ಬಹುಭಾಷಾ ನಟಿಯಾಗಿ  , ರಾಷ್ಟ್ರಪ್ರಶಸ್ತಿ ವಿಜೇತೆಯಾಗಿ ಗುರುತಿಸಿಕೊಂಡಿರುವ ಸಿಂಪಲ್‌ ಹುಡುಗಿ ಪ್ರಿಯಾಮಣಿ ಎಂದಿಗೂ ಕಾಂಟ್ರವರ್ಸಿ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವರಲ್ಲ. ತಾನಾಯ್ತು ತನ್ನ ಸಿನಿಮಾ ಆಯ್ತು ಎಂದು ಪರ್ಸನಲ್‌ ಲೈಫ್‌ಗೆ ಟೈಂ ನೀಡುತ್ತಿರುವ ಪ್ರಿಯಾ ಬಹು ವರ್ಷಗಳಿಂದ ಹರಿದಾಡುತ್ತಿರುವ ಗಾಳಿ ಮಾತುಗಳಿಗೆ ಈಗ ಬ್ರೇಕ್‌ ಹಾಕಿದ್ದಾರೆ. 

ಸೆಲೆಬ್ರಿಟಿ ಕ್ರಿಕೆಟ್‌ ಲೀಗ್‌ನ ರಾಯಭಾರಿ ಆಗಿದ್ದ ವೇಳೆ ಪ್ರಿಯಾಮಣಿ  ಕ್ರಿಕೆಟಿಗನಿಗೆ ನಿಜಕ್ಕೂ ಕಪಾಳಕ್ಕೆ ಹೊಡ್ದ್ರಾ ? ಸಂದರ್ಶನವೊಂದರಲ್ಲಿ ಮಾತನಾಡುವಾಗ ಪ್ರಿಯಾಮಣಿ ಈ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ.

ಮುಸ್ತಫನ ರಾಣಿ ‘ಪುಲಿಮಣಿ’ ಚಾರ್ಮಿಂಗ್ ಫೋಟೋಸ್!

ಸಿಸಿಎಲ್‌ ಸಮಯಲ್ಲಿ ಪ್ರಿಯಾ  ತನ್ನ ತಮ್ಮನ ಫೋನ್‌ ಬಳಸುತ್ತಿದ್ದರು ಆಕೆಯ ಮೇಲೆ ಪ್ರ್ಯಾಂಕ್‌ ಮಾಡಬೇಕೆಂದು ಅನೇಕರು ಪೋನ್‌ ತೆಗೆದು ಬಚ್ಚಿಟ್ಟಿದ್ದಾರೆ  ಗಾಬರಿಗೊಂಡ ಪ್ರಿಯಾ ಫೋನ್ ಹಿಂತಿರುಗಿಸಲು ಬೇಡಿದ್ದಾರೆ ಆದರೂ ಆಟವಾಡಿಸಿದ ಕಾರಣ ಪ್ರಿಯಾ ಕೋಪಗೊಂಡಿದ್ದಾರೆ. ಆನಂತರ ಆತ ನಾನು ವಾಸವಿದ್ದ  ಹೋಟೆಲ್‌ಗೆ  ಕ್ಷಮೆ ಕೇಳಲು ಬಂದಿದ್ದರು ಆಗ ಅವರು ವರ್ತಿಸಿದ ರೀತಿ ನನಗೆ ಇಷ್ಟವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

'ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಅದು ಆದರೆ ನಾನು ಆತನಿಗೆ ಕಪಾಳಮೋಕ್ಷ ಮಾಡಿರುವುದು  ಸುಳ್ಳು ವಿಚಾರ. ಯಾವುದೇ ಸಾಕ್ಷಿ ಇಲ್ಲದೆ ಹರಿದಾಡುತ್ತಿರುವ ಗಾಳಿ ಮಾತಿದು ' ಎಂದು ಸ್ಪಷ್ಟನೆ ನೀಡಿದ್ದಾರೆ ಆದರೆ ಮಾತಿನಲ್ಲಿ ಎಲ್ಲಿಯೂ ಆ ಕ್ರಿಕೆಟಿಗನ ಹೆಸರು ರಿವೀಲ್‌ ಮಾಡಿಲ್ಲ.