ದಾವಣಗೆರೆ(ಏ.09): ನಾನು ಅಲ್ಪಸಂಖ್ಯಾತರ ವಿರೋಧಿಯಲ್ಲ. ಆಶಾ ಕಾರ್ಯಕರ್ತೆಯರ ಮೇಲೆ ದಿನೇದಿನೇ ಹಲ್ಲೆಯಾಗುತ್ತಿದೆ. ಬೆಳಗಾವಿಯಲ್ಲಿ ನರ್ಸ್‌ವೊಬ್ಬರು 3 ವರ್ಷದ ಮಗಳನ್ನು ಬಿಟ್ಟು ಕೆಲಸ ಮಾಡುತ್ತಿದ್ದು, ಮಗುವಿನ ಅಳುವನ್ನು ಕಂಡು ಮನಸ್ಸಿಗೆ ನೋವಾಗಿದ್ದರಿಂದ ಸೋಂಕು ಹರಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ನಾನು ಹೇಳಿದ್ದು ಸತ್ಯ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿ ಬುಧವಾರ ಕೈದಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಮಾನವೀಯತೆಯಿಂದ ಕೈದಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್‌ ವಿತರಿಸಿ, ಬುದ್ಧಿವಾದ ಹೇಳಿದ್ದೇನೆ. ತಿಳಿದೋ, ತಿಳಿಯದೆಯೋ ತಪ್ಪು ಮಾಡಿದವರು ಮುಂದೆ ಅದನ್ನು ಪುನರಾವರ್ತಿಸದೇ, ಮನಃ ಪರಿವರ್ತನೆ ಮಾಡಿಕೊಳ್ಳಲು ಕಿವಿಮಾತು ಹೇಳಿದ್ದೇನೆ ಎಂದರು.

ಚಿಕನ್‌, ಮೀನು ಸೇವನೆಯಿಂದ ಕೊರೋನಾ ಬರೋದಿಲ್ಲ: ಬಿ.ಸಿ. ಪಾಟೀಲ್‌

ತಬ್ಲೀಖ್‌ ಸಂಘಟನೆ ದೇಶಕ್ಕೆ ಮಾರಕವಾಗಿದ್ದು, ಇಂತಹ ಸಂಘಟನೆಯನ್ನು ಮೊದಲು ಬ್ಯಾನ್‌ ಮಾಡಬೇಕು. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾಳೆಯೇ ಪತ್ರ ಬರೆದು, ಒತ್ತಾಯಿಸುತ್ತೇನೆ. ಕೊರೋನಾ ವೈರಸ್‌ ಸೋಂಕು ದಿನದಿನಕ್ಕೂ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುವೆ ಎಂದರು.

ಸಿದ್ದರಾಮಯ್ಯ ಹಿರಿಯರು, ಮುಖ್ಯಮಂತ್ರಿಯಾಗಿ, ಈಗ ವಿಪಕ್ಷ ನಾಯಕರಾಗಿದ್ದಾರೆ. ಮೊದಲು ಅದೇ ಕಾಂಗ್ರೆಸ್‌ ಪಕ್ಷದ ಶಾಸಕ ಜಮೀರ್‌ ಅಹಮ್ಮದ್‌ಗೆ ಮೊದಲು ಉಚ್ಛಾಟನೆ ಮಾಡಲಿ. ವೈದ್ಯರು, ಶುಶ್ರೂಷಕರು, ಪೊಲೀಸರ ಮೇಲೆ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ, ದೌರ್ಜನ್ಯ ಮಾಡಿದರಲ್ಲ ಇಂತಹವರಿಗೆ ಏನು ಮಾಡುತ್ತೀರಿ? ಏನು ಹೇಳುತ್ತೀರಿ ಸಿದ್ದರಾಮಯ್ಯ ಎಂದು ಅವರು ಪ್ರಶ್ನಿಸಿದರು.

ಪ್ರಾಣವನ್ನೇ ಪಣಕ್ಕಿಟ್ಟು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಹೂಮಳೆ ಸ್ವಾಗತ

ದೆಹಲಿ ನಿಜಾಮುದ್ದೀನ್‌ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರು ಯಾರೇ ಆಗಿದ್ದರೂ ಗೌಪ್ಯತೆ ಕಾಪಾಡಬೇಡಿ ಎಂಬುದಾಗಿ ಹೇಳಿದ್ದೇವೆ. ಆಶಾ ಕಾರ್ಯಕರ್ತೆಯರು, ವೈದ್ಯರು, ಶುಶ್ರೂಷಕರು, ಪೊಲೀಸರ ಮೇಲೆ ಹಲ್ಲೆ ಒಳ್ಳೆಯದಲ್ಲವೆಂದು ಸ್ವತಃ ಮುಸ್ಲಿಂ ಮಹಿಳೆಯರೇ ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಮೇಯರ್‌ ಬಿ.ಜಿ.ಅಜಯಕುಮಾರ, ದೂಡಾ ಅಧ್ಯಕ್ಷ ಶಿವಕುಮಾರ ಪೈಲ್ವಾನ್‌, ಪಾಲಿಕೆ ಸದಸ್ಯರಾದ ಶಿವನಗೌಡ ಪಾಟೀಲ್‌, ಸೋಗಿ ಶಾಂತಕುಮಾರ, ಬಿಜೆಪಿಮುಖಂಡರಾದ ಪಿ.ಸಿ.ಶ್ರೀನಿವಾಸ ಭಟ, ಟಿಂಕರ್‌ ಮಂಜಣ್ಣ ಇತರರು ಇದ್ದರು.