ನವದೆಹಲಿ(ಏ.09): ಮಾರ್ವೆಲ್‌ನ ಸೂಪರ್‌ ಹೀರೋ ಸಿನಿಮಾದಲ್ಲಿ ವಿಲನ್‌ಗೆ ಹೊಡೆದರೂ, ಬ್ಲೇಡಡ್‌ನಿಂದ ಕತ್ತರಿಸಿದರೂ ಬೇಗ ಸಾಯದಿರುವವುದನ್ನು ನೋಡಿರಬಹುದು. ಮಾರ್ವೆಲ್‌ನ ಹಹಲವಾರು ಸೂಪರ್‌ ಈರೋ ಸಿನಿಮಾಗಳು ಬಂದರೂ ಇದರಲ್ಲಿ ಬರುವ ವೇನಂ ಪಾತ್ರ ಮರೆಯಲಸಾಧ್ಯವಾದುದು. ನೋಡಲು ವಿಚಿತ್ರವಾಗಿರುಉವ ವೇನಮ್ ಅನ್ಯಗ್ರಹ ಜೀವಿ. ಹೀಗಿರುವಾಗ ವೇನಂನಂತಹ ಜೀವಿಯೊಂದು ಭೂಮಿಯಲ್ಲಿ ಕಾಣಲು ಸಿಕ್ಕಿದೆ ಎಂದರೆ ಹೇಗಿರುತ್ತೆ?

ಹೌದು ಇದು ಕೊಂಚ ವಿಚಿತ್ರವಾದರೂ ಸತ್ಯ. ಇತ್ತೀಚೆಗೆ ವಿಚಿತ್ರ ಜೀವಿಯೊಂದರ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಇದನ್ನು ಕೋಟ್ಯಂತರ ಮಂದಿ ವೀಕ್ಷಿಸಿದ್ದಾರೆ. 

ಹದಿನಾಲ್ಕು ಸೆಕೆಂಡ್‌ನ ಈ ವಿಡಿಯೋ ನೆಟ್ಟಿಗರನ್ನು ಅಚ್ಚರಿಗೀಡು ಮಾಡಿದೆ. ವಿಡಿಯೋದಲ್ಲಿ ಕಲ್ಲಿನ ಮೇಲೊಂದು ಕಪ್ಪು ಬಣ್ಣದ ವಿಚಿತ್ರ ಜೀವಿ ಹರಿದಾಡುವ ದೃಶ್ಯಗಳಿವೆ. ಹೀಗಿರುವಾಗ ಅನೇಕ ಮಂದಿ ಚಾಕು ಹಾಗೂ ಬ್ಲೇಡ್ ಮೂಲಕ ತುಂಡರಿಇಸಲು ಯತ್ನಿಸುತ್ತಾರೆ. ಹೀಗಿದ್ದರೂ ಇದ್ಯಾವುಊ ಆ ಜೀವಿ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಟ್ವಿಟರ್ ಬಳಕೆದಾರನೊಬ್ಬ ಈ ವಿಡಿಯೋವನ್ನು ಶೇರ್ ಮಾಡಿ ಇದು ಯಾವ ಜೀವಿ ಎಂದು ಯಾರಾದರೂ ಬಲ್ಲಿರಾ? ಎಂದು ಪ್ರಶ್ನಿಸಿದ್ದಾರೆ.