ಸಚಿವರ ಮುಂದೆ ಅಳಲು ತೋಡಿಕೊಂಡ ಸಿಎಂ: ಇದು ಕ್ಯಾಬಿನೆಟ್ ಸಭೆಯ ಇನ್‍ಸೈಡ್ ಸ್ಟೋರಿ 


ಕೊರೋನಾ ವೈರಸ್ ಮಾಹಾಮಾರಿ ಸಂಬಂಧ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆದ್ರೆ, ಸಭೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಚಿವರ ಮುಂದೆ ಅಳಲು ತೋಡಿಕೊಂಡಿದ್ದಾರೆ. 


ಭಾರತದಲ್ಲಿ ಕೊರೋನಾ ಅಟ್ಟಹಾಸಕ್ಕೆ ಮೊದಲ ವೈದ್ಯ ಬಲಿ!

ಭಾರತದಲ್ಲಿ ದಿನಗಳೆದಂತೆ ಉಲ್ಭಣಗೊಳ್ಳುತ್ತಿರುವ ಕೊರೋನಾ ವೈರಸ್‌ಗೆ 62 ವರ್ಷದ ವೈದ್ಯನೊಬ್ಬ ಬಲಿಯಾಗಿದ್ದಾರೆ. ಇವರು ದೇಶದಲ್ಲಿ ಡೆಡ್ಲಿ ಕೊರೋನಾಗೆ ಬಲಿಯಾದ ಮೊದಲ ವೈದ್ಯರಾಗಿದ್ದಾರೆ.

ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆಗೆ ಸಿದ್ಧ: ಬಿಎಸ್‌ವೈ

ಕೊರೋನಾ ವೈರಸ್ ನಿಯಂತ್ರಿಸಲು ರಾಜ್ಯಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಯಾವಾಗ ತೆರವಾಗುತ್ತೆ ಎಂಬ ಪ್ರಶ್ನೆ ರಾಜ್ಯದ ಜನತೆಯನ್ನು ಕಾಡುತ್ತಿದೆ. ಹೀಗಿರುವಾಗ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಉತ್ತರ ಸಿಗುವ ನಿರೀಕ್ಷೆ ಇತ್ತು. ಸದ್ಯ ಕ್ಯಾಬಿನೆಟ್ ಸಭೆ ಕೊನೆಗೊಂಡಿದ್ದು, ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರೆಸಲು ನಾವು ಸಿದ್ಧ. ಆದರೆ ನಾಳೆ, ಶುಕ್ರವಾರ ಪ್ರಧಾನಿ ಮೋದಿ ಜೊತೆ ನಡೆಯಲಿರುವ ಸಭೆಯಲ್ಲಿ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಲ್ಳುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ಮಾರಕ ಕೊರೋನಾಗೆ ರಾಜ್ಯದಲ್ಲಿ ಮತ್ತೊಂದು ಬಲಿ: 6ಕ್ಕೇರಿದ ಸಾವಿನ ಸಂಖ್ಯೆ

ವಿಶ್ವವನ್ನೇ ಕಂಗೆಡಿಸಿರುವ ಕೊರೋನಾ ಕರ್ನಾಟಕದಲ್ಲಿ ತನ್ನ ಹಾವಳಿ ಆರಂಭಿಸಿ ಇಂದಿಗೆ ಒಂದು ತಿಂಗಳು ಪೂರ್ಣಗೊಂಡಿದೆ. ದಿನಗಳೆದಂತೆ ಸೋಂಕಿತರ ಹಾಗೂ ಮೃತರ ಸಂಖ್ಯೆ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಈ ಮಹಾಮಾರಿಗೆ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದಾರೆ. ಗದಗದ 80 ವರ್ಷದ ವೃದ್ಧೆ ಮಾರಕ ಕೊರೋನಾಗೆ ಮೃತಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಈ ಡೆಡ್ಲಿ ವೈರಸ್‌ಗೆ ಬಲಿಯಾದವರ ಸಂಖ್ಯೆ 6ಕ್ಕೆ ಏರಿದೆ. 

