ದಸರಾಗೆ ಹೆಚ್ಚು ಜನ ಸೇರುವಂತಿಲ್ಲ, ಮೋದಿ ಬಳಿ ಏನಿದೆ, ಏನಿಲ್ಲಾ? ಅ.15ರ ಟಾಪ್ 10 ಸುದ್ದಿ!
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣ ಕುರಿತು ಸಿಟಿ ರವಿ ಹೇಳಿಕೆ ಸಂಚಲನ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಪಿಎಂಒಗೆ ತಮ್ಮ ನೂತನ ಆಸ್ತಿ ವಿವರ ಪತ್ರ ಸಲ್ಲಿಸಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಬ್ರಿಟನ್ ಪ್ರಧಾನಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದೆ. ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಪಂಜಾಬ್ ಮುಖಾಮುಖಿಯಾಗುತ್ತಿದೆ. ರಾಜ್ಯಾದ್ಯಂತ ಸರಳ ದಸರಾ, 100 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ, ಜೇಮ್ಸ್ ಸಿನಿಮಾದಲ್ಲಿ ಮತ್ತೆ ಒಂದಾಗಲಿದೆ ಪುನೀತ್ - ಪ್ರಿಯಾ ಜೋಡಿ ಸೇರಿದಂತೆ ಅಕ್ಟೋಬರ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕಾಂಗ್ರೆಸ್-ಎಸ್‌ಡಿಪಿಐ ವಾಟ್ಸಪ್ ಚಾಟ್‌ನಿಂದ ಸಂಚು ಬಯಲು'...
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಯಿಸಿದ್ದಾರೆ.
ಅಮಿತ್ ಶಾ ಆಸ್ತಿ ವಿವರ ಬಹಿರಂಗ: ಗೃಹ ಸಚಿವರ ಬಳಿ ಏನೇನಿದೆ?...
ಪ್ರಧಾನಿ ಮೋದಿ ಆಸ್ತಿಯಲ್ಲಿ ಕೊಂಚ ಏರಿಕೆಯಾಗಿದ್ದರೆ, ಶ್ರೀಮಂತ ಗುಜರಾತಿ ಕುಟುಂಬಕ್ಕೆ ಸೇರಿದ ಗೃಹಸಚಿವ ಅಮಿತ್ ಶಾ ಅವರ ಆಸ್ತಿ ಇಳಿಮುಖವಾಗಿದೆ. 2020 ಜೂನ್ ವೇಳೆಗೆ ₹28.63 ಕೋಟಿ ರೂಪಾಯಿ ಆಸ್ತಿ ಹೊಂದಿರುವುದಾಗಿ ಅಮಿತ್ ಶಾ ಘೋಷಿಸಿದ್ದಾರೆ. ಕಳೆದ ವರ್ಷ ಅವರು ಘೋಷಿಸಿದ್ದ ಆಸ್ತಿ 32.3 ಕೋಟಿ ರೂಪಾಯಿ. ಅಮಿತ್ ಶಾ ಅವರು ಗುಜರಾತ್ನಲ್ಲಿ 10 ಸ್ಥಿರಾಸ್ತಿಯನ್ನ ಹೊಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪಿಎಂಒಗೆ ತಮ್ಮ ನೂತನ ಆಸ್ತಿ ವಿವರ ಪತ್ರ ಸಲ್ಲಿಸಿದ್ದಾರೆ. ಇದರ ಪ್ರಕಾರ ಕಳೆದ ವರ್ಷಕ್ಕೆ ಹೋಲಿಸಿದ್ರೆ ಮೋದಿ ಆಸ್ತಿ 36 ಲಕ್ಷ ರೂಪಾಯಿಯಷ್ಟು ಹೆಚ್ಚಳವಾಗಿದೆ. ಆದ್ರೆ ಗೃಹಸಚಿವ ಅಮಿತ್ ಶಾ ಅವರ ಆಸ್ತಿಯಲ್ಲಿ ಗಣನೀಯ ಇಳಿಕೆಯಾಗಿದೆ.
ರಾಜ್ಯಾದ್ಯಂತ ಸರಳ ದಸರಾ, 100 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ: ಸರ್ಕಾರದ ಮಾರ್ಗಸೂಚಿ...
ನಾಡಹಬ್ಬ ದಸರಾ (ನವರಾತ್ರಿ) ಉತ್ಸವ ಶನಿವಾರದಿಂದ ಅ.26ರವರೆಗೆ 9 ದಿನಗಳ ಕಾಲ ನಡೆಯಲಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಣೆ ಮಾಡುವ ಸಂಬಂಧ ಸರ್ಕಾರವು ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಬ್ರಿಟನ್ ಮುಂದಿನ ಪ್ರಧಾನಿ?...
ಕೊರೋನಾ ಬಳಿಕ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಜನಪ್ರಿಯತೆಗೆ ಭಾರೀ ಪೆಟ್ಟು ಬಿದ್ದಿದೆ. ಆದರೆ ಇದೇ ಅವಧಿಯಲ್ಲಿ ಬೋರಿಸ್ ಸಂಪುಟದಲ್ಲಿ ಹಣಕಾಸು ಸಚಿವರಾಗಿರುವ ಬೆಂಗಳೂರು ಮೂಲದ ಇಸ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಅವರ ಜನಪ್ರಿಯತೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಯುದ್ಧಕ್ಕೆ ಸಜ್ಜಾಗಿರಿ: ಯೋಧರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಕರೆ!...
ಗಡಿಯಲ್ಲಿ ಭಾರತದ ಜೊತೆ ಮತ್ತು ಸಮುದ್ರ ವಲಯದಲ್ಲಿ ಅಮೆರಿಕ ಜೊತೆ ಕಳೆದ ಹಲವು ತಿಂಗಳಿನಿಂದ ಸಮರ ರೀತಿಯ ಸಂಘರ್ಷ ಸನ್ನಿವೇಶ ಸೃಷ್ಟಿಯಾಗಿರುವಾಗಲೇ, ಯೋಧರು ತಮ್ಮ ಎಲ್ಲ ಗಮನ ಹಾಗೂ ಶಕ್ತಿಯನ್ನು ಯುದ್ಧಕ್ಕೆ ಸಜ್ಜಾಗುವುದಕ್ಕೆ ಬಳಸಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿರುವುದು ಸಂಚಲನಕ್ಕೆ ಕಾರಣವಾಗಿದೆ.
ಆರ್‌ಸಿಬಿಗೆ ಸೇಡಿನ ಪಂದ್ಯ, ಪಂಜಾಬ್‌ಗೆ ಗೆಲುವು ಅನಿವಾರ್ಯ: ರೋಚಕ ಫೈಟ್‌ಗೆ ವೇದಿಕೆ ರೆಡಿ!...
IPL 2020 ಟೂರ್ನಿಯಲ್ಲಿ 2ನೇ ಬಾರಿಗೆ ಆರ್‌ಸಿಬಿ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗುತ್ತಿದೆ. ಮೊದಲ ಹೋರಾಟದಲ್ಲಿ ಪಂಜಾಬ್ ವಿರುದ್ಧ ಮುಗ್ಗರಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಇತ್ತ ಪಂಜಾಬ್ ತಂಡಕದ ಪ್ಲೇ ಆಫ್ ಕನಸು ಜೀವಂತವಾಗಲು ಈ ಪಂದ್ಯ ಗೆಲ್ಲಲೇಬೇಕಿದೆ. ಇಷ್ಟೇ ಅಲ್ಲ ಈ ರೋಚಕ ಹೋರಾಟ ಹಲವು ಕುತೂಹಲಕ್ಕೆ ಕಾರಣವಾಗಿದೆ.
ಜೇಮ್ಸ್ ಸಿನಿಮಾದಲ್ಲಿ ಮತ್ತೆ ಒಂದಾಗಲಿದೆ ಪುನೀತ್ - ಪ್ರಿಯಾ ಆನಂದ್ ಜೋಡಿ...
‘ರಾಜಕುಮಾರ’ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ತೆಲುಗಿನ ಪ್ರಿಯಾ ಆನಂದ್ ಮತ್ತೆ ಪುನೀತ್‌ಗೆ ನಾಯಕಿ ಆಗುತ್ತಿದ್ದಾರೆ. ಬಹದ್ದೂರ್ ಚೇತನ್ ನಿರ್ದೇಶನದ ‘ಜೇಮ್ಸ್’ನಲ್ಲಿ ಪ್ರಿಯಾ ಆನಂದ್ ಹೆಜ್ಜೆ ಹಾಕುತ್ತಿದ್ದಾರೆ.
ಕೊರೋನಾ ಅವಧಿಯಲ್ಲಿ 41 ಲಕ್ಷ ಸೈಕಲ್ ಸೇಲ್!...
ಕೊರೋನಾ ವೈರಸ್ ಅಬ್ಬರಕ್ಕೆ ಪಾತಾಳಕ್ಕೆ ಕುಸಿದ ವಿಶ್ವದ ಬಲಿಷ್ಟರಾಷ್ಟ್ರಗಳ ಆರ್ಥಿಕತೆ, ಆರೋಗ್ಯ, ಉದ್ಯಮ ವಲಯಗಳು ಬೆಚ್ಚಿಬಿದ್ದಿವೆ. ಆದರೆ, ಭಾರತದ ಸೈಕಲ್ ಉದ್ಯಮಕ್ಕೆ ಮಾತ್ರ ಕೊರೋನಾ ವೈರಸ್ ಹೊಸ ಆಶಾಕಿರಣದಂತೆ ಗೋಚರವಾಗಿದೆ. ಹೌದು, ಕೊರೋನಾ ವಕ್ಕರಿಸಿದ ಕಳೆದ 5 ತಿಂಗಳ ಅವಧಿಯಲ್ಲೇ ಭಾರತದಲ್ಲಿ ಸೈಕಲ್‌ಗಳ ಮಾರಾಟ ದ್ವಿಗುಣಗೊಂಡಿದೆ.
ಭಾರತದಲ್ಲಿ ಹೊಚ್ಚ ಹೊಸ ಲ್ಯಾಂಡ್‌ರೋವರ್ ಡಿಫೆಂಡರ್ ಕಾರು ಬಿಡುಗಡೆ!...
ಹೊಚ್ಚ ಹೊಸ, ಬಹುನಿರೀಕ್ಷಿತ ಲ್ಯಾಂಡ್‌ರೋವರ್ ಢಿಫೆಂಡರ್ ಕಾರು ಬಿಡುಗಡೆಯಾಗಿದೆ. ಡಿಫೆಂಡರ್ 110 ಹಾಗೂ ಡಿಫೆಂಡರ್ 90 ಎಂಬ ಎರಡು ವೇರಿಯೆಂಟ್ ಕಾರುಗಳು ಬಿಡುಗಡೆಯಾಗಿದೆ.