ಬೆಂಗಳೂರು[ಮಾ. 28]   ನಮ್ಮ ಬಳಿ ಎಸಿಬಿ ಇದೆ ಕೇಂದ್ರ ಸರ್ಕಾರಿ ನೌಕರರು ಮತ್ತು ರಾಜ್ಯ ಸರ್ಕಾರಿ ನೌಕರರ ಮೇಲೆ ದಾಳಿ ಮಾಡಬಹುದು. ಆದರೆ ನಾವು ಆ ರೀತಿ ಮಾಡೊಲ್ಲ. ಇವರ ಪಕ್ಷದಲ್ಲಿ ಹಲವು ಜನರ ಬಳಿ ಕಪ್ಪು ಹಣ ಇದೆ. ಅವರ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಐಟಿ ಇಲಾಖೆ ಯವರು ನಮ್ಮ ಇಲಾಖೆಯವರ ಮೇಲೆ ದಾಳಿ ಮಾಡಿದ್ದಾರೆ.  ಕಾಂಗ್ರೆಸ್ 60 ವರ್ಷ ಅಧಿಕಾರ ನಡೆಸಿದೆ. ಆದರೆ ಚುನಾವಣೆ ಸಂದರ್ಭದಲ್ಲಿ ಒಂದೇ ಒಂದು ದಾಳಿ ಮಾಡಿದೇಯಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆಡ ಮಾಡಿದರು.

ಡಿಕೆ ಶಿವಕುಮಾರ್ ಮೇಲೆ ದಾಳಿ ಮಾಡಿದ್ದಾರೆ.  ದಾಳಿಯಿಂದ ಶಿವಕುಮಾರ್ ಖಿನ್ನತೆಗೆ ಒಳಗಾಗಿದ್ದಾರೆ. ಎಂಟಿಬಿ ನಾಗರಾಜ್, ಭೈರತಿ ಬಸವರಾಜು, ಭೈರತಿ ಬಸವರಾಜು, ನನ್ನ ಬೆಂಬಲಿಗರ ಮೇಲೆ ದಾಳಿ ಮಾಡಲಾಗಿದೆ. ಕೇವಲ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಮೇಲೆ ಮಾತ್ರ ಏಕೆ ದಾಳಿ ಮಾಡ್ತಾರೆ? ಎಂದು ಸಿದ್ದರಾಮಯ್ಯ ಮರು ಪ್ರಶ್ನೆ ಹಾಕಿದರು.

’IT ಚೀಫ್ BJP ಏಜೆಂಟ್; ದೇವೇಗೌಡ್ರ ಮೇಲೆ ಕೈ ಹಾಕಿದವ್ರು ಉಳಿಯಲ್ಲ!’

ನರೇಂದ್ರ ಮೋದಿ ಅವರಿಗೆ ಸೋಲಿನ ಭಯ.  ಹೀಗಾಗಿ ದಾಳಿ ಮಾಡ್ತಿದ್ದಾರೆ. ಬಿಜೆಪಿ 2019ರ ಚುನಾವಣೆ ಯಲ್ಲಿ ನೂರಕ್ಕೆ ನೂರು ಸೋಲ್ತಾರೆ ನಾವು ಅಧಿಕಾರಕ್ಕೆ ಬರ್ತೇವೆ. ಇದನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡ್ತಿದ್ದಾರಲ್ಲ. ನರೇಂದ್ರ ಮೋದಿ, ಅರುಣ್ ಜೇಟ್ಲಿ, ಅಮಿತ್ ಷಾ ಸೂಚನೆ ಮೇಲೆಯೇ ದಾಳಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ ವಾತಾವರಣ ಇರಬೇಕು. ವಿಪಕ್ಷವನ್ನು ಐಟಿ ದಾಳಿ ಮೂಲಕ ಭಯಪಡಿಸುವ ಕೆಲಸ ಮಾಡ್ತಿವಿ ಎಂದು ತಿಳಿದಿದ್ದರೆ ಅದು ನಿಮ್ಮ ಭ್ರಮೆ ಆಪರೇಷನ್ ಕಮಲ ದಲ್ಲಿ 20 ಕೋಟಿ, 30 ಕೋಟಿ ಕೊಡಲು ಹೋಗಿದ್ರು ಆ ಹಣ ಎಲ್ಲಿಂದ ಬಂತು? ಒಬ್ಬ ಬಿಜೆಪಿ ನಾಯಕರ ಮೇಲೆ ದಾಳಿ ಮಾಡಿಲ್ಲ. ಅವರೇನು ಸತ್ಯಹರಿಶ್ಚಂದ್ರರಾ? ನಿಮ್ಮ ಕಣ್ಣಿಗೆ ಕಾಣಿಸುವುದು ಜೆಡಿಎಸ್ ಕಾಂಗ್ರೆಸ್ ಮುಖಂಡರೇನಾ?   ಇನ್ನು ಮುಂದೆ ಈ ರೀತಿಯಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

 

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದ್ದು, ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.