ಪ್ರಿಯಾಂಕಾ ವಾದ್ರಾ ಬದಲು ಪ್ರಿಯಾಂಕಾ ಚೋಪ್ರಾ ಜಿಂದಾಬಾದ್ ಎಂದ ಕೈ ಮುಖಂಡ!

ಸಾರ್ವಜನಿಕ ಸಮಾರಂಭವೊಂದರಲ್ಲಿ ಪಕ್ಷದ ಹೈಕಮಾಂಡ್ ಮುಖಂಡರಿಗೆ ಬಹುಪರಾಕ್ ಹಾಕುತ್ತಿದ್ದ ಕಾಂಗ್ರೆಸ್ ಮುಖಂಡರೊಬ್ಬರು  ಪ್ರಿಯಾಂಕಾ ಗಾಂಧಿ ಬದಲು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾಗೆ ಜಿಂದಾಬಾದ್ ಎಂದು ಹೇಳಿ ಟ್ರೋಲ್ ಗೆ ಒಳಗಾಗಿದ್ದರು. ಕಳೆದ ಡಿಸೆಂಬರ್ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ.

ತಬ್ಲೀಖ್‌ ಸಂಘಟನೆ ನಿಷೇಧ: ಪ್ರಧಾನಿಗೆ ಶಾಸಕ ಪತ್ರ.

ತಬ್ಲೀಖ್‌ ಸಂಘಟನೆ ದೇಶಕ್ಕೆ ಮಾರಕವಾಗಿದ್ದು, ಇಂತಹ ಸಂಘಟನೆಯನ್ನು ಮೊದಲು ಬ್ಯಾನ್‌ ಮಾಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಳೆಯೇ ಪತ್ರ ಬರೆದು, ಒತ್ತಾಯಿಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಕ್ರಿಕೆಟರ್ ಅಥವಾ ಟೆನಿಸ್ ಪಟು? ಪುತ್ರನ ಕರಿಯರ್ ಕುತೂಹಲಕ್ಕೆ ಉತ್ತರ ನೀಡಿದ ಸಾನಿಯಾ.

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಶೋಯೆಬ್ ಮಲಿಕ್ ವಿವಾಹವಾಗಿರುವ ಸಾನಿಯಾಗೆ 2018ರ ಅಕ್ಟೋಬರ್‌ನಲ್ಲಿ ಗಂಡು ಮಗುವಿನ ತಾಯಿಯಾಗಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಸಾನಿಯಾ ಮಗನ ಫೋಟೋ ರಿವೀಲ್ ಮಾಡಿದ ಮರುಕ್ಷಣದಿಂದಲೇ ಅಭಿಮಾನಿಗಳು ಪುತ್ರ ಕ್ರಿಕೆಟಿಗನಾಗುತ್ತಾನೋ ಅಥವಾ ಟೆನಿಸ್ ಪಟು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದರು. ಇದೀಗ ಸಾನಿಯಾ ಈ ಕುತೂಹಲಕ್ಕೆ ಉತ್ತರ ನೀಡಿದ್ದಾರೆ.

ಕ್ರಿಕೆಟಿಗನಿಗೆ ಕಪಾಳ ಮೋಕ್ಷ ಮಾಡಿದ ಸ್ಯಾಂಡಲ್‌ವುಡ್‌ ನಟಿ; ಸತ್ಯವೇನು?.

ಬಹುಭಾಷಾ ನಟಿಯಾಗಿ  , ರಾಷ್ಟ್ರಪ್ರಶಸ್ತಿ ವಿಜೇತೆಯಾಗಿ ಗುರುತಿಸಿಕೊಂಡಿರುವ ಸಿಂಪಲ್‌ ಹುಡುಗಿ ಪ್ರಿಯಾಮಣಿ ಎಂದಿಗೂ ಕಾಂಟ್ರವರ್ಸಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವರಲ್ಲ. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಪರ್ಸನಲ್‌ ಲೈಫ್‌ಗೆ ಟೈಂ ನೀಡುತ್ತಿರುವ ಪ್ರಿಯಾ ಬಹು ವರ್ಷಗಳಿಂದ ಹರಿದಾಡುತ್ತಿರುವ ಗಾಳಿ ಮಾತುಗಳಿಗೆ ಈಗ ಬ್ರೇಕ್‌ ಹಾಕಿದ್ದಾರೆ. 

ವಾಟ್ಸ್‌ಆ್ಯಪ್ ಬಳಕೆದಾರರೇ, ನೀವೇ ಸುಳ್ಳು ಸುದ್ದಿ ಪತ್ತೆ ಹಚ್ಚಿ!...

ಈಗ ವಿಶ್ವಕ್ಕೇ ಕೊರೋನಾ ನಂಜು ಹೊತ್ತಿಕೊಂಡಿದೆ. ಈ ನಂಜಿನ ಬಾಧೆ ವಿಪರೀತವಾಗಿ ಬಾಧಿಸುತ್ತಿರುವುದರ ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳ ಜಾತ್ರೆ ಪ್ರಾರಂಭವಾಗಿದೆ. ಇಲ್ಲಿ ಇಂಥ ಸುದ್ದಿಗಳಿಗೆ ಸೋಷಿಯಲ್ ಮೀಡಿಯಾ ಡಿಸ್ಟೆನ್ಸ್ ಎಂಬುದು ಇರಲಿಲ್ಲ. ಜೊತೆಗೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಜನರ ಭಾವನೆಗಳನ್ನು ಬಳಸಿಕೊಂಡು ಹಣ ಹೊಡೆಯುವ ಕಾರ್ಯಕ್ಕೂ ಕೈ ಹಾಕಿದ್ದಾರೆ. ಇಂಥದ್ದೆಕ್ಕೆಲ್ಲ ಬ್ರೇಕ್ ಹಾಕಲು ಈಗ ವಾಟ್ಸ್‌ಆ್ಯಪ್ ಮುಂದಾಗಿದೆ.


ಕೊರೋನಾ ಭೀತಿ ನಡುವೆ ಪತ್ತೆಯಾಯ್ತು ವಿಚಿತ್ರ ಜೀವಿ: ಕ್ಯಾಮೆರಾದಲ್ಲಿ ಸೆರೆಯಾಯ್ತು ದೃಶ್ಯ!

ಮಾರ್ವೆಲ್‌ನ ಸೂಪರ್‌ ಹೀರೋ ಸಿನಿಮಾದಲ್ಲಿ ವಿಲನ್‌ಗೆ ಹೊಡೆದರೂ, ಬ್ಲೇಡಡ್‌ನಿಂದ ಕತ್ತರಿಸಿದರೂ ಬೇಗ ಸಾಯದಿರುವವುದನ್ನು ನೋಡಿರಬಹುದು. ಮಾರ್ವೆಲ್‌ನ ಹಹಲವಾರು ಸೂಪರ್‌ ಈರೋ ಸಿನಿಮಾಗಳು ಬಂದರೂ ಇದರಲ್ಲಿ ಬರುವ ವೇನಂ ಪಾತ್ರ ಮರೆಯಲಸಾಧ್ಯವಾದುದು. ನೋಡಲು ವಿಚಿತ್ರವಾಗಿರುಉವ ವೇನಮ್ ಅನ್ಯಗ್ರಹ ಜೀವಿ. ಹೀಗಿರುವಾಗ ವೇನಂನಂತಹ ಜೀವಿಯೊಂದು ಭೂಮಿಯಲ್ಲಿ ಕಾಣಲು ಸಿಕ್ಕಿದೆ ಎಂದರೆ ಹೇಗಿರುತ್ತೆ?