅಂದ್ರೆ ಮನೆಗೆ ಹೋಗ್ತಿವಿ.. ಹೀಗೆ ಹೇಳಿದ್ದು ಶಿಕ್ಷಣ ಸಚಿವ  ಎಸ್.ಆರ್.ಶ್ರೀನಿವಾಸ್.

ಆನಂದ್ ಸಿಂಗ್ ರಾಜಿನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ್,  ಸರ್ಕಾರ ಹೋದರೆ ನನಗೆ ಬೇಜಾರಾಗಲ್ಲ. ಸರ್ಕಾರದಲ್ಲಿ ಒಂದೇ ಮನಸ್ಥಿತಿಯವರು ಇರಲ್ಲ. ಹಾಗಾದಾಗ ಇಂಥ ಪರಿಸ್ಥಿತಿ ಉದ್ಭವವಾಗುತ್ತದೆ ಎಂದು ಹೇಳಿದರು.

ರಾಜೀನಾಮೆ ಪರ್ವಕ್ಕೆ 5 ಕಾರಣ? ಕಾಣದ ‘ಕೈ’ ಯಾವುದೂ ಇಲ್ಲ!

ಸರ್ಕಾರ  ಉರುಳುವ ಪ್ರಶ್ನೆಯೇ ಇಲ್ಲ. ಇವೆಲ್ಲ ಮಾಧ್ಯಮದವರ  ಸೃಷ್ಟಿ ಅಷ್ಟೆ ಎಂದು  ತುಮಕೂರಿನಲ್ಲಿ ಶಿಕ್ಷಣ ಸಚಿವರು ಹೇಳಿಕೆ ನೀಡಿದ್ದಾರೆ